ETV Bharat / bharat

ಪಾರ್ಸೆಲ್ ವ್ಯಾನ್​​ ಮತ್ತು ರೈಲ್ವೆ ಸರಕು ಸಾಗಣೆ ವ್ಯಾಗನ್‌ಗಳ ಸುರಕ್ಷತೆಗೆ ಜಿಪಿಎಸ್ ಎಲೆಕ್ಟ್ರಾನಿಕ್ ಲಾಕ್ - ರೈಲ್ವೆ ಪಾರ್ಸೆಲ್ ವ್ಯಾನ್‌

ಪೂರ್ವ ರೈಲ್ವೆಯ ಹೌರಾ ರೈಲ್ವೆ ವಿಭಾಗದಲ್ಲಿ ಜಿಪಿಎಸ್ ಎಲೆಕ್ಟ್ರಾನಿಕ್ ಲಾಕ್ ವ್ಯವಸ್ಥೆ ಪ್ರಾರಂಭಿಸಲಾಗಿದೆ.

ಜಿಪಿಎಸ್ ಎಲೆಕ್ಟ್ರಾನಿಕ್ ಲಾಕ್
ಜಿಪಿಎಸ್ ಎಲೆಕ್ಟ್ರಾನಿಕ್ ಲಾಕ್
author img

By

Published : Mar 1, 2023, 9:57 PM IST

ಹೌರಾ (ಪಶ್ಚಿಮ ಬಂಗಾಳ): ಪಾರ್ಸೆಲ್ ವ್ಯಾನ್‌ಗಳು ಮತ್ತು ಸರಕು ಸಾಗಣೆ ವ್ಯಾಗನ್‌ಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಪೂರ್ವ ರೈಲ್ವೆ ಜಿಪಿಎಸ್ ಆಧಾರಿತ ಎಲೆಕ್ಟ್ರಾನಿಕ್ ಲಾಕ್ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಜಿಪಿಎಸ್ ಎಲೆಕ್ಟ್ರಾನಿಕ್ ಲಾಕ್ ವ್ಯವಸ್ಥೆಯನ್ನು ಪೂರ್ವ ರೈಲ್ವೆಯ ಹೌರಾ ರೈಲ್ವೆ ವಿಭಾಗದಲ್ಲಿ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪೂರ್ವ ರೈಲ್ವೆಯ ವಿವಿಧ ರೈಲ್ವೆ ವಿಭಾಗಗಳಲ್ಲಿ ಇದನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ.

ಈ ವ್ಯವಸ್ಥೆಯು ಪ್ರಾಯೋಗಿಕವಾಗಿ ಯಶಸ್ವಿಯಾದರೆ, ಪ್ರಮುಖ ಮತ್ತು ದುಬಾರಿ ಸರಕುಗಳನ್ನು ರವಾನಿಸುವ ಎಲ್ಲ ಪ್ರಮುಖ ರೈಲುಗಳು ಮತ್ತು ಸರಕು ಸಾಗಣೆ ವ್ಯಾಗನ್‌ಗಳಲ್ಲಿ ಇದನ್ನು ಸ್ಥಾಪಿಸಲಾಗುವುದು ಎಂದು ಪೂರ್ವ ರೈಲ್ವೆ ಮೂಲಗಳು ತಿಳಿಸಿವೆ. ಈ ಬಗ್ಗೆ ಪೂರ್ವ ರೈಲ್ವೆ ಈಗಾಗಲೇ ಟ್ವೀಟ್ ಮಾಡಿದೆ.

ದೀರ್ಘಕಾಲದವರೆಗೆ ವಿವಿಧ ಪ್ರಯಾಣಿಕ ರೈಲುಗಳು ಅಥವಾ ಸರಕು ಕಾರ್​ಗಳು ಅಥವಾ ತಂತಿ ಮುದ್ರೆಗಳೊಂದಿಗೆ ಸರಕುಗಳನ್ನು ಸಾಗಿಸಲು ಬಳಸಲಾಗುತ್ತಿತ್ತು. ಹಲವು ಪ್ರಕರಣಗಳಲ್ಲಿ ಕಳ್ಳತನವಾಗಿರುವ ದೂರುಗಳು ಬಂದಿದ್ದವು. ಒಂದೆಡೆ ರೈಲ್ವೆಯಲ್ಲಿ ಸರಕು ಸಾಗಣೆ ಬಂಡಿಗಳ ಲೂಟಿ ಹೊಸದೇನಲ್ಲ. ಮತ್ತೊಂದೆಡೆ, ದೂರದ ರೈಲುಗಳಲ್ಲಿ ಲಗೇಜ್ ವ್ಯಾನ್‌ಗಳಿಂದ ಕಳ್ಳತನದ ಪ್ರಕರಣಗಳು ಸಹ ನಡೆಯುತ್ತಿರುತ್ತವೆ.

ಪೂರ್ವ ರೈಲ್ವೆಯು ವಿಶೇಷವಾಗಿ ಕಳ್ಳತನವನ್ನು ತಡೆಗಟ್ಟಲು ಪ್ರಾಯೋಗಿಕ ಯೋಜನೆಯಾಗಿ ಸರಕು ಮತ್ತು ಪಾರ್ಸೆಲ್ ರೈಲುಗಳಲ್ಲಿ GPS ಆಧಾರಿತ ಎಲೆಕ್ಟ್ರಾನಿಕ್ ಲಾಕ್ ವ್ಯವಸ್ಥೆಯನ್ನು ಬಳಸಲು ಪ್ರಾರಂಭಿಸಿದೆ. ಪೂರ್ವ ರೈಲ್ವೆಯ ಹೌರಾ ರೈಲು ವಿಭಾಗದಲ್ಲಿ ಹೌರಾ - ಗುವಾಹಟಿ ಸರೈಘಾಟ್ ಎಕ್ಸ್‌ಪ್ರೆಸ್‌ನ ಪಾರ್ಸೆಲ್ ವ್ಯಾನ್‌ಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಈ ಹೊಸಲಾಕ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಜಿಪಿಎಸ್ ಇರುವ ಈ ಲಾಕ್ ವ್ಯವಸ್ಥೆಯನ್ನು ಎಲ್ಲ ಪಾರ್ಸೆಲ್ ವ್ಯಾನ್ ಮತ್ತು ಸರಕು ಸಾಗಣೆ ವ್ಯಾಗನ್​ಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದೆ. ವ್ಯಾನ್‌ಗಳು ಅಥವಾ ವ್ಯಾಗನ್‌ಗಳನ್ನು ಒಟಿಪಿ ಮೂಲಕ ಅಧಿಕೃತ ಸಿಬ್ಬಂದಿಯಿಂದ ರೈಲು ಪ್ರಯಾಣದ ಪ್ರಾರಂಭದಲ್ಲಿ ಲಾಕ್ ಮಾಡಲಾಗುತ್ತದೆ. ಗಮ್ಯಸ್ಥಾನವನ್ನು ತಲುಪಿದ ನಂತರವಷ್ಟೇ ಅಧಿಕೃತ ವ್ಯಕ್ತಿಗಳು ಮಾತ್ರ ಮತ್ತೊಂದು OTP ಮೂಲಕ ಈ ವ್ಯವಸ್ಥೆಯನ್ನು ಅನ್‌ಲಾಕ್ ಮಾಡಬಹುದು.

ಒಟಿಪಿ ಇಲ್ಲದೇ ಲಾಕ್ ತೆರೆಯಲು ಬರುವುದಿಲ್ಲ: ಜಿಪಿಎಸ್ ವ್ಯವಸ್ಥೆ ಇರುವುದರಿಂದ ಯಾವ ನಿಲ್ದಾಣದಲ್ಲಿ ಸರಕನ್ನು ತೆರೆಯಲಾಗುತ್ತಿದೆ ಎಂಬ ಸ್ಪಷ್ಟದಾಖಲೆ ಇರುತ್ತದೆ. ಮತ್ತೊಂದೆಡೆ, ಡಿಜಿಟಲ್ ವ್ಯವಸ್ಥೆಯಲ್ಲಿ OTP ಇಲ್ಲದೆ ಈ ಲಾಕ್ ತೆರೆಯುವುದಿಲ್ಲ. ಅಂದರೆ ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ ಯಾರೂ ಈ ಲಾಕ್ ಅನ್ನು ತೆರೆಯಲು ಸಾಧ್ಯವಿಲ್ಲ.

ಪೂರ್ವ ರೈಲ್ವೆ ಮೂಲಗಳ ಪ್ರಕಾರ, ಈ ಬೀಗವನ್ನು ಯಾವುದೇ ರೀತಿಯಲ್ಲಿಯೂ ನಕಲಿ ಮಾಡಲು ಸಾಧ್ಯವಿಲ್ಲ. ಪರಿಣಾಮವಾಗಿ, ಸರಕುಗಳನ್ನು ಸಾಗಿಸುವ ವ್ಯಾಗನ್ ಮತ್ತು ರೈಲ್ವೆ ಪಾರ್ಸೆಲ್ ವ್ಯಾನ್‌ಗಳಿಗೆ ಇನ್ನು ಮುಂದೆ ರಕ್ಷಣೆ ನೀಡಬಹುದು ಎಂದಿದೆ.

ಇದನ್ನೂ ಓದಿ : ಜನವರಿಯಲ್ಲಿ 29 ಲಕ್ಷ ಖಾತೆ ರದ್ದುಪಡಿಸಿದ ವಾಟ್ಸ್​ಆ್ಯಪ್.. ಏಕೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.