ETV Bharat / bharat

ಕಿಸಾನ್ ಮೇಳದಲ್ಲಿ 72 ಲೀಟರ್​ ಹಾಲು ನೀಡಿದ ಹರಿಯಾಣದ ಹಸು..!

author img

By

Published : Feb 6, 2023, 10:59 PM IST

Updated : Feb 6, 2023, 11:08 PM IST

ಜಾಗರಾನ್ ಡೈರಿ ಮತ್ತು ಕಿಸಾನ್ ಮೇಳ - 24 ಗಂಟೆಯಲ್ಲಿ 72 ಲೀಟರ್​ ಹಾಲು ನೀಡಿ ದಾಖಲೆ ನಿರ್ಮಿಸಿದ ಹರಿಯಾಣದ ಹಸು.

Kisan Mela in Jagraon
ಕಿಸಾನ್ ಮೇಳದಲ್ಲಿ 72 ಲೀಟರ್​ ಹಾಲು ನೀಡಿದ ಹರಿಯಾಣದ ಹಸು

ಲೂದಿಯಾನ(ಪಂಜಾಬ್​) : ಲೂಧಿಯಾನದಲ್ಲಿ ನಡೆದ ಡೈರಿ ಮತ್ತು ಕಿಸಾನ್ ಮೇಳದಲ್ಲಿ ಹರಿಯಾಣದ ಹಸುವೊಂದು 24 ಗಂಟೆಗಳಲ್ಲಿ 72 ಲೀಟರ್​ ಹಾಗೂ 400 ಮಿಲಿಲೀಟರ್​ ಹಾಲು ನೀಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಲೂಧಿಯಾನದ ಜಾಗರಾನ್‌ನಲ್ಲಿ ನಡೆಯುತ್ತಿರುವ ಡೈರಿ ಮತ್ತು ಕಿಸಾನ್ ಮೇಳದಲ್ಲಿ ಹರಿಯಾಣದ ಹಸುವೊಂದು ವಿನೂತನ ದಾಖಲೆ ಬರೆದಿದೆ. 24 ಗಂಟೆಗಳಲ್ಲಿ 72 ಲೀಟರ್​ 400 ಮಿಲಿ ಲೀಟರ್​ ಹಾಲು ನೀಡುವ ಮೂಲಕ ಹರಿಯಾಣದ ಕುರುಕ್ಷೇತ್ರದ ಹಿಂದೆ ಇದ್ದ ದಾಖಲೆಗಳನ್ನು ಮುರಿದು, ಹೊಸ ದಾಖಲೆ ನಿರ್ಮಿಸಿದೆ.

ಪಿಡಿಎಫ್‌ಎಯಿಂದ ಟ್ರ್ಯಾಕ್ಟರ್ ನೀಡಿ ಗೌರವ ಸಲ್ಲಿಕೆ: ಈ ಹಿಂದೆ 2018ರಲ್ಲಿ ಮತ್ತೊಂದು ಹಸು 70 ಲೀಟರ್​ ಹಾಗೂ 400 ಮಿಲಿ ಲೀಟರ್​ ಹಾಲು ನೀಡಿತ್ತು. ಆದರೆ, ಸದ್ಯ ಈ ಹಸು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ವಿವಿಧ ರಾಜ್ಯಗಳ 30 ಗ್ರಾಮಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಈ ಬಹುಮಾನ ವಿಜೇತ ಹಸುವಿನ ಮಾಲೀಕರಿಗೆ ಭಾರತ ಸರ್ಕಾರ ಮತ್ತು ಪಿಡಿಎಫ್‌ಎಯಿಂದ ಟ್ರ್ಯಾಕ್ಟರ್ ನೀಡಿ ಗೌರವಿಸಲಾಯಿತು.

ಎಚ್ಎಫ್ ಹಸು ಹೊಸ ದಾಖಲೆ: ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ರೈತ ಎಚ್.ಎಫ್ ಹಸು ಹೊಂದಿದ್ದಾರೆ. ಎಚ್ಎಫ್ ಹಸು ಹೊಸ ದಾಖಲೆಯನ್ನು ನಿರ್ಮಿಸಿರುವುದು ನನಗೆ ತುಂಬಾ ಸಂತೋಷವಾಗಿದೆ. ಸ್ಪರ್ಧೆಯಲ್ಲಿ ನಾನು ಬಹುಮಾನ ಗೆದ್ದಿರುವುದು ಇದೇ ಮೊದಲು. ಸರ್ಕಾರ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಬೇಕು. ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚು ಹೆಚ್ಚು ಯುವಕರನ್ನು ಈ ಪೂರಕವಾದ ಉದ್ಯಮದತ್ತ ಆಕರ್ಷಿತರಾಗುತ್ತಾರೆ' ಎಂದು ಪ್ರಶಸ್ತಿ ವಿಜೇತ ರೈತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಹೈನುಗಾರಿಕೆಗೆ ಉತ್ತೇಜನ: ಈ ಮೇಳದಲ್ಲಿ ಭಾಗವಹಿಸಿದ ಭಾರತ ಸರ್ಕಾರದ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ರಾಜೇಶ್ ಕುಮಾರ್ ಮಾತನಾಡಿ, ಪಿಡಿಎಫ್ಎ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ. ಭಾರತ ಸರ್ಕಾರ ಹೈನುಗಾರಿಕೆಗೆ ಉತ್ತೇಜನ ನೀಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಹಲವು ಪರಿಣಾಮಕಾರಿಯಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಜಾಗರಾನ್ ಡೈರಿ ಮತ್ತು ಕಿಸಾನ್ ಮೇಳದ ಸ್ಪರ್ಧೆಗಳಲ್ಲಿ ಭಾವಹಿಸಿ ವಿಜೇತರಾದ ರೈತರಿಗೆ ಸನ್ಮಾನಿಸುತ್ತಿತ್ತಿರುವುದು ಉತ್ತಮ ಕಾರ್ಯ. ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಇಂತಹ ಸ್ಪರ್ಧೆಗಳು ಪ್ರತಿವರ್ಷ ನಡೆಯಲೇಬೇಕು ಎಂದು ಅವರು ಹೇಳಿದರು.

ಈ ನಡುವೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಾಮ್ರಾಟ್ ಸಿಂಗ್ ಮಾತನಾಡಿ, ತಮ್ಮ ಜಮೀನಿನಲ್ಲಿ ಎರಡು ಪಾಳಿಯಲ್ಲಿ 10 ರಿಂದ 15 ಮಂದಿ ಕೆಲಸ ಮಾಡುತ್ತಿದ್ದಾರೆ. ಮುಂಜಾನೆ 4 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹಸುಗಳ ಆರೈಕೆ ಮಾಡುತ್ತೇವೆ. ತಮ್ಮ ಬಳಿ 200 ಎಚ್‌ಎಫ್ ಮತ್ತು ಜರ್ಸಿ ಹಸುಗಳಿವೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಕೊಬ್ಬರಿ ಹೋರಿ 'ಮೈಸೂರು ಹುಲಿ' ಪುಣ್ಯತಿಥಿ: ಇಷ್ಟದ ಆಹಾರ ಸಮರ್ಪಿಸಿ ಪೂಜೆ

Last Updated : Feb 6, 2023, 11:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.