ETV Bharat / bharat

ಹೋಳಿ ವೇಳೆ ಜಪಾನಿ ಮಹಿಳೆಗೆ ಕಿರುಕುಳ: ಬಾಲಾಪರಾಧಿ ಸೇರಿ ದೆಹಲಿಯಲ್ಲಿ ಮೂವರು ಸೆರೆ

author img

By

Published : Mar 12, 2023, 10:05 AM IST

Updated : Mar 12, 2023, 10:25 AM IST

ಹೋಳಿ ಹಬ್ಬದಂದು ಜಪಾನಿ ಮಹಿಳೆಗೆ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಪ್ರಕರಣದಲ್ಲಿ ಭಾಗಿಯಾದ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Holi video
ಹೋಳಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾರ್ಚ್ 8ರಂದು ನಡೆದ ಹೋಳಿ ಹಬ್ಬದ ಸಂಭ್ರಮಾಚರಣೆ ವೇಳೆ ಜಪಾನ್ ದೇಶದ ಯುವತಿಯೊಬ್ಬಳಿಗೆ ಸ್ಥಳೀಯ ಯುವಕರ ತಂಡವೊಂದು ಕಿರುಕುಳ ನೀಡಿದೆ ಎಂಬ ಗಂಭೀರ ಆರೋಪದ ಮೇರೆಗೆ ಓರ್ವ ಬಾಲಾಪರಾಧಿ ಸೇರಿದಂತೆ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಪಹರ್‌ಗಂಜ್ ಪ್ರದೇಶದಲ್ಲಿ ಘಟನೆ ನಡೆದಿತ್ತು. ಈ ಕುರಿತು ಸಂತ್ರಸ್ತೆ ಪೊಲೀಸರಿಗೆ ಯಾವುದೇ ದೂರು ನೀಡಿರಲಿಲ್ಲ.

ಪೊಲೀಸರ ಪ್ರತಿಕ್ರಿಯೆ: ಈ ಘಟನೆಯ ಕುರಿತು ಜಪಾನ್​ ರಾಯಭಾರ ಕಚೇರಿ ಮೂಲಕ ನಮಗೆ ಯಾವುದೇ ಫೋನ್ ಕರೆ ಬಂದಿರಲಿಲ್ಲ. ಆದರೆ ನಾವು ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದೇವೆ. ವೈರಲ್​ ಆಗಿರುವ ವಿಡಿಯೋ ಆಧಾರದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದೇವೆ. ವಿಡಿಯೋದಲ್ಲಿ ಕಂಡುಬರುವಂತೆ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ವೈರಲ್​ ವಿಡಿಯೋದಲ್ಲೇನಿದೆ?: ಯುವಕರ ಗುಂಪೊಂದು ಜಪಾನ್​ ಯುವತಿಯನ್ನು ಹಿಡಿದುಕೊಂಡು "ಹೋಳಿ ಹೈ" ಎಂದು ಹೇಳುತ್ತಾ ಆಕೆಯ ಮೈಮೇಲೆ ಬಣ್ಣ ಬಳಿಯುವುದನ್ನು ಕಾಣಬಹುದು. ಅದರಲ್ಲಿ ಒಬ್ಬ ಆರೋಪಿ, ಯುವತಿಯ ತಲೆಯ ಮೇಲೆ ಮೊಟ್ಟೆ ಒಡೆದಿದ್ದಾನೆ. ಬಳಿಕ ಆಕೆಯನ್ನು ಹಿಡಿದು ಎಳೆದಾಡಿದ್ದಾರೆ. ಅಷ್ಟೇ ಅಲ್ಲ, ಮೈಮುಟ್ಟಿ ಅನುಚಿತವಾಗಿ ವರ್ತಿಸಿದ್ದಾರೆ. ತೀವ್ರ ಕಿರುಕುಳ ತಾಳಲಾರದ ಮಹಿಳೆ ಕೊನೆಯಲ್ಲಿ ಯುವಕನೊಬ್ಬನ ಕಪಾಳಕ್ಕೆ ಬಾರಿಸಿದ್ದಾರೆ. ಬಳಿಕ ಯುವಕರ ಗುಂಪಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ "ಬೈ, ಬೈ" ಎಂದು ಹೇಳುವುದನ್ನು ಕೇಳಬಹುದು. ವಿಡಿಯೋದಲ್ಲಿ ಯುವಕರು ಒಂದೆಡೆ ಸೇರಿ ಬಣ್ಣ ಎರಚಿಕೊಂಡಿರುವುದು ಸೆರೆಯಾಗಿದೆ.

