ETV Bharat / bharat

ನೇತಾಜಿ ಜನ್ಮ ದಿನಾಚರಣೆಯಂದು ‘ಪರಾಕ್ರಮ ದಿವಸ್’ ಆಚರಿಸಲು ನಿರ್ಧಾರ - parakram diwas

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಸ್ಮರಣೆಗಾಗಿ ಪ್ರತಿ ವರ್ಷ ಜನವರಿ 23 ನ್ನು ‘ಪರಾಕ್ರಮ ದಿವಸ್’ ಎಂದು ಆಚರಿಸಲು ಕೇಂದ್ರ ಆದೇಶ ಹೊರಡಿಸಿದೆ.

ನೇತಾಜಿ ಜನ್ಮ ದಿನಾಚರಣೆಯನ್ನು ‘ಪರಾಕ್ರಮ ದಿವಸ್’ ಆಚರಿಸಲು ನಿರ್ಧಾರ

author img

By

Published : Jan 19, 2021, 10:39 AM IST

ನವದೆಹಲಿ: ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಜನವರಿ 23 ಅನ್ನು ಪ್ರತಿ ವರ್ಷ 'ಪರಾಕ್ರಮ ದಿವಸ್' ಎಂದು ಆಚರಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರಕಟಿಸಿದೆ.

ಈ ತಿಂಗಳ ಆರಂಭದಲ್ಲಿ, ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯ ನೆನಪಿಗಾಗಿ ಸಂಸ್ಕೃತಿ ಸಚಿವಾಲಯವು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯಂದು ರಾಷ್ಟ್ರೀಯ ರಜಾದಿನವನ್ನು ಘೋಷಿಸುವಂತೆ ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹಿಂದೆ ಪಿಎಂ ಮೋದಿಗೆ ಪತ್ರ ಬರೆದಿದ್ದರು ಮತ್ತು ನೇತಾಜಿಗೆ ಏನಾಯಿತು ಎಂಬುದನ್ನು ಕಂಡುಹಿಡಿಯಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕೋರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.