ETV Bharat / bharat

ಕಾಶ್ಮೀರದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ಓರ್ವ ಯೋಧನಿಗೆ ಗಾಯ, ಟವೇರಾ ವಾಹನಕ್ಕೆ ಹಾನಿ - ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ

ಬಾರಾಮುಲ್ಲಾ ಜಿಲ್ಲೆ ಮತ್ತು ಕುಪ್ವಾರಾ ಜಿಲ್ಲೆಯಲ್ಲಿ ಉಗ್ರರು ಪ್ರತ್ಯೇಕವಾಗಿ ಗ್ರೆನೇಡ್ ದಾಳಿ ನಡೆಸಿದ್ದು, ಓರ್ವ ಯೋಧ ಗಾಯಗೊಂಡಿದ್ದಾನೆ.

Grenade attack at CRPF bunker in Baramullah
ಕಾಶ್ಮೀರದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ಓರ್ವ ಯೋಧನಿಗೆ ಗಾಯ, ಟವೇರಾ ವಾಹನಕ್ಕೆ ಹಾನಿ
author img

By

Published : Aug 17, 2021, 4:27 AM IST

ಶ್ರೀನಗರ, ಜಮ್ಮು ಕಾಶ್ಮೀರ: ಸಿಆರ್​​ಪಿಎಫ್​ ಬಂಕರ್​ ಬಳಿ ಅಪರಿಚಿತ ಉಗ್ರರು ಎಸೆದ ಗ್ರೆನೇಡ್ ಸ್ಫೋಟಗೊಂಡು ಓರ್ವ ಯೋಧ ಗಾಯಗೊಂಡಿರುವ ಘಟನೆ ಕುಪ್ವಾರಾ ಜಿಲ್ಲೆಯ ಹಂದ್ವಾರಾ ಬಳಿಯ ಲ್ಯಾನ್​ಗೇಟ್ ಪ್ರದೇಶದಲ್ಲಿ ನಡೆದಿದೆ.​

ಇಂಥದ್ಧೇ ಮತ್ತೊಂದು ಪ್ರಕರಣ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಆಜಾದ್​ಗಂಜ್ ಪ್ರದೇಶದಲ್ಲಿ ನಡೆದಿದೆ. ಉಗ್ರರು ಸಿಆರ್​​ಪಿಎಫ್​ ಬಂಕರ್​ ಮೇಲೆ ಗ್ರೆನೇಡ್​ ಎಸೆದು ಪರಾರಿಯಾಗಿದ್ದು, ಈ ವೇಳೆ ಒಂದು ಟವೇರಾ ವಾಹನಕ್ಕೂ ಹಾನಿಯಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ದಾಳಿಯ ನಂತರ ಪ್ರದೇಶವನ್ನು ಸೇನೆ ಸುತ್ತುವರೆದಿದ್ದು, ದಾಳಿಕೋರರಿಗಾಗಿ ಶೋಧ ಮುಂದುವರೆದಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮೊದಲು ಭಾನುವಾರವೂ ಶ್ರೀನಗರದ ಸನತ್​ನಗರದಲ್ಲಿ ಅಪರಿಚಿತ ಉಗ್ರರು ದಾಳಿ ನಡೆಸಿ, ಓರ್ವ ಸಿಆರ್​ಪಿಎಫ್​​ ಯೋಧನಿಗೆ ಗಾಯವಾಗಿತ್ತು.

ಇದನ್ನೂ ಓದಿ: ಆಫ್ಘನ್​ನಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲ ದೇಶಗಳು ಒಂದಾಗಬೇಕಿದೆ: ವಿಶ್ವಸಂಸ್ಥೆ ಕರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.