ETV Bharat / bharat

ಯುವ ವೈದ್ಯರ ಹೊಸ ಹೆಜ್ಜೆ: ಉಚಿತ ಸಹಾಯವಾಣಿ ಆರಂಭಿಸಿ ಜನರಿಗೆ ಸೇವೆ

ಯುವಕರು ಇತ್ತೀಚೆಗೆ ಜಿಎಂಇಆರ್​ಎಸ್ ಗಾಂಧಿನಗರದಿಂದ ಉತ್ತೀರ್ಣರಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಸಹಾಯವಾಣಿ ಮೂಲಕ ನಿತ್ಯ 35 ರಿಂದ 40 ಕರೆಗಳನ್ನು ಸ್ವೀಕರಿಸಿ ಜನರಿಗೆ ಕೊರೊನಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

author img

By

Published : May 11, 2021, 3:25 PM IST

Gujarat: Young doctors launch free Covid helpline

ಅಹಮದಾಬಾದ್: ಗಾಂಧಿನಗರದ ಜಿಎಂಇಆರ್​ಎಸ್ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಮುಗಿಸಿದ ಹದಿನಾರು ವಿದ್ಯಾರ್ಥಿಗಳು ಕೊರೊನಾ ಸಂಬಂಧ ಉಚಿತ ಸಹಾಯವಾಣಿ ಆರಂಭಿಸಿದ್ದಾರೆ.

ಜನರು ಕೋವಿಡ್ -19 ಬಗ್ಗೆ ಯಾವುದೇ ಮಾಹಿತಿಯನ್ನು ಕರೆ ಮಾಡುವ ಮೂಲಕ ಪಡೆಯಬಹುದಾಗಿದೆ. ನಿತ್ಯ ಒಬ್ಬರು 35 ರಿಂದ 40 ಕರೆಗಳನ್ನು ಸ್ವೀಕರಿಸಿ ಮಾಹಿತಿ ನೀಡಲು ಮುಂದಾಗಿದ್ದಾರೆ.

ಈ ಎಲ್ಲ ಯುವಕರು ಇತ್ತೀಚೆಗೆ ಜಿಎಂಇಆರ್​ಎಸ್ ಗಾಂಧಿನಗರದಿಂದ ಉತ್ತೀರ್ಣರಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಸುರೇಂದ್ರನಗರದಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಮತ್ತೆ ಕೆಲವರು ಆನಂದ್‌ನ ಪಿಎಚ್‌ಸಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಇದರೊಂದಿಗೆ ತಲಾ ನಾಲ್ಕು ಸ್ನೇಹಿತರ 4 ತಂಡಗಳನ್ನು ರಚಿಸಿದ್ದಾರೆ ಮತ್ತು ಒಟ್ಟು 16 ಸಹಾಯವಾಣಿಗಳನ್ನು ಪ್ರಾರಂಭಿಸಿದ್ದಾರೆ.

ಸಹಾಯವಾಣಿಗಳನ್ನು ನಿರ್ವಹಿಸಲು ನಾಲ್ಕು ತಂಡಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಈ ಸಹಾಯವಾಣಿ ಸಂಖ್ಯೆಗಳನ್ನು ಮಧ್ಯಾಹ್ನ 12 ಗಂಟೆಯ ನಂತರವೂ ಸಂಪರ್ಕಿಸಬಹುದಾಗಿದೆಯಂತೆ. ಮುಖ್ಯವಾಗಿ, ಇದು ಎನ್‌ಜಿಒ ಉಪಕ್ರಮವಾಗಿರುವುದರಿಂದ, ಸಹಾಯವಾಣಿ ಮುಖಾಂತರ ಕೊರೊನಾ ಸಂಬಂಧಿಸಿದ ಮಾರ್ಗದರ್ಶನವನ್ನು ಮಾತ್ರ ಪಡೆಯಬಹುದುದಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.