ಅಮ್ರೇಲಿ (ಗುಜರಾತ್): ಮಹಾಮಾರಿ ಕೋವಿಡ್ 2ನೇ ಅಲೆ ಇಡೀ ದೇಶವನ್ನು ಪತರಗುಟ್ಟುವಂತೆ ಮಾಡಿದೆ. ಸೋಂಕಿನಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡರೆ ಸಾಕಪ್ಪ ಎಂಬ ಮನಸ್ಥಿತಿಗೆ ಅದೆಷ್ಟೋ ಮಂದಿ ಬಂದು ನಿಂತಿದ್ದಾರೆ. ಕೆಲ ಸಂಘ-ಸಂಸ್ಥೆಗಳು ತಮ್ಮ ಕೈಲಾದ ನೆರವು ಮಾಡುವ ಮೂಲಕ ವೈರಸ್ ತಡೆದು, ಸೋಂಕಿತರನ್ನು ಅಪಾಯದಿಂದ ಪಾರು ಮಾಡಲು ನೆರವಾಗುತ್ತಿದ್ದಾರೆ.
ಆದರೆ ಗುಜರಾತ್‌ನ ಅಮ್ರೇಲಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಹಿರಾ ಸೋಲಂಕಿ ಎಂಬುವವರು ತಾವು ನೀಡಿರುವ ಆಮ್ಲಜನಕದ ಸಿಲಿಂಡರ್‌ಗಳಿಗೆ ತಮ್ಮ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಅಗ್ಗದ ಪ್ರಚಾರಕ್ಕೆ ಮುಂದಾಗಿದ್ದಾರೆ. ಪ್ರತಿ ಸಿಲಿಂಡರ್ ಮೇಲೆ ಇವರ ಹೆಸರು ಮತ್ತು ಭಾವಚಿತ್ರ ಕಾಣಬಹುದು. ಸದ್ಯ ಇವರ ಈ ಪೋಸ್ಟರ್ ರಾಜಕೀಯ, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಸೋಲಂಕಿ, ತಮ್ಮ ಬೆಂಬಲಿಗರಿಂದ ಇಂತಹ ತಪ್ಪು ನಡೆದಿದೆ. ಆಕ್ಸಿಜನ್ ದುರ್ಬಳಕೆ ತಡೆಯಲು ಹೀಗೆ ಮಾಡಿದ್ದಾರೆ ಎಂದು ಸಮರ್ಥನೆಗೆ ಯತ್ನಿಸಿದ್ದಾರೆ. ಆದರೆ ಕೆಲವು ಮೂಲಗಳ ಪ್ರಕಾರ ಕೋವಿಡ್ ಕೇರ್ ಸೆಂಟರ್‌ಗೆ ನೀಡಿದ ಆಮ್ಲಜನಕದ ಸಿಲಿಂಡರ್‌ಗಳ ಮೇಲೆ ಪೋಸ್ಟ್‌ಗಳನ್ನು ಅಂಟಿಸಿರುವುದರ ಹಿಂದೆ ಮಾಜಿ ಶಾಸಕ ಸೋಲಂಕಿ ಅವರ ಸಂಪೂರ್ಣ ಬೆಂಬಲ ಹಾಗೂ ಭಾಗವಹಿಸಿಕೆ ಇದೆ ಎನ್ನಲಾಗಿದೆ.