ನವದೆಹಲಿ: ಭಾರತದ ಖ್ಯಾತ ಮಹಿಳಾ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎರಡು ವರ್ಷಗಳ ಕಾಲ ನಿಷೇಧ ಶಿಕ್ಷೆ ಅನುಭವಿಸಬೇಕಿದೆ. ಕಳೆದ ಮಾರ್ಚ್ನಲ್ಲಿ ಇಂಟರ್ನ್ಯಾಷನಲ್ ಜಿಮ್ನಾಸ್ಟ್ ಫೆಡರೇಶನ್ ಈ ಆಟಗಾರ್ತಿಯ ಸ್ಥಾನಮಾನವನ್ನು ಅಮಾನತುಗೊಳಿಸಿತ್ತು. ಅಮಾನತು ಶಿಕ್ಷೆ ವಿವಾಕ್ಕೂ ಎಡೆಮಾಡಿಕೊಟ್ಟಿತ್ತು.
ವಾಡಾದ ನಿಯಮಗಳ ಉಲ್ಲಂಘನೆ: ವಿಶ್ವ ಉದ್ದೀಪನ ಮದ್ದು ತಡೆ ಏಜೆನ್ಸಿ (ವಾಡಾ) ಮಾರ್ಗಸೂಚಿಗಳನ್ವಯ, ಸ್ಪರ್ಧಿಯ ಬಗ್ಗೆ ನಿಖರ ಮಾಹಿತಿ ನೀಡುವ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅವರನ್ನು ಆಟದಿಂದ ನಿಷೇಧಿಸಲಾಗಿದೆ. ಜಿಮ್ನಾಸ್ಟಿಕ್ ಫೆಡರೇಶನ್ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಈ ವಿಚಾರದಲ್ಲಿ ಮೌನವಹಿಸಿದೆ.
ಕೋಚ್ ವಿರುದ್ಧ ಆರೋಪ: ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ನಾಡಾ ಕೋಚ್ ಬಿಸ್ವೇಶ್ವರ್ ನಂದಿ ಅವರು ದೀಪಾಗೆ ಬಾಲ್ಯದಿಂದಲೂ ತರಬೇತಿ ನೀಡುತ್ತಿದ್ದಾರೆ. ನಂದಿ ಅವರಿಂದಾಗಿಯೇ ಪದ್ಮಶ್ರೀ, ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ದೀಪಾ ಅವರು ವಿಶ್ವ ಉದ್ದೀಪನ ಮದ್ದು ತಡೆ ಏಜೆನ್ಸಿಯ ಮುಂದೆ ಅವಮಾನ ಅನುಭವಿಸಬೇಕಾಯಿತು ಎಂದು ಆರೋಪಿಸಲಾಗಿದೆ.
ದೀಪಾ ಕರ್ಮಾಕರ್ ಕೂಡ ಹಲವು ರೀತಿಯ ಗಾಯಗಳಿಂದ ಬಳಲುತ್ತಿದ್ದಾರೆ. 2017ರಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಕೂಡ ಆಗಿತ್ತು. ಗಾಯದಿಂದಾಗಿಯೇ ದೀಪಾ 2019ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ:ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ ಗೆದ್ದ ನಿಖತ್ ಜರೀನ್