ಇದನ್ನೂ ಓದಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಂಗಪಂಚಮಿ ಸಂಭ್ರಮ: ಕುಣಿದು ಕುಪ್ಪಳಿಸಿದ ಯುವಕ ಯುವತಿಯರು..

ಸ್ಥಳದಲ್ಲೇ ಇದ್ದ ಸ್ಥಳೀಯನೊಬ್ಬ ತನ್ನ ಮೊಬೈಲ್​ ಕ್ಯಾಮರಾದಲ್ಲಿ ಘಟನೆಯ ದೃಶ್ಯವನ್ನು ಸೆರೆ ಹಿಡಿದಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಬ್ಬದ ಆಚರಣೆಯ ಹೆಸರಲ್ಲಿ ಹೆಣ್ಣುಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ ಘಟನೆ ಬಗ್ಗೆ ಟ್ವೀಟ್​ ಮಾಡಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್, "ಹೋಳಿ ಆಚರಣೆ ವೇಳೆ ಇಂತಹ ಘಟನೆ ನಡೆದಿರುವುದು ದುಃಖಕರ ಸಂಗತಿ. ಈ ಸಂಬಂಧ ಮಹಿಳೆ ಎನ್‌ಸಿಡಬ್ಲ್ಯೂಗೂ ದೂರು ನೀಡಬೇಕು" ಎಂದು ಹೇಳಿದ್ದಾರೆ.

ಭಾರತದ ಬಗ್ಗೆ ಪ್ರೀತಿ ತೋರಿಸಿದ ಜಪಾನಿ ಮಹಿಳೆ: "ನಾನು ಭಾರತವನ್ನು ಪ್ರೀತಿಸುತ್ತೇನೆ. ಇದೊಂದು ಅದ್ಭುತ ದೇಶ, ಅನೇಕ ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಭಾರತ ಮತ್ತು ಜಪಾನ್ ಒಳ್ಳೆಯ ಗೆಳೆಯರು(ತೊಮಡಚಿ- ಜಪಾನಿ ಭಾಷೆಯಲ್ಲಿ ಒಳ್ಳೆಯ ಗೆಳೆಯರು ಎಂದರ್ಥ)" ಎಂದು ಟ್ವೀಟ್‌ ಮಾಡಿದ್ದಾರೆ. ಮೊದಲು ಘಟನೆಯ ವಿಡಿಯೋ ಸಮೇತ ಟ್ವೀಟ್ ಮಾಡಿರುವ ಮಹಿಳೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ತೆಗೆದು ಹಾಕಿದ್ದರು.

ಇದನ್ನೂ ಓದಿ: ಬಾಗಲಕೋಟೆ: ಮುಳುಗಡೆ ನಗರಿಯಲ್ಲಿ ಹೋಳಿ ರಂಗು

ಹೋಳಿ ಹಬ್ಬದ ಬಗ್ಗೆ..: ಹೋಳಿ ಭಾರತದ ಅನೇಕ ಭಾಗಗಳಲ್ಲಿ ಆಚರಿಸುವ ಬಣ್ಣಗಳ ಹಬ್ಬ. ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಖುಷಿ ಪಡುತ್ತಾರೆ. ಬುಧವಾರ ದೆಹಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಅದ್ಧೂರಿಯಾಗಿ ಹೋಳಿ ಆಚರಿಸಲಾಗಿದೆ. ಆದರೆ, ಅನೇಕ ಸಂದರ್ಭದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಮಹಿಳೆಯರ ಸುರಕ್ಷತೆ ಕುರಿತು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುವ ಅಗತ್ಯವಿದೆ.

Last Updated : Mar 12, 2023, 10:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.