ಕೃಷ್ಣ(ಆಂಧ್ರಪ್ರದೇಶ) : ಕೋಲ್ಕತ್ತಾದಿಂದ ಕೃಷ್ಣದ ವುಯೂರು ಪಟ್ಟಣಕ್ಕೆ ಸಾಗಿಸುತ್ತಿದ್ದ 10.3 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾವನ್ನು ಆಂಧ್ರಪ್ರದೇಶ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಗುಟ್ಕಾ ತುಂಬಿದ್ದ ಲಾರಿ ಪಮರು ತಲುಪಿದಾಗ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಗುಟ್ಕಾದೊಂದಿಗೆ 2 ಕೆಜಿ ಗಾಂಜಾ, 3 ಮೊಬೈಲ್, ಲಾರಿ ಮತ್ತು ಚಾಲಕ ಕಾಂತರಾವ್ನನ್ನು ವಶಕ್ಕೆ ಪಡೆಯಲಾಗಿದೆ.
ಈ ಗುಟ್ಕಾವನ್ನು ಒಡಿಶಾದ ಬೆರ್ಹಾಂಪುರದ ಗಣೇಶ್ ಎಂಬಾತ ಲಾರಿಯಲ್ಲಿ ತುಂಬಿಸಿದ್ದಾನೆ ಎಂಬ ಆರೋಪವಿದೆ. ಈ ಹಿನ್ನೆಲೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.