ಜೈಪುರ: ಮೋರ್ಬಿ ಸೇತುವೆ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಕೆಲವು ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಆರೋಪದಡಿ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಪೊಲೀಸರು ಆತನ ಬಂಧಿಸಲು ಬಹಳ ದಿನಗಳಿಂದ ಶೋಧ ನಡೆಸಿದ್ದರು. ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ತಡರಾತ್ರಿ ಸಾಕೇತ್ ಗೋಖಲೆ ಅವರನ್ನು ಬಂಧಿಸಿ, ಗುಜರಾತ್ ಅಹಮದಾಬಾದ್ಗೆ ಕರೆದೊಯ್ದರು.
ಸಾಕೇತ್ ಬಂಧಿಸಿದ್ದು ಹೇಗೆ ?:ಆರೋಪಿ ಸಾಕೇತ್ ಗೋಖಲೆ ದೆಹಲಿಯಿಂದ ಜೈಪುರ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿರುವ ಮಾಹಿತಿ ಅರಿತ ಗುಜರಾತ್ ಪೊಲೀಸರು, ಜೈಪುರ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಾಕೇತ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಜೈಪುರ ಪೊಲೀಸ್ರ ಸಹಾಯ ಕೇಳಿದ್ದಾರೆ. ಸಾಕೇತ್ ಗೋಖಲೆ ಬಂದಿಳಿಯುತ್ತಿದ್ದಂತೆ ತಕ್ಷಣ ಜೈಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
-
The cooked up case is filed with the Ahmedabad cyber cell about Saket’s tweet on the Morbi bridge collapse.
— Derek O'Brien | ডেরেক ও'ব্রায়েন (@derekobrienmp) December 6, 2022 " class="align-text-top noRightClick twitterSection" data="
All this cannot silence @AITCofficial and the Opposition. BJP taking political vendetta to another level. 3/3
">The cooked up case is filed with the Ahmedabad cyber cell about Saket’s tweet on the Morbi bridge collapse.
— Derek O'Brien | ডেরেক ও'ব্রায়েন (@derekobrienmp) December 6, 2022
All this cannot silence @AITCofficial and the Opposition. BJP taking political vendetta to another level. 3/3The cooked up case is filed with the Ahmedabad cyber cell about Saket’s tweet on the Morbi bridge collapse.
— Derek O'Brien | ডেরেক ও'ব্রায়েন (@derekobrienmp) December 6, 2022
All this cannot silence @AITCofficial and the Opposition. BJP taking political vendetta to another level. 3/3
ಗುಜರಾತ್‌ನ ಮೋರ್ಬಿಯಲ್ಲಿ ಅಕ್ಟೋಬರ್‌ನಲ್ಲಿ ಸಂಭವಿಸಿದ್ದ ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕೆಲವು ಆಕ್ಷೇಪಾರ್ಹ ಟ್ವೀಟ್‌ಗಳನ್ನು ಮಾಡಿದ್ದರು. ಅಂದಿನಿಂದ ಗುಜರಾತ್ ಪೊಲೀಸರು ಸಾಕೇತ್ನನ್ನು ಬಂಧನಕ್ಕೆ ಜಾಲಬೀಸಿದ್ದರು.
ಜೈಪುರ ವಿಮಾನ ನಿಲ್ದಾಣದಲ್ಲಿ ಗುಜರಾತ್ ಪೊಲೀಸರು ಬಂಧಿಸಿದರು. ನಂತರ ಸಾಕೇತ್ ತನ್ನ ಕುಟುಂಬದ ಸದಸ್ಯರಿಗೆ ತಡರಾತ್ರಿ 2 ಗಂಟೆಗೆ ಕರೆ ಮಾಡಿ ಬಂಧಿಸಿರುವ ಬಗ್ಗೆ ತಿಳಿಸಿದ್ದರು.
ಬಂಧನ ಬಳಿಕ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ ಅವರು ತಮ್ಮ ಟ್ವೀಟ್ ದಲ್ಲಿ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಬಂಧಿಸಿರುವುದನ್ನು ಖಚಿತಪಡಿಸಿದ್ದಾರೆ. ಮೋರ್ಬಿ ಸೇತುವೆ ಕುಸಿತ ದುರಂತದಲ್ಲಿ 135 ಜನರು ಸಾವಿಗೀಡಾಗಿದ್ದರು.