ETV Bharat / bharat

ಗುರ್ಮೀತ್ ರಾಮ್ ರಹೀಮ್​​ಗೆ ಪೆರೋಲ್.. ಬಾಗ್​ಪತ್​ನ ಆಶ್ರಮದಲ್ಲಿ ಉಳಿಯಲಿರುವ ಸ್ವಯಂ ಘೋಷಿತ ದೇವಮಾನವ - Dera Sacha Sauda chief

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ ಪೆರೋಲ್ ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

Gurmeet Ram rahim got one month  parole
ಗುರ್ಮೀತ್ ರಾಮ್ ರಹೀಮ್​​ಗೆ ಪೆರೋಲ್
author img

By

Published : Jun 17, 2022, 1:21 PM IST

ಚಂಡೀಗಢ: ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ ಪೆರೋಲ್ ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಮಾಹಿತಿ ಪ್ರಕಾರ, ಗುರ್ಮೀತ್ ರಾಮ್ ರಹೀಮ್​ಗೆ ಒಂದು ತಿಂಗಳ ಪೆರೋಲ್ ನೀಡಲಾಗಿದೆ. ಪೆರೋಲ್ ಸಮಯದಲ್ಲಿ ಗುರ್ಮೀತ್ ರಾಮ್ ರಹೀಮ್ ಉತ್ತರ ಪ್ರದೇಶದ ಬಾಗ್​ಪತ್​ನ ಆಶ್ರಮದಲ್ಲಿ ಉಳಿಯಲಿದ್ದಾರೆ.

ಇಬ್ಬರು ಸನ್ಯಾಸಿನಿಯರ ಮೇಲೆ ಅತ್ಯಾಚಾರವೆಸಗಿ ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ರಾಮ್ ರಹೀಮ್ ಒಂದು ತಿಂಗಳ ಪೆರೋಲ್ ಕೋರಿದ್ದರು. ಈ ಸಂಬಂಧ ನ್ಯಾಯಾಲಯವು ಆಡಳಿತದಿಂದ ವರದಿ ಕೇಳಿತ್ತು. ರಾಮ್ ರಹೀಮ್ ವಿರುದ್ಧ ಬಾಗ್​ಪತ್​ನಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಎಂದು ವರದಿ ಹೇಳಿದೆ. ಈ ಹಿನ್ನೆಲೆ ನ್ಯಾಯಾಲಯವು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ.

ಹಲವು ಬಾರಿ ಪೆರೋಲ್: ಗುರ್ಮೀತ್ ರಾಮ್ ರಹೀಮ್​ಗೆ ಈವರೆಗೆ ಹಲವು ಬಾರಿ ಪೆರೋಲ್ ಸಿಕ್ಕಿದೆ. ಕಳೆದ ವರ್ಷ ಮೇ 12ರಂದು ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ರಾಮ್ ರಹೀಮ್ ತಮ್ಮ ಅನಾರೋಗ್ಯ ಪೀಡಿತ ತಾಯಿಯನ್ನು ಗುರುಗ್ರಾಮ್‌ನಲ್ಲಿ ಭೇಟಿಯಾಗಿದ್ದರು. ನಂತರ ಜೂನ್ 2021ರಲ್ಲಿ ರಾಮ್ ರಹೀಮ್ ಅವರನ್ನು ಮತ್ತೆ ಪಿಜಿಐಎಂಎಸ್​ಗೆ ಕರೆತರಲಾಯಿತು. ಬಳಿಕ ಅವರನ್ನು ಚಿಕಿತ್ಸೆಗಾಗಿ ಜೂನ್ 6ರಂದು ಗುರುಗ್ರಾಮ್‌ನ ಮೇದಾಂತ ಮೆಡಿಸಿಟಿಗೆ ದಾಖಲಿಸಲಾಗಿತ್ತು.

ಪ್ರಕರಣ: ಇಬ್ಬರು ಸನ್ಯಾಸಿನಿಯರ ಮೇಲೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರನ್ನು 2017ರ ಆಗಸ್ಟ್ 25ರಂದು ರೋಹ್ಟಕ್‌ನ ಸುನಾರಿಯಾ ಜೈಲಿಗೆ ಕರೆತರಲಾಗಿತ್ತು. ಪಂಚಕುಲದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು. ನಂತರ ಅವರನ್ನು ವಿಮಾನದಲ್ಲಿ ಸುನಾರಿಯಾ ಜೈಲಿಗೆ ಕರೆದೊಯ್ಯಲಾಗಿತ್ತು. ಆಗಸ್ಟ್ 28 ರಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ಇಬ್ಬರು ಸನ್ಯಾಸಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಮ್ ರಹೀಮ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು.

ಇದನ್ನೂ ಓದಿ: 6 ತಿಂಗಳ ಹಿಂದೆ ಅಪಹರಣಕ್ಕೊಳಗಾದ ಬಾಲಕನನ್ನು ರಕ್ಷಿಸಿದ ಬಿಯಾಸ್​ ಪೊಲೀಸರು

2019ರ ಜನವರಿಯಲ್ಲಿ, ವಿಶೇಷ ಸಿಬಿಐ ನ್ಯಾಯಾಲಯವು ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣದಲ್ಲಿ ರಾಮ್ ರಹೀಮ್ ದೋಷಿ ಎಂದು ಘೋಷಿಸಿತು. ಈ ಪ್ರಕರಣದಲ್ಲಿ ರಾಮ್ ರಹೀಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅಕ್ಟೋಬರ್ 2021ರಲ್ಲಿ, ಡೇರಾ ಮಾಜಿ ನಿರ್ವಾಹಕ ರಂಜಿತ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಕೂಡ ರಾಮ್ ರಹೀಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.