ವಡೋದರಾ: ಗುಜರಾತ್‌ನ ವಲ್ಸಾದ್‌ನಲ್ಲಿ (Valsad in Gujarat) ಈ ತಿಂಗಳ ಆರಂಭದಲ್ಲಿ ರೈಲಿನ ಕೋಚ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ 18 ವರ್ಷದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲಸ ಮುಗಿಸಿಕೊಂಡು ಆಕೆ ಹಾಸ್ಟೆಲ್‌ಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ದಕ್ಷಿಣ ಗುಜರಾತ್‌ನ ನವಸಾರಿ ಮೂಲದ ಈಕೆ ವಡೋದರಾದಲ್ಲಿ ಎನ್‌ಜಿಒದಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಯ ಶವ ನವೆಂಬರ್ 4 ರಂದು ವಲ್ಸಾದ್‌ನಲ್ಲಿ ಗುಜರಾತ್ ಕ್ವೀನ್ ಎಕ್ಸ್‌ಪ್ರೆಸ್‌ನ ಕೋಚ್‌ನಲ್ಲಿ( Gujarat Queen Express ) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರೈಲ್ವೆ ಪೊಲೀಸರು ಅಸಹಜ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಏನಿದು ಘಟನೆ?
ಈಕೆಯನ್ನು ಆಟೋ ರಿಕ್ಷಾದಲ್ಲಿ ಇಬ್ಬರು ಆರೋಪಿಗಳು ಅಪಹರಿಸಿದ್ದರು ಎಂದು ಆಕೆ ಡೈರಿ ಉಲ್ಲೇಖಿಸಿರುವ ಪೊಲೀಸರು, ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ನಂತರ ಸಾಮೂಹಿಕ ಅತ್ಯಾಚಾರ(gang-raped) ನಡೆಸಿರಬಹುದು ಎಂದು ಶಂಕಿಸಿದ್ದಾರೆ.
ಆಕೆಯ ಡೈರಿ ಪ್ರಕಾರ, ಇಬ್ಬರು ಆರೋಪಿಗಳು ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದರು. ಅಲ್ಲಿಗೆ ಬಸ್ ಚಾಲಕ ಬರುತ್ತಿರುವುದನ್ನು ಕಂಡ ಅವರು ಅಲ್ಲಿಂದ ಪರಾರಿಯಾಗಿದ್ದರಂತೆ. ಸಂತ್ರಸ್ತೆ ನಂತರ ಸ್ನೇಹಿತನನ್ನು ತಲುಪಲು ಚಾಲಕನ ಸಹಾಯ ತೆಗೆದುಕೊಂಡಿದ್ದಳಂತೆ.
ಈ ಸಂಬಂಧ ಸಿಐಡಿ (ಅಪರಾಧ ಮತ್ತು ರೈಲ್ವೆ) ಇನ್ಸ್ಪೆಕ್ಟರ್ ಜನರಲ್ ಸುಭಾಷ್ ತ್ರಿವೇದಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಯೇ ಎಂದು ನಿರ್ಧರಿಸಲು ಮತ್ತು ತಪ್ಪಿತಸ್ಥರನ್ನು ಬಂಧಿಸಲು ಕೂಲಂಕಷವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದಿದ್ದಾರೆ.
ವಡೋದರಾ ನಗರ ಪೊಲೀಸ್, ಅಹಮದಾಬಾದ್ ನಗರ ಅಪರಾಧ ವಿಭಾಗ, ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ರೈಲ್ವೆ ಪೊಲೀಸರನ್ನು ಒಳಗೊಂಡ ಸುಮಾರು 25 ಪ್ರತ್ಯೇಕ ತಂಡಗಳನ್ನು ತನಿಖೆಗಾಗಿ ರಚಿಸಲಾಗಿದೆ ಮತ್ತು ಸುಮಾರು 450 ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಪೊಲೀಸ್ ಸೂಪರಿಂಟೆಂಡೆಂಟ್ (ಪಶ್ಚಿಮ ರೈಲ್ವೆ) ರಾಥೋಡ್ ಮಾತನಾಡಿ ಆಕೆಯ ಬ್ಯಾಗ್‌ನಲ್ಲಿ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಅವಳು ಕೆಲಸದಿಂದ ತನ್ನ ಹಾಸ್ಟೆಲ್‌ಗೆ ಹಿಂತಿರುಗುತ್ತಿದ್ದಾಗ ಆಕೆಯನ್ನು ಇಬ್ಬರು ಅಪಹರಿಸಿ ಆಕೆಯ ಕಣ್ಣಿಗೆ ಬಟ್ಟೆಕಟ್ಟಿ ವಡೋದರದ ಪ್ರತ್ಯೇಕ ಮೈದಾನಕ್ಕೆ ಕರೆದೊಯ್ದಿದ್ದಾರಂತೆ. ಆದರೆ, ಈ ಡೈರಿಯಲ್ಲಿ ಅತ್ಯಾಚಾರದ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದಿದ್ದಾರೆ.
ಡೈರಿಯಲ್ಲಿ ಮಹಿಳೆಯು ಸಾಮೂಹಿಕ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯವೆಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಆದರೆ, ಘಟನೆ ಪರಿಶೀಲಿಸಿದರೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಕಂಡುಬಂದಿದೆ. ಆಕೆ ಅಪರಾಧದ ಬಗ್ಗೆ ಸ್ಪಷ್ಟವಾಗಿ ಬರೆದಿಲ್ಲವಾದ್ದರಿಂದ ಪೊಲೀಸರು ಆಕೆಯ ವೈದ್ಯಕೀಯ ವರದಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಅತ್ಯಾಚಾರದ ಬಗ್ಗೆ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತೋರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.