ETV Bharat / bharat

ಮಹಾರಾಷ್ಟ್ರದಲ್ಲಿ ಮತ್ತೆ ತೆರೆದ ಕೋವಿಡ್​ ಕೇಂದ್ರಗಳು.. ಇನ್ನೂ ಹಲವೆಡೆ ಲಾಕ್​​ಡೌನ್​​ ಅನಿವಾರ್ಯ ಎಂದ ಸಚಿವರು

author img

By

Published : Mar 23, 2021, 6:46 AM IST

ಹೀಗಾಗಿ ಈಗಾಗಲೇ ಮಹಾರಾಷ್ಟ್ರದ ಹಲವೆಡೆ ಲಾಕ್​ಡೌನ್​, ಸೆಮಿ ಲಾಕ್​ಡೌನ್​ ಜಾರಿಯಲ್ಲಿದ್ದು, ಇನ್ನೂ ಹಲವು ನಗರಗಳು ಲಾಕ್​​ಡೌನ್​ ಪಟ್ಟಿಯಲ್ಲಿ ಸೇರುವ ಸಾಧ್ಯತೆ ಹೆಚ್ಚಿದೆ.

aharashtra Health Minister
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅನೇಕ ಕೋವಿಡ್​ ಕೇಂದ್ರಗಳನ್ನು ಮತ್ತೆ ತೆರೆಯಲಾಗಿದೆ. ಜನರು ಹೀಗೆ ನಿರ್ಲಕ್ಷ್ಯ ಮಾಡುತ್ತಿದ್ದರೆ ಇನ್ನೂ ಕೆಲ ಪ್ರದೇಶಗಳಲ್ಲಿ ಲಾಕ್​ಡೌನ್​ ಹೇರುವುದು ಅನಿವಾರ್ಯವಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ ಹೇಳಿದ್ದಾರೆ.

ರಾಜ್ಯದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಸಾಮಾಜಿಕ ಅಂತರ ಸೇರಿದಂತೆ ಜನರು ಕೋವಿಡ್​​ ನಿಯಮಗಳನ್ನ ಪಾಲಿಸುತ್ತಿಲ್ಲ. ನಾವು ಯಾವ ಹೊಸ ಕೇಸ್​ಗಳನ್ನೂ ಮುಚ್ಚಿಡುತ್ತಿಲ್ಲ, ಎಲ್ಲವನ್ನೂ ಐಸಿಎಂಆರ್​ನಲ್ಲಿ ದಾಖಲಿಸುತ್ತಿದ್ದೇವೆ. ಇಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯೊಂದಿಗೆ ಚರ್ಚಿಸಿ ಕೆಲ ಪ್ರದೇಶದಲ್ಲಿ ಲಾಕ್​​ಡೌನ್​ ಜಾರಿ ತರುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ದಯವಿಟ್ಟು ಸಾರ್ವಜನಿಕರು ಸೋಂಕು ಹರಡುವಿಕೆ ತಡೆಗಟ್ಟಲು ಸಹಕರಿಸಿ ಎಂದು ರಾಜೇಶ್​ ತೋಪೆ ಮನವಿ ಮಾಡಿದ್ದಾರೆ.

ಧಾರವಿಯಲ್ಲೂ ಕೇಸ್​ ಹೆಚ್ಚಳ

ಏಷ್ಯಾದ ಅತಿ ದೊಡ್ಡ ಕೊಳೆಗೇರಿಯಾಗಿರುವ ಮುಂಬೈನ ಧಾರವಿ ಪ್ರದೇಶವು ಕೊರೊನಾ ವಿರುದ್ಧ ಹೋರಾಡಿ ಶೂನ್ಯ ಪ್ರಕರಣ ದಾಖಲಾಗುವಲ್ಲಿ ಯಶಸ್ವಿಯಾಗಿತ್ತು. ಆದರೆ, ಇದೀಗ ಮತ್ತೆ ಇಲ್ಲಿ ಕೂಡ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸೋಮವಾರ 20 ಕೇಸ್​ಗಳು ವರದಿಯಾಗಿವೆ. ಇನ್ನು ನಾಸಿಕ್​ ಮಹಾನಗರ ಪಾಲಿಕೆಯ 25 ಸದಸ್ಯರಿಗೆ ಸೋಂಕು ಅಂಟಿದೆ. ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 2000 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಮರಾಠವಾಡದಲ್ಲಿ 30 ಮಂದಿ ವೈರಸ್​ಗೆ ಬಲಿಯಾಗಿದ್ದಾರೆ.

ಹೀಗಾಗಿ ಈಗಾಗಲೇ ಹಲವೆಡೆ ಲಾಕ್​ಡೌನ್​, ಸೆಮಿ ಲಾಕ್​ಡೌನ್​ ಜಾರಿಯಲ್ಲಿದ್ದು, ಇನ್ನೂ ಹಲವು ನಗರಗಳು ಲಾಕ್​​ಡೌನ್​ ಪಟ್ಟಿಯಲ್ಲಿ ಸೇರುವ ಸಾಧ್