ETV Bharat / bharat

ಗುಜರಾತ್​ನಲ್ಲಿಂದು 2ನೇ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ

ಗುಜರಾತ್​ನಲ್ಲಿಂದು 81 ಪುರಸಭೆ, 31 ಜಿಲ್ಲಾ ಪಂಚಾಯತ್‌ಗಳು ಮತ್ತು 231 ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಯುತ್ತಿದೆ.

Gujarat local body election 2021
ಗುಜರಾತ್​ನಲ್ಲಿಂದು 2ನೇ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ
author img

By

Published : Feb 28, 2021, 8:33 AM IST

ಅಹಮದಾಬಾದ್: ಗುಜರಾತ್​ನಲ್ಲಿಂದು ಎರಡನೇ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದ್ದು, 81 ಪುರಸಭೆ, 31 ಜಿಲ್ಲಾ ಪಂಚಾಯತ್‌ಗಳು ಮತ್ತು 231 ತಾಲೂಕು ಪಂಚಾಯತ್‌ಗಳಿಗೆ ಮತದಾನವಾಗಲಿದೆ.

ಪುರಸಭೆಗಳ 680 ವಾರ್ಡ್‌, ಜಿಲ್ಲಾ ಪಂಚಾಯತ್‌ಗಳ 980 ಹಾಗೂ ತಾಲೂಕು ಪಂಚಾಯತ್‌ಗಳ 4,773 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಮಾರ್ಚ್ 2 ರಂದು ಫಲಿತಾಂಶ ಹೊರಬೀಳಲಿದ್ದು, 8,473 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ವಿಜಯ್​ ರೂಪಾನಿ ಹಾಗೂ ಆಡಳಿತ ಪಕ್ಷ ಬಿಜೆಪಿಗೆ ಈ ಸ್ಥಳೀಯ ಸಂಸ್ಥೆ ಚುನಾವಣೆ ಬಹುಮುಖ್ಯವಾಗಿದೆ.

ಇದನ್ನೂ ಓದಿ: ಆಪ್​ಗೆ ಐದು ವರ್ಷ ನೀಡಿ.. ಬಿಜೆಪಿಯ 25 ವರ್ಷ ಮರೆಯುವಿರಿ: ಗುಜರಾತ್​ನಲ್ಲಿ ಕೇಜ್ರಿವಾಲ್ ಮಾತು

ಫೆ.21ರಂದು ಗುಜರಾತ್​ನ ಅಹಮದಾಬಾದ್, ವಡೋದರಾ, ಸೂರತ್, ರಾಜ್‌ಕೋಟ್, ಭಾವನಗರ ಮತ್ತು ಜಾಮ್‌ನಗರ ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ 576ರ ಪೈಕಿ 483 ಸ್ಥಾನಗಳನ್ನು ಪಡೆದು ಬಿಜೆಪಿ ಗೆಲುವಿನ ನಗೆ ಬೀರಿದ್ದರೆ, ಕಾಂಗ್ರೆಸ್​ 55 ಹಾಗೂ ಆಮ್​ ಆದ್ಮಿ ಪಕ್ಷ (ಎಎಪಿ) 27 ಸ್ಥಾನಗಳನ್ನು ಪಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.