ETV Bharat / bharat

Gujarat high court: ರೇಪ್​ ಕೇಸಲ್ಲಿ ಶಂಕೆ ಮೇಲೆ ಇಬ್ಬರಿಗೆ 13 ಜೈಲು ಶಿಕ್ಷೆ.. ಸಾಕ್ಷಿಗಳಿಲ್ಲದೇ ಶಿಕ್ಷೆ ನೀಡಿದ್ದು ತಪ್ಪೆಂದ ಗುಜರಾತ್​ ಹೈಕೋರ್ಟ್​ - two innocent people punished 13 year Imprisonment

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅನುಮಾನದ ಮೇಲೆ ಇಬ್ಬರಿಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ಗುಜರಾತ್​ ಹೈಕೋರ್ಟ್​ ರದ್ದು ಮಾಡಿದೆ. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಶಿಕ್ಷೆ ನೀಡಿದ್ದು ತಪ್ಪು ಎಂದು ಇದೇ ವೇಳೆ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ರೇಪ್​ ಕೇಸಲ್ಲಿ ಶಂಕೆ ಮೇಲೆ ಇಬ್ಬರಿಗೆ 13 ಜೈಲು ಶಿಕ್ಷೆ

author img

By

Published : Jul 15, 2023, 3:33 PM IST

ಅಹಮದಾಬಾದ್​: ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ನ್ಯಾಯಾಲಯದ ಧ್ಯೇಯವಾಕ್ಯ. ಆದರೆ, ಗುಜರಾತ್​ನಲ್ಲಿ ಇಂಥದ್ದೊಂದು ಅಪಭ್ರಂಶ ನಡೆದಿದೆ. ಅತ್ಯಾಚಾರ ಪ್ರಕರಣದಲ್ಲಿ ಇಬ್ಬರು ಅಮಾಯಕರು 13 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ಈಗ ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್​ ಅವರನ್ನು ಬಿಡುಗಡೆ ಮಾಡಲು ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ಇದೇ ವೇಳೆ ತಾಕೀತು ಮಾಡಿ, ಛೀಮಾರಿ ಕೂಡ ಹಾಕಿದೆ.

ಗುಜರಾತ್​ನ ಅಮ್ರೇಲಿಯ ಇಬ್ಬರು ವ್ಯಕ್ತಿಗಳನ್ನು ರೇಪ್​ ಕೇಸ್​​ನಲ್ಲಿ ಬರೋಬ್ಬರಿ 13 ವರ್ಷ ಜೈಲಿಗಟ್ಟಲಾಗಿದೆ. ಶಿಕ್ಷೆಗೆ ಗುರಿಯಾದವರ ಮೇಲ್ಮನವಿ ಆಲಿಸಿದ ಕೋರ್ಟ್​, ಸರಿಯಾದ ತನಿಖೆ ನಡೆಸದೇ ಅನುಮಾನದ ಮೇಲೆ ಇಬ್ಬರು ಬಂಧಿಸಿ ಜೈಲು ಶಿಕ್ಷೆ ವಿಧಿಸಿದ್ದನ್ನು ತರಾಟೆಗೆ ತೆಗೆದುಕೊಂಡಿದೆ. ಅಪರಾಧಿಗಳಲ್ಲದವರನ್ನು ಶಿಕ್ಷೆಗೆ ಒಳಪಡಿಸಿದ್ದು ತಪ್ಪು. ಕೂಡಲೇ ಅವರನ್ನು ಬಂಧನದಿಂದ ಮುಕ್ತಗೊಳಿಸಿ ದಾಖಲೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ಆದೇಶಿಸಿತು.

ಪ್ರಕರಣವೇನು?: 2009 ರಲ್ಲಿ ಅಮ್ರೇಲಿಯಲ್ಲಿ ನಡೆದಿದ್ದ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಅನುಮಾದನ ಮೇಲೆ ಬಂಧನಕ್ಕೆ ಒಳಪಡಿಸಿದ್ದರು. ಗೋವಿಂದಭಾಯಿ ಮತ್ತು ಗೋಪಾಲಭಾಯ್ ಎಂಬ ಇಬ್ಬರಿಗೆ ವಿಚಾರಣಾ ನ್ಯಾಯಾಲಯವು ಶಂಕೆಯ ಆಧಾರದ ಮೇಲೆ ಶಿಕ್ಷೆಯನ್ನು ವಿಧಿಸಿತ್ತು.

ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಇಬ್ಬರಿಗೂ ಶಿಕ್ಷೆ ವಿಧಿಸಿದ್ದಕ್ಕೆ ಯಾವುದೇ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಪ್ರಮಾಣೀಕರಿಸಿರಲಿಲ್ಲ. ಸಾಕ್ಷ್ಯಾಧಾರಗಳ ಪರಿಶೀಲನೆಯಲ್ಲಿಯೇ ಕೋರ್ಟ್​ ಇಷ್ಟು ವರ್ಷಗಳನ್ನು ಕಳೆದಿದೆ. ಸೂಕ್ತ ಸಾಕ್ಷಿಗಳಿಲ್ಲದೇ ಯಾರನ್ನೂ ಶಿಕ್ಷೆಗೆ ಒಳಪಡಿಸಬಾರದು. ಆದರೆ, ವಿಚಾರಣಾ ಕೋರ್ಟ್​ ಇದರಲ್ಲಿ ಯಡವಟ್ಟು ಮಾಡಿಕೊಂಡು ನಿರಾಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿತ್ತು.

ಪ್ರಕರಣದಲ್ಲಿ ಓರ್ವ ವ್ಯಕ್ತಿ 13 ವರ್ಷ 8 ತಿಂಗಳು, ಇನ್ನೊಬ್ಬ 12 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿದ್ದವರು ಸಲ್ಲಿಸಿದ ಮೇಲ್ಮನವಿಯನ್ನೂ ವಿಚಾರಣೆ ನಡೆಸಲು ಕೋರ್ಟ್​ ವಿಳಂಬ ಮಾಡಿದೆ. ಅವರ ವಿರುದ್ಧ ಸಾಕ್ಷ್ಯಾಧಾರಗಳು ಕೂಡ ಸಾಬೀತಾಗದ ಕಾರಣ ಹೈಕೋರ್ಟ್​ ಬಿಡುಗಡೆ ಮಾಡಲು ಸರ್ಕಾರಕ್ಕೆ ಸೂಚನೆ ನೀಡಿದೆ.

ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಶಿಕ್ಷೆಗೆ ಗುರಿಪಡಿಸಬೇಕಿತ್ತು. ಸಂಶಯದ ಆಧಾರದಲ್ಲಿ ಯಾವುದೇ ಆರೋಪಿಯನ್ನು ಶಿಕ್ಷಿಸಲು ಸಾಧ್ಯವಿಲ್ಲ. ಇದು ನಿರಪರಾಧಿಗಳು ಕಂಬಿಗಳ ಹಿಂದೆ ಶಿಕ್ಷೆ ಅನುಭವಿಸುವಂತೆ ಮಾಡುತ್ತದೆ. ಈ ಪ್ರಕರಣದಲ್ಲೂ ಅದೇ ಘಟಿಸಿದೆ. ಇಬ್ಬರೂ ನಿರಪರಾಧಿಗಳಾಗಿದ್ದಾರೆ ಎಂದು ಕೋರ್ಟ್​ ತೀರ್ಪು ನೀಡಿದೆ. ಅಲ್ಲದೇ, ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲು ಸರ್ಕಾರಕ್ಕೆ ಇದೇ ವೇಳೆ ಆದೇಶ ನೀಡಿದೆ. ಹೈಕೋರ್ಟಿನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಅಪರಾಧಿಗಳ ಅಂಕಿಅಂಶವನ್ನೂ ನೀಡುವಂತೆ ಕೂಡ ಹೇಳಿದೆ.

ಪ್ರಕರಣದಲ್ಲಿ ಒಬ್ಬಾತನಿಗೆ 13 ವರ್ಷ 8 ತಿಂಗಳು ಹಾಗೂ ಮತ್ತೊಬ್ಬನಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವಿಚಾರಣಾಧೀನ ಕೋರ್ಟ್​ ಇವರಿಗೆ 10 ವರ್ಷಗಳಿಗಿಂತ ಹೆಚ್ಚು ಕಾಲ ಶಿಕ್ಷೆ ವಿಧಿಸಲಾಗಿದ್ದರೂ, ಕ್ರಿಮಿನಲ್ ಮೇಲ್ಮನವಿಯು ದೀರ್ಘಕಾಲದಿಂದ ಬಾಕಿ ಉಳಿದ ಕಾರಣ ಅವರಿಗೆ ನೀಡಿದ ಜೈಲು ಶಿಕ್ಷೆ ಮುಂದುವರಿಸಲಾಗಿತ್ತು ಎಂದು ಅಡ್ವೊಕೇಟ್ ಜನರಲ್​ ಹಾರ್ದಿಕ್ ರಾವಲ್ ತಿಳಿಸಿದ್ದಾರೆ.

ಇದನ್ನೂ ಓದಿ: Bengaluru crime: ಮನೆಯಲ್ಲಿ ಗಂಡು, ರಸ್ತೆಯಲ್ಲಿ ಹೆಣ್ಣು.. ಐಷಾರಾಮಿ ಜೀವನಕ್ಕಾಗಿ ವೇಷ ಧರಿಸಿದ್ದ ಆರೋಪಿ ಅಂದರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.