ಹಾಪುರ(ಉತ್ತರಪ್ರದೇಶ): ಸ್ಥಳೀಯ ಪೊಲೀಸ್ ಠಾಣೆ ಗ್ರಾಮೀಣ ವ್ಯಾಪ್ತಿ ಮೊಹಲ್ಲಾ ಫೂಲಗರ್ಹಿ ಕೋಟ್ಲಾ ಸಾದತ್ ಪ್ರದೇಶದಲ್ಲಿ ಮಂಗಳವಾರ 6 ವರ್ಷದ ಮಗು ಆಟವಾಡುತ್ತಿದ್ದಾಗ, ಸುಮಾರು 40 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದೆ. ಬೋರ್ವೆಲ್ ಬಿದ್ದಿರುವ ಮಹುವನ್ನು ಮೌ ಎಂದು ಗುರುತಿಸಲಾಗಿದೆ. ಮಗುವಿನ ತಂದೆ ಮೊಹ್ಸಿನ್, ತಾಯಿ ಪೋಷಕರು ಭಯಭೀತರಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಅಳುವಿನ ಸದ್ದು ಬೋರ್‌ವೆಲ್‌ನಿಂದ ಕೇಳಿ ಬರುತ್ತಿದ್ದು, ಸುತ್ತಲಿನ ಜನರು ಆಡಳಿತಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಎನ್‌ಡಿಆರ್‌ಎಫ್ ತಂಡವೂ ಗಾಜಿಯಾಬಾದ್‌ನಿಂದ ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
ಆಂಬ್ಯುಲೆನ್ಸ್ ಮತ್ತು ವೈದ್ಯರ ತಂಡವೂ ಸ್ಥಳದಲ್ಲಿದೆ.ಮಗುವಿಗೆ ಆಮ್ಲಜನಕವನ್ನು ನೀಡಲಾಗುತ್ತಿದೆ. ಪುರಸಭೆ ವತಿಯಿಂದ 35 ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಲಾಗಿದ್ದು, ಬೋರ್ವೆಲ್ ಕಳೆದ 10 ವರ್ಷಗಳಿಂದ ಬಳಕೆಯಾಗದೇ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುರಸಭೆ ಆಡಳಿತವು ನಿರುಪಯುಕ್ತವಾಗಿರುವ ಬೋರ್ವೆಲ್ ಮುಚ್ಚದೇ ಹಾಗೇ ಬಿಟ್ಟಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ,ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಥಳದಲ್ಲಿ ಠಿಕಾಣಿ ಹೂಡಿದ ಜಿಲ್ಲಾಡಳಿತ:ಮಗುವಿನ ರಕ್ಷಣೆಗೆ ಮಿತಿಮೀರಿ ಶ್ರಮಿಸುತ್ತಿರುವ ಜಿಲ್ಲಾಡಳಿತವೂ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಗ್ನಿಶಾಮಕ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ಹೆಚ್ಚುವರಿ ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ.
ಹಿಂದಿನ ಯಶಸ್ವಿ ಕಾರ್ಯಾಚರಣೆಗಳು ಹೀಗಿವೆ
ಆಗ್ರಾ(ಉತ್ತರ ಪ್ರದೇಶ) ಜಿಲ್ಲೆಯ ತಹಸಿಲ್ ಫತೇಬಾದ್ ವ್ಯಾಪ್ತಿಯ ಧರಿಯೈ ಗ್ರಾಮದಲ್ಲಿ ಆಟವಾಡುತ್ತಿದ್ದಾಗ 4 ವರ್ಷದ ಬಾಲಕ ಶಿವ ಎಂಬಾತ ತೆರೆದ ಕೊಳಬೆ ಬಾವಿಗೆ ಬಿದ್ದಿದ್ದ ಬಾಲಕ ಸಾವು ಗೆದ್ದು ಬಂದಿದ್ದ. ಅಗ್ನಿಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಕೈಗೊಂಡ ರಕ್ಷಣಾ ಕಾರ್ಯದಲ್ಲಿ ಯಶಸ್ವಿಯಾಗಿತ್ತು.
