ದೆಹಲಿ/ಜಮ್ಮು ಕಾಶ್ಮೀರ: ಈಶಾನ್ಯ ದೆಹಲಿಯ ಹಳೇ ಸೀಮಾಪುರಿ ಪ್ರದೇಶದಲ್ಲಿ ಎನ್‌ಎಸ್‌ಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪತ್ತೆ ಮಾಡಿದೆ. ನಂತರ ಅದನ್ನು ನಿಯಂತ್ರಿತ ಸ್ಫೋಟದ ಮೂಲಕ ನಾಶಪಡಿಸಲಾಗಿದೆ.
ಈಇಡಿ ನಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಆರ್ಡಿಎಕ್ಸ್ ಹೊಂದಿರುವ ಟೈಮರ್ ಸಾಧನವನ್ನು ಬಳಸಲಾಗಿದೆ. ಸರಿಸುಮಾರು 2.5 ಕೆಜಿಯಿಂದ 3 ಕೆಜಿ ತೂಕದ IED ಅನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ಬಾಂಬ್ ನಿಷ್ಕ್ರಿಯ ದಳ (BDS) ನಿಷ್ಕ್ರಿಯಗೊಳಿಸಿದೆ.
CRPF ವಾಹನದ ಮೇಲೆ ಗ್ರೆನೇಡ್ ದಾಳಿ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕೀಗಾಮ್ ಗ್ರಾಮದಲ್ಲಿ ಸಂಜೆ ಅಪರಿಚಿತ ಉಗ್ರರು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯ ಮೇಲೆ ಗ್ರೆನೇಡ್ ಎಸೆದಿದ್ದಾರೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಗಾಯಗಳಾಗಿಲ್ಲ.
ರಾತ್ರಿ 7:30 ರ ಸುಮಾರಿಗೆ ಉಗ್ರರು ಕೀಗಾಮ್‌ನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯತ್ತ ಗ್ರೆನೇಡ್ ಎಸೆದಿದ್ದಾರೆ. ಗ್ರೆನೇಡ್ ಜಿಪ್ಸಿಯಲ್ಲಿ ಸ್ಫೋಟಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ದಾಳಿಕೋರರನ್ನು ಹಿಡಿಯಲು ಆ ಪ್ರದೇಶವನ್ನು ಸೇನಾ ಪಡೆ ಸುತ್ತುವರಿದಿದೆ.
ಇದನ್ನೂ ಓದಿ: ಅಹೋರಾತ್ರಿ ಧರಣಿ ನಿರತ ಕೈ ನಾಯಕರಿಗೆ ಭರ್ಜರಿ ಭೋಜನ ವ್ಯವಸ್ಥೆ
ಇನ್ನೊಂದೆಡೆ ಬಾರಾಮುಲ್ಲಾ ಜಿಲ್ಲೆಯ ಜಂಡ್‌ಫರಾನ್ ಪ್ರದೇಶದಲ್ಲಿ ಪೊಲೀಸರು ಬೃಹತ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಝಂಡ್‌ಫರಾನ್ ಪ್ರದೇಶದಲ್ಲಿ ಬೃಹತ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. 10 ಹ್ಯಾಂಡ್ ಗ್ರೆನೇಡ್‌ಗಳು 10 ಯುಬಿಜಿಎಲ್, ಕಚ್ಚಾ ಗ್ರೆನೇಡ್ ಮತ್ತು ಇತರ ಸ್ಫೋಟಕ ವಸ್ತುಗಳು ಈ ವೇಳೆ ಕಂಡು ಬಂದಿದ್ದವು.