ಜಗಿತ್ಯಾಲ: ಜಿಲ್ಲೆಯ ಮಡಿಪಲ್ಲಿ ಮಂಡಲದ ಕಲ್ವಕೋಟದಲ್ಲಿ ಕೊಲೆಯೊಂದು ಸಂಚಲನ ಮೂಡಿಸಿದೆ. ತನ್ನ ಸ್ವಂತ ಅಜ್ಜನನ್ನು ಮೊಮ್ಮಗನೊಬ್ಬ ಕಲ್ಲಿನಿಂದ ಮನಸೋ ಇಚ್ಛೆ ಜಜ್ಜಿ ಕೊಲೆ ಮಾಡಿದ್ದಾನೆ.
ಗ್ರಾಮದ ಮಲ್ಲಯ್ಯನನ್ನು ಎಲ್ಲರೂ ನೋಡು - ನೋಡುತ್ತಿದ್ದಂತೆ ಆತನ ಮೊಮ್ಮಗ ಚಂದು ತಲೆ ಮೇಲೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ದಾನೆ. ಅತ್ಯಂತ ಬಲವಾಗಿ ಹಲ್ಲೆ ಮಾಡಿದ್ದರಿಂದ ಅಜ್ಜ ಮಲ್ಲಯ್ಯ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಆದರೂ ಇಷ್ಟಕ್ಕೆ ಸುಮ್ಮನಾಗದ ಚಂದು ತನ್ನ ಅಜ್ಜ ಮಲ್ಲಯ್ಯ ಮೃತ ದೇಹವನ್ನು ಬೈಕ್ ಮೇಲೆ ತೆಗೆದುಕೊಂಡು ಹೋಗಿದ್ದಾನೆ. ಇಂತಹ ಘಟನೆ ನಡು ರಸ್ತೆಯಲ್ಲಿ ನಡೆದರೂ ಯಾರೊಬ್ಬರು ಅಜ್ಜನ ಸಹಾಯಕ್ಕೆ ಮುಂದೆ ಬರಲಿಲ್ಲ. ಪ್ರತಿಯೊಬ್ಬರು ಮೌನ ಪ್ರೇಕ್ಷರಂತೆ ನೋಡುತ್ತಲೇ ನಿಂತಿದ್ದರು.
ಓದಿ: ಮೊದಲ ಬಾರಿ ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ!
ಈ ಅಮಾನವೀಯ ದಾಳಿಯ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಕೊಲೆ ಆರೋಪಿ ಚಂದು ಮನಸ್ಥಿತಿ ಸರಿಯಿಲ್ಲದ ಕಾರಣ ಮನೆಯಲ್ಲಿ ಆಗಾಗ ಜಗಳವಾಡುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಕರಣವೊಂದರಲ್ಲಿ ಅವರನ್ನು ಬಂಧಿಸಲಾಗಿತ್ತು. ಗ್ರಾಮಸ್ಥರು ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.