ಜಂಜಗೀರ್ ಚಂಪಾ: ಛತ್ತೀಸ್ಗಢ್ದ ಜಂಜಗೀರ್ ಚಂಪಾದ ಪಿಹ್ರಿದ್ ಗ್ರಾಮದಲ್ಲಿ ಕೆಲವು ತಿಂಗಳ ಹಿಂದೆ ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕ ರಾಹುಲ್ ಸಾಹು ಹೊರತೆಗೆಯುವಲ್ಲಿ ಎನ್‌ಡಿಆರ್‌ಎಫ್ ತಂಡದ ಕಾರ್ಯಾಚರಣೆ ಯಶಸ್ವಿಯಾಗಿತ್ತು. ರಕ್ಷಣಾ ತಂಡವು ರಾಹುಲ್ ಸಾಹುವನ್ನು ಬೋರ್‌ವೆಲ್‌ನಿಂದ ಹೊರಗೆ ತೆಗೆದಾಗ, ರಾಹುಲ್ ನಿತ್ರಾಣಗೊಂಡಿದ್ದನು. ತಕ್ಷಣ ರಾಹುಲ್ ಸಾಹು ಬಾಲಕನನ್ನು ಬಿಲಾಸ್‌ಪುರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ರಾಹುಲ್ ಬೇಗ ಚೇತರಿಕೆಗೊಂಡಿದ್ದನು.
ಮಗು ಕೊಳವೆ ಬಾವಿಗೆ ಬಿದ್ದಿದ್ದು ಹೀಗೆ: ಪಿಹ್ರಿದ್ ಗ್ರಾಮದ 12 ವರ್ಷದ ರಾಹುಲ್ ಸಾಹು ಮಧ್ಯಾಹ್ನ ಎಂದಿನಂತೆ ಮನೆಯ ಹಿಂಬದಿ ಆಟವಾಡುತ್ತಿದ್ದ. ಮನೆಯವರು ಹುಡುಕಿಕೊಂಡು ಬಂದಾಗ ರಾಹುಲ್ ಅಳುವ ಸದ್ದು ಬರುತ್ತಿತ್ತು. ಕೊಳವೆ ಬಾವಿ ಬಳಿ ಹೋಗಿ ನೋಡಿದಾಗ ಒಳಗಿನಿಂದ ಸದ್ದು ಬರುತ್ತಿರುವುದು ಕಂಡು ಬಂದಿತು. ತಕ್ಷಣ ಪೋಷಕರು 112ಕ್ಕೆ ಫೋನ್ ಮಾಡಿ ಮಾಹಿತಿ ನೀಡಿದ್ದರು.
101 ಗಂಟೆಗಳ ಕಾಲ ರಕ್ಷಣಾ ಕಾರ್ಯ: ಪಿಹ್ರಿದ್ ಗ್ರಾಮದಲ್ಲಿ ರಾಹುಲ್ ಸಾಹು ಬೋರ್‌ವೆಲ್‌ಗೆ ಬಿದ್ದಿದ್ದನು. 60 ಅಡಿ ಕೆಳಗಿರುವ ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಿರುವ ರಾಹುಲ್ ಅನ್ನು ಹೊರ ತರಲು 101 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆದಿತ್ತು. ಎನ್‌ಡಿಆರ್‌ಎಫ್ ತಂಡ ಕೊನೆಗೂ ರಾಹುಲ್ನನ್ನು ತಲುಪಿ ಅವನನ್ನು ಜೀವಂತವಾಗಿ ಹೊರ ಕರೆ ತಂದರು. ರಕ್ಷಣಾ ಕಾರ್ಯಾಚರಣೆ ವೇಳೆ ರಾಹುಲ್ಗಾಗಿ ಸುರಂಗ ನಿರ್ಮಿಸುವ ಕೆಲಸ ಮಾಡುತ್ತಿದ್ದರು. 101 ಗಂಟೆಗಳ ಕಾಲ ಸತತವಾಗಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿತ್ತು. ರಾಹುಲ್ ನನ್ನು ಬದುಕಿಸಿರುವ ಪ್ರತಿಯೊಬ್ಬರಿಗೂ ಕುಟುಂಬ ಕೃತಜ್ಞತೆ ಸಲ್ಲಿಸಿತ್ತು.
ಇದನ್ನೂಓದಿ:ಮಂಗಳೂರು ಶಾಲೆಗೆ ಹೊರಡುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು..