ETV Bharat / bharat

ಸೆಕ್ರೆಟರಿ ದರ್ಜೆಯ ಅಧಿಕಾರಿಗಳಿಗೆ 4 ವರ್ಷ ಅವಧಿಗೆ 1.3 ಲಕ್ಷ ಬೆಲೆಯ ಲ್ಯಾಪ್​ಟಾಪ್.. ಬಳಸಿದ ಬಳಿಕ ತಾವೇ ಇಟ್ಟುಕೊಳ್ಳುವ ಅವಕಾಶ! - ಅಧಿಕಾರಿಗಳಿಗೆ ಮೊಬೈಲ್ ಲ್ಯಾಪ್‌ಟಾಪ್

ಕೇಂದ್ರ ಸರ್ಕಾರ ಉನ್ನತ ದರ್ಜೆಯ ಅಧಿಕಾರಿಗಳಿಗೆ ಮೊಬೈಲ್, ಲ್ಯಾಪ್‌ಟಾಪ್ ನೀಡಲು ಮುಂದಾಗಿದೆ. ಇದು 1.3 ಲಕ್ಷ ರೂಪಾಯಿ ದರ ಇರಲಿದೆ.

ಲ್ಯಾಪ್​ಟಾಪ್​
ಲ್ಯಾಪ್​ಟಾಪ್​
author img

By

Published : Jul 23, 2023, 2:59 PM IST

ನವದೆಹಲಿ: ಕೇಂದ್ರದ ಸೆಕ್ರೆಟರಿ ಮತ್ತು ಅದಕ್ಕಿಂತಲೂ ಮೇಲ್ತ್ಸರದ ಅಧಿಕಾರಿಗಳಿಗೆ ಸರ್ಕಾರ ಬಂಪರ್​ ಆಫರ್​ ನೀಡಿದೆ. 1.3 ಲಕ್ಷ ರೂ. ವರೆಗಿನ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಅದಕ್ಕೆ ಸಮನಾದ ಯಾವುದೇ ಸಾಧನಗಳನ್ನು ಬಳಸಲು 4 ವರ್ಷಗಳ ಅವಧಿಗೆ ನೀಡಲಿದೆ. ಇದಾದ ಬಳಿಕ ಅವರು ಬಯಸಿದಲ್ಲಿ ಅದನ್ನು ವೈಯಕ್ತಿಕ ಬಳಕೆಗಾಗಿ ತಮ್ಮಲ್ಲಿಯೇ ಇಟ್ಟುಕೊಳ್ಳುವ ಅವಕಾಶವನ್ನೂ ನೀಡಿದೆ.

ಹಣಕಾಸು ಸಚಿವಾಲಯದ ವೆಚ್ಚ ವಿಭಾಗ ಇಂತಹ ಆದೇಶ ಹೊರಡಿಸಿದೆ. ಸರ್ಕಾರದ ಅಧಿಕೃತ ಕೆಲಸಕ್ಕಾಗಿ ಅರ್ಹ ಅಧಿಕಾರಿಗಳಿಗೆ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಫ್ಯಾಬ್ಲೆಟ್, ನೋಟ್‌ಬುಕ್, ನೋಟ್‌ಪ್ಯಾಡ್, ಅಲ್ಟ್ರಾ-ಬುಕ್, ನೆಟ್-ಬುಕ್ ಅಥವಾ ಅಂತಹುದೇ ವರ್ಗಗಳ ಸಾಧನಗಳನ್ನು ನೀಡಲು ಮಾರ್ಗಸೂಚಿಗಳನ್ನು ಪಟ್ಟಿ ಮಾಡಿದೆ.

ಉಪ ಕಾರ್ಯದರ್ಶಿ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಎಲ್ಲಾ ಕೇಂದ್ರ ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಾನಿಕ್ ಸಾಧನಗಳನ್ನು ಪಡೆಯಲಿದ್ದಾರೆ. ಹಾಗೊಂದು ವೇಳೆ ಸೆಕ್ಷನ್ ಅಧಿಕಾರಿಗಳು ಮತ್ತು ಅಧೀನ ಕಾರ್ಯದರ್ಶಿಗಳ ಕಚೇರಿಯ ಅಧಿಕಾರಿಗಳಿಗೆ ಎಲೆಕ್ಟ್ರಾನಿಕ್​ ಉಪಕರಣಗಳು ಬೇಕಾದಲ್ಲಿ ಶೇ.50 ರಷ್ಟು ಸಿಬ್ಬಂದಿಗೆ ನೀಡಬಹುದು ಎಂದು ಸುತ್ತೋಲೆಯಲ್ಲಿ ಹೇಳಿದೆ.

ಅಧಿಕಾರಿಗಳಿಗೆ ನೀಡಲಾಗುವ ಎಲೆಕ್ಟ್ರಾನಿಕ್​ ಸಾಧನಗಳು ಗರಿಷ್ಠ 1 ಲಕ್ಷ ಮತ್ತು ತೆರಿಗೆಯನ್ನು ಹೊಂದಿರಬೇಕು. ಅದರಲ್ಲಿ ಶೇ.40 ಕ್ಕಿಂತ ಹೆಚ್ಚು ಮೇಕ್​ ಇನ್​ ಇಂಡಿಯಾ ಅಡಿ ತಯಾರಾದ ಉಪಕರಣಗಳಾಗಿದ್ದರೆ, ಅವುಗಳ ಬೆಲೆ ತೆರಿಗೆ ಸೇರಿಸಿ 1.30 ಲಕ್ಷ ರೂ. ವರೆಗೂ ಇರಬಹುದು. ಉಪಕರಣ ಪಡೆದ ಅಧಿಕಾರಿಗಳು ನೀಡಿದ 4 ವರ್ಷಗಳ ಅವಧಿಯಲ್ಲಿ ಅದು ದುರಸ್ತಿಯಾದರೆ, ಯಾವುದೇ ಹೊಸ ಸಾಧನವನ್ನು ನೀಡಲಾಗುವುದಿಲ್ಲ. ಅದನ್ನು ರಿಪೇರಿ ಮಾಡಿಸಬೇಕು. ಅದಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಸರ್ಕಾರ ಹೇಳಿದೆ.

ಬೇಕಾದಲ್ಲಿ ಉಳಿಸಿಕೊಳ್ಳಿ: ನಾಲ್ಕು ವರ್ಷಗಳ ಬಳಕೆಯ ನಂತರ, ಅಧಿಕಾರಿಯು ಉಪಕರಣವನ್ನು ತಮ್ಮ ವೈಯಕ್ತಿಕ ಬಳಕೆಗೆ ಉಳಿಸಿಕೊಳ್ಳಲು ಬಯಸಿದಲ್ಲಿ ತಮ್ಮಲ್ಲೇ ಇಟ್ಟುಕೊಳ್ಳಬಹುದು. ಆದರೆ, ಅದಕ್ಕೂ ಮೊದಲು ಸಂಬಂಧಿತ ಸಚಿವಾಲಯ/ಇಲಾಖೆಯ ಎಲ್ಲ ದಾಖಲೆಗಳನ್ನು ಸಿಸ್ಟಂನಿಂದ ಅಳಿಸಬೇಕು. ಬಳಿಕವೇ ಅಧನ್ನು ಮೇಲಧಿಕಾರಿಯಿಂದ ಪಡೆದುಕೊಳ್ಳಬೇಕು ಎಂದು ಷರತ್ತು ವಿಧಿಸಿದೆ.

ಈ ಆದೇಶವನ್ನು ಜುಲೈ 21, 2023 ರಂದು ಹೊರಡಿಸಲಾಗಿದ್ದರೂ, ಅದನ್ನು 2020 ರ ಮಾರ್ಚ್ 27 ರಿಂದಲೇ ಜಾರಿಗೆ ಬರುವಂತೆ ಅನುಷ್ಠಾನಕ್ಕೆ ತರಲಾಗಿದೆ. ಈ ಪ್ರಕಾರ, ಸಾಧನಗಳ ಖರೀದಿಗೆ ಸದ್ಯಕ್ಕೆ 80,000 ರೂ.ಗಳಿಗೆ ಮಿತಿಗೊಳಿಸಲಾಗಿದೆ. ಪ್ರಸ್ತುತ ಅದನ್ನು ವೈಯಕ್ತಿಕ ಕೆಲಸಗಳಿಗಾಗಿ ಬಳಕೆ ಮಾಡಿಕೊಳ್ಳುವ ಅವಕಾಶವಿಲ್ಲ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಜಿ 20 ನಾಯಕರ ಸಭೆ ನಡೆಯುವ ದೆಹಲಿಯ 'ITPO' ಕಟ್ಟಡದ ಆಕರ್ಷಕ ಫೋಟೋಗಳು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.