ನವದೆಹಲಿ: ಭಾರತ ಸರ್ಕಾರವು ಮಹಿಳೆಯರ ಘನತೆಗೆ ಘನತೆ ಹಾಗೂ ಅವಕಾಶಕ್ಕೆ ಒತ್ತು ನೀಡುವ ಮೂಲಕ ತನ್ನ ವಿವಿಧ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಮಹಿಳಾ ದಿನದಂದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ವಂದಿಸುತ್ತೇನೆ. ಭಾರತ ಸರ್ಕಾರವು ತನ್ನ ವಿವಿಧ ಯೋಜನೆಗಳ ಮೂಲಕ ಮಹಿಳಾ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಅವರ ಘನತೆಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದಿದ್ದಾರೆ.
-
From financial inclusion to social security, quality healthcare to housing, education to entrepreneurship, many efforts have been made to put our Nari Shakti at the forefront of India’s development journey. These efforts will continue with even greater vigour in the coming times.
— Narendra Modi (@narendramodi) March 8, 2022 " class="align-text-top noRightClick twitterSection" data="
">From financial inclusion to social security, quality healthcare to housing, education to entrepreneurship, many efforts have been made to put our Nari Shakti at the forefront of India’s development journey. These efforts will continue with even greater vigour in the coming times.
— Narendra Modi (@narendramodi) March 8, 2022From financial inclusion to social security, quality healthcare to housing, education to entrepreneurship, many efforts have been made to put our Nari Shakti at the forefront of India’s development journey. These efforts will continue with even greater vigour in the coming times.
— Narendra Modi (@narendramodi) March 8, 2022
ಮಹಿಳೆಯರಿಗೆ ಸಾಮಾಜಿಕ ಭದ್ರತೆ, ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಶಿಕ್ಷಣದಿಂದ ಉದ್ಯಮಶೀಲತೆಗೆ, ಭಾರತದ ಅಭಿವೃದ್ಧಿ ಪಯಣದಲ್ಲಿ ನಮ್ಮ ನಾರಿ ಶಕ್ತಿಯನ್ನು ಮುಂಚೂಣಿಯಲ್ಲಿಡಲು ಹಲವು ಪ್ರಯತ್ನಗಳನ್ನು ಮಾಡಲಾಗಿದೆ. ಈ ಪ್ರಯತ್ನಗಳು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಯುದ್ಧ: ರೊಮೇನಿಯಾದಿಂದ ನವದೆಹಲಿಗೆ ಬಂದ 200 ಭಾರತೀಯ ನಾಗರಿಕರು
ಇನ್ನು ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ಮಹಿಳಾ ಸಬಲೀಕರಣಕ್ಕೆ ವಿವಿಧ ಗಣ್ಯರ ಕೊಡುಗೆಯನ್ನು ಗುರುತಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಕಚ್‌ನ ಧೋರ್ಡೊದಲ್ಲಿ ನಡೆಯುವ ಸೆಮಿನಾರ್‌ನಲ್ಲಿ 500ಕ್ಕೂ ಹೆಚ್ಚು ಮಹಿಳಾ ಸಾಧಕರು ಭಾಗವಹಿಸಲಿದ್ದಾರೆ. ಸೆಮಿನಾರ್‌ನಲ್ಲಿ ಸಂಸ್ಕೃತಿ, ಧರ್ಮ, ಭದ್ರತೆ, ಸಾಮಾಜಿಕ ಸ್ಥಾನಮಾನ ಮತ್ತು ಭಾರತ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರದ ಕುರಿತು ಸಂವಾದಗಳನ್ನು ನಡೆಸಲಾಗುತ್ತಿದೆ. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳ ಜೊತೆಗೆ ಮಹಿಳೆಯರ ಸಾಧನೆಗಳ ಬಗ್ಗೆಯೂ ಚರ್ಚಿಸಲಾಗುವುದು.