ಜಮ್ಮು ಕಾಶ್ಮೀರ ಆಡಳಿತದ ಡಿಐಜಿ ಆಗಿ ಗುಜರಾತ್ ಕೇಡರ್ ಐಪಿಎಸ್ ಸಾರಾ ರಿಜ್ವಿ ನೇಮಕ - ಗುಜರಾತ್ನ ಏಕೈಕ ಮುಸ್ಲಿಂ ಮಹಿಳಾ ಐಪಿಎಸ್
39 ವರ್ಷದ ರಿಜ್ವಿ ಅವರು ಗುಜರಾತ್ನ ಏಕೈಕ ಮುಸ್ಲಿಂ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಶ್ರೀನಗರ( ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಆಡಳಿತದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಗುಜರಾತ್ ಕೇಡರ್ ಮಹಿಳಾ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಸಾರಾ ಅಫ್ಜಲ್ ಅಹ್ಮದ್ ರಿಜ್ವಿ ಅವರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಡಿಐಜಿ ಆಡಳಿತಕ್ಕೆ ನಿಯೋಜಿಸಲಾಗಿದೆ. ಆಡಳಿತದ ಹಿತದೃಷ್ಟಿಯಿಂದ, ಪೋಸ್ಟಿಂಗ್ ಆದೇಶಗಳಿಗಾಗಿ ಕಾಯುತ್ತಿರುವ ಸಾರಾ ರಿಜ್ವಿ ಅವರನ್ನು ನಿಯೋಜಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
39 ವರ್ಷದ ರಿಜ್ವಿ ಅವರು ಗುಜರಾತ್ನ ಏಕೈಕ ಮುಸ್ಲಿಂ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮುಂಬೈನಲ್ಲಿ ಜನಿಸಿದ ರಿಜ್ವಿ ವಿದ್ಯಾವಂತ ಕುಟುಂಬಕ್ಕೆ ಸೇರಿದವರು. ಅವರ ತಂದೆ ಅಫ್ಜಲ್ ಅಹ್ಮದ್ ವಿಜ್ಞಾನ ಪದವೀಧರರಾಗಿದ್ದಾರೆ ಮತ್ತು ತಾಯಿ ನಿಗರ್ ರಿಜ್ವಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಮಹಿಳಾ ಅಧಿಕಾರಿಯ ಸಹೋದರ ವಾಸಿಫ್ ರಿಜ್ವಿ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ಸಿವಿಲ್ ಇಂಜಿನಿಯರ್ ಮತ್ತು ಸಹೋದರಿ ಸಮೀರಾ ದುಬೈ ಮೂಲದ ಕಂಪ್ಯೂಟರ್ ಸೈನ್ಸ್ ಪದವೀಧರರಾಗಿದ್ದಾರೆ. ರಿಜ್ವಿ 2008 ರಲ್ಲಿ ಆರ್‌ಪಿಎಫ್‌ನಲ್ಲಿ ತರಬೇತಿ ಸಹಾಯಕ ಭದ್ರತಾ ಕಮಿಷನರ್ ಮನೂರ್ ಖಾನ್ ಅವರನ್ನು ಮದುವೆಯಾಗಿದ್ದರು
ಇದನ್ನೂ ಓದಿ: ವಿಶ್ವ ಪರಂಪರೆಯ ಸಪ್ತಾಹ: ಪ್ರೀತಿಯ ಸ್ಮಾರಕ ತಾಜ್ಮಹಲ್ಗೆ ಉಚಿತ ಪ್ರವೇಶ