ETV Bharat / bharat

ನಾಳೆ ಜ್ಞಾನವಾಪಿ ಮಸೀದಿ ಅಂತಿಮ ತೀರ್ಪು: ಮಸೀದಿಯಲ್ಲೇನಿತ್ತು ಎಂಬುದರ ಬಗ್ಗೆ 5 ದಿನ ಸಾಕ್ಷ್ಯಗಳ ವಿಶೇಷ ಪ್ರದರ್ಶನ

ನಾಳೆ ವಾರಾಣಸಿಯ ಜ್ಞಾನವಾಪಿ ಮಸೀದಿಯ ಅಂತಿಮ ತೀರ್ಪು ಹೊರಬೀಳಲಿದ್ದು, ತದನಂತರ ಯಾವುದೇ ಘಟನೆಗಳು ನಡೆಯದಿರಲು ಈ ಕುರಿತ ಸಾಕ್ಷ್ಯಗಳ ಬಗ್ಗೆ ಪ್ರದರ್ಶನ ಏರ್ಪಡಿಸಲಾಗಿದೆ.

ನಾಳೆ ಜ್ಞಾನವಾಪಿ ಮಸೀದಿ ಅಂತಿಮ ತೀರ್ಪು
ನಾಳೆ ಜ್ಞಾನವಾಪಿ ಮಸೀದಿ ಅಂತಿಮ ತೀರ್ಪು
author img

By

Published : Aug 2, 2023, 10:25 AM IST

ವಾರಾಣಸಿ: ಹಿಂದು ದೇವಾಲಯವೋ, ಮಸೀದಿಯೋ ಎಂಬ ಜಿಜ್ಞಾಸೆ ಮೂಡಿಸಿರುವ ಜ್ಞಾನವಾಪಿ ಪ್ರಕರಣದ ಅಂತಿಮ ತೀರ್ಪನ್ನು ಆಗಸ್ಟ್​ 3 ರಂದು ಅಲಹಾಬಾದ್​ ಹೈಕೋರ್ಟ್​ ನೀಡಲಿದ್ದು, ಇದಕ್ಕೂ ಮೊದಲು ಅಲ್ಲಿನ ಸತ್ಯಾಸತ್ಯತೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.

ಆಗಸ್ಟ್ 1ರಿಂದ ಆಗಸ್ಟ್ 5ರವರೆಗೆ ನಡೆಯುವ ವಸ್ತು ಪ್ರದರ್ಶನದಲ್ಲಿ ಜ್ಞಾನವಾಪಿ ಮಸೀದಿಯ ಒಳ ಮತ್ತು ಹೊರಗಿನ ಪ್ರದೇಶದಲ್ಲಿ ಸಿಕ್ಕ ಕುರುಹುಗಳು ಮತ್ತು ಚಿತ್ರಗಳನ್ನು 65 ದೊಡ್ಡ ಫಲಕಗಳಲ್ಲಿ ಅಳವಡಿಸಿ ಜನರಲ್ಲಿ ಜ್ಞಾನವಾಪಿ ಬಗೆಗಿನ ವಾಸ್ತವವನ್ನು ಹೇಳುವ ಕೆಲಸ ಮಾಡಲಾಗುತ್ತಿದೆ. ಕೋರ್ಟ್​ ರಚಿಸಿದ ಸಮಿತಿ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ ಸಾಕ್ಷ್ಯ, ಫೋಟೋಗಳು ಇವಾಗಿವೆ.

ಜ್ಞಾನವಾಪಿ ಮಸೀದಿಯ ತಮಗೆ ಸೇರಿದ್ದು ಎಂದು ಒತ್ತಾಯಿಸಿ ಮುಸ್ಲಿಂ ಪರ ಫಿರ್ಯಾದಿದಾರರು, ಹಿಂದೂ ಅರ್ಜಿಕಾರರು ತಮ್ಮ ತಮ್ಮ ಸಾಕ್ಷಿ ತೋರಿಸಲು ತಯಾರಿ ಆರಂಭಿಸಿದ್ದಾರೆ. ನಾಳೆ ಬರುವ ಅಂತಿಮ ತೀರ್ಪಿನ ಬಳಿಕ ಯಾವುದೇ ಸಮುದಾಯ ಸಂಘರ್ಷಕ್ಕೆ ಇಳಿಯಬಾರದು ಎಂಬ ಕಾರಣಕ್ಕಾಗಿ ಈ ಪ್ರದರ್ಶನ ನಡೆಸಲಾಗುತ್ತಿದೆ.

5 ದಿನಗಳ ಕಾಲ ಪ್ರದರ್ಶನ : ಆಗಸ್ಟ್ 3 ರ ತೀರ್ಪಿಗೂ ಮುನ್ನ ಆದಿಮಹಾದೇವ ಕಾಶಿ ಧರ್ಮಾಲಯ ಮುಕ್ತಿ ನ್ಯಾಸ್ ಅವರು ಭಾರತೀಯ ಶಿಕ್ಷಾ ಮಂದಿರದಲ್ಲಿ 'ಧರ್ಮ ರಕ್ಷಣೆ' ಹೆಸರಿನಲ್ಲಿ ಪ್ರದರ್ಶನ ಪ್ರಾರಂಭಿಸಿದ್ದಾರೆ. 5 ದಿನಗಳ ಕಾಲ ನಡೆಯುವ ಈ ಪ್ರದರ್ಶನವನ್ನು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಸಲಾಗುತ್ತದೆ. ಇಲ್ಲಿ ಮಸೀದಿ ಕುರಿತ ವಿಶೇಷ ಕಿರುಪುಸ್ತಕವನ್ನೂ ಸಿದ್ಧಪಡಿಸಿ ಜನರಿಗೆ ನೀಡಲಾಗುತ್ತಿದೆ. ಇದರಲ್ಲಿ ಜ್ಞಾನವಾಪಿಯೊಳಗಿನ ಚಿತ್ರಗಳನ್ನೆಲ್ಲ ಒಟ್ಟುಗೂಡಿಸಿ ಒಳಗಿನ ವಾಸ್ತವವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಟ್ರಸ್ಟ್‌ನ ರಾಮ್ ಪ್ರಸಾದ್ ಸಿಂಗ್, ಕಳೆದ ವರ್ಷ ಜ್ಞಾನವಾಪಿ ಮಸೀದಿ ಪ್ರದೇಶದಲ್ಲಿ ಹೈಕೋರ್ಟ್​ ನೇಮಿಸಿದ ಸಮಿತಿಯು ಸಂಗ್ರಹಿಸಿದ 100 ಕ್ಕೂ ಹೆಚ್ಚು ಫೋಟೋಗಳ ಜೊತೆಗೆ, ವಿವಿಧ ಪುಸ್ತಕಗಳು ಮತ್ತು ವಿವಿಧ ಮೂಲಗಳಿಂದ ಸಂಗ್ರಹಿಸಲಾದ 160 ಕ್ಕೂ ಅಧಿಕ ಛಾಯಾಚಿತ್ರ ಸಾಕ್ಷ್ಯಗಳನ್ನು ಪ್ರದರ್ಶಿಸಲಾಗುತ್ತಿದೆ. ಇಲ್ಲಿರುವ ಯಾವುದೇ ಸಾಕ್ಷ್ಯಗಳು ನಿಖರವಾಗಿವೆ ಎಂದು ಅವರು ತಿಳಿಸಿದರು.

ಮಸೀದಿಯಲ್ಲಿ ದೇಗುಲ ಕುರುಹುಗಳು: ಪ್ರದರ್ಶನದಲ್ಲಿ ಇಡಲಾದ ಚಿತ್ರಗಳಲ್ಲಿ ದೇವಾಲಯದ ಧ್ವಂಸ, ಗಂಗಾ ಮಾತೆಯ ಮೊಸಳೆ ಪ್ರತಿಮೆ, ಮುರಿದ ಗೋಪುರಗಳು ಸೇರಿದಂತೆ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲ ಪುರಾವೆಗಳು ಇಲ್ಲಿವೆ. ಇವುಗಳನ್ನು ಯಾವುದೇ ವ್ಯಕ್ತಿ, ಯಂತ್ರಗಳ ಸಹಾಯವಿಲ್ಲದೇ, ನೋಡಬಹುದು. ಇವುಗಳಲ್ಲಿ ಹಲವು ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಬಹಿರಂಗಗೊಳಿಸಲಾಗಿದೆ.

ಹಿಂದೂ ಧರ್ಮದ ಸಂಕೇತಗಳಾದ ತ್ರಿಶೂಲ, ಸ್ವಸ್ತಿಕ್​, ಗಂಟೆ, ಘರಿಯಾಲ್ ಮತ್ತು ಜ್ಞಾನವಾಪಿ ಸಂಕೀರ್ಣದ ಗೋಡೆಗಳ ಮೇಲೆ ಕೆತ್ತಲಾದ ಹೂವುಗಳು ಮತ್ತು ಮುರಿದ ಶಿಖರದ ಭಾಗಗಳು, ವಿಗ್ರಹಗಳು ಇಲ್ಲಿಯ ವಾಸ್ತವ ಏನೆಂಬುದನ್ನು ಸಾರುತ್ತವೆ ಎಂದು ಅವರು ಹೇಳಿದರು.

ಇದೇ ಕಾರಣಕ್ಕಾಗ ಬೃಹತ್ ಜನ ಜಾಗೃತಿ ಅಭಿಯಾನ ನಡೆಸಲಿದ್ದೇವೆ. ಇದನ್ನೀಗ ವಾರಾಣಸಿಯಿಂದ ಪ್ರಾರಂಭಿಸಲಾಗಿದೆ. ಶೀಘ್ರವೇ ಈ ಪ್ರದರ್ಶನವನ್ನು ಲಖನೌ, ದೆಹಲಿ, ಕೋಲ್ಕತ್ತಾ ಮತ್ತು ಇತರ ಮಹಾನಗರಗಳಲ್ಲಿ ಆಯೋಜಿಸಲಾಗುವುದು. ಮುಂದಿನ ವರ್ಷ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಾಘಮೇಳದಲ್ಲೂ ಈ ಪ್ರದರ್ಶನವನ್ನು ನಡೆಸಲಾಗುವುದು. 2025 ರ ಕುಂಭಮೇಳ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಲ್ಲೂ ಪ್ರದರ್ಶಿಸಿ ಜನರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಸರ್ವೇಗೆ ತಡೆ ನೀಡಿದ್ದ ಕೋರ್ಟ್​: ಜ್ಞಾನವಾಪಿ ಮಸೀದಿಯನ್ನು ಸರ್ವೇ ಮಾಡಲು ಕೋರಿ ವಾರಾಣಸಿ ಜಿಲ್ಲಾ ಕೋರ್ಟ್​ಗೆ ಸಲ್ಲಿಸಲಾಗಿದ್ದ ಅರ್ಜಿಗೆ ಕೋರ್ಟ್​ ಸಮ್ಮತಿಸಿತ್ತು. ಅದಾಗಿ ಕೆಲ ದಿನಗಳ ಹಿಂದೆ ಸರ್ವೇ ಕಾರ್ಯ ಕೂಡ ಆರಂಭವಾಗಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಮಸೀದಿ ಸಮಿತಿ ಸಮೀಕ್ಷೆಗೆ ತಡೆ ತಂದಿತ್ತು.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ವಿಸ್ತರಣೆ: ವಾರಾಣಸಿಯಿಂದ ತೆರಳಿದ ಎಎಸ್​ಐ ತಂಡಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.