ETV Bharat / bharat

"ಲಾಭ ಖಾಸಗೀಕರಣ - ನಷ್ಟ ರಾಷ್ಟ್ರೀಕರಣ": ಕೇಂದ್ರದ ವಿರುದ್ಧ ರಾಹುಲ್​ ಆಕ್ರೋಶ - ಬ್ಯಾಂಕ್​ ಖಾಸಗೀಕರಣ

ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಬ್ಯಾಂಕ್​ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಈ ಧರಣಿಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ.

Rahul gandhi
ಕೇಂದ್ರದ ವಿರುದ್ಧ ರಾಹುಲ್​ ಆಕ್ರೋಶ
author img

By

Published : Mar 16, 2021, 12:00 PM IST

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ಗ​ಳನ್ನು "ಬಂಡವಾಳಶಾಹಿ"ಗಳಿಗೆ ಮಾರಾಟ ಮಾಡುವುದರಿಂದ ದೇಶದ ಆರ್ಥಿಕ ಭದ್ರತೆಗೆ ಧಕ್ಕೆಯುಂಟಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸರ್ಕಾರವು "ಲಾಭವನ್ನು ಖಾಸಗೀಕರಣಗೊಳಿಸುತ್ತಿದೆ" ಮತ್ತು "ನಷ್ಟವನ್ನು ರಾಷ್ಟ್ರೀಕರಣಗೊಳಿಸುತ್ತದೆ" ಎಂದು ಅವರು ಆರೋಪಿಸಿದರು.

"ಭಾರತ ಸರ್ಕಾರ (ಜಿಒಐ) ಲಾಭವನ್ನು ಖಾಸಗೀಕರಣಗೊಳಿಸುತ್ತಿದೆ ಮತ್ತು ನಷ್ಟವನ್ನು ರಾಷ್ಟ್ರೀಕರಣಗೊಳಿಸುತ್ತಿದೆ. ಪಿಎಸ್‌ಬಿಗಳನ್ನು ಮೋದಿ ಬಂಡವಾಳಶಾಹಿಗಳಿಗೆ ಮಾರಾಟ ಮಾಡುವುದು ಭಾರತದ ಆರ್ಥಿಕ ಭದ್ರತೆಗೆ ತೀವ್ರವಾಗಿ ಧಕ್ಕೆಯುಂಟು ಮಾಡುತ್ತದೆ" ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟ ಎಂಇಎಸ್​ ಪುಂಡ : ಬೆಳಗಾವಿಯಲ್ಲಿ ನಾಡದ್ರೋಹಿಯ ಉದ್ಧಟತನ

ಸಾರ್ವಜನಿಕ ವಲಯದ ಬ್ಯಾಂಕ್​​ಗಳ ಖಾಸಗೀಕರಣದ ವಿರುದ್ಧ ಎರಡು ದಿನಗಳ ಮುಷ್ಕರ ನಡೆಸುತ್ತಿರುವ ಪ್ರತಿಭಟನಾ ನಿರತ ಬ್ಯಾಂಕ್ ನೌಕರರಿಗೆ ಕಾಂಗ್ರೆಸ್ ನಾಯಕ ಬೆಂಬಲ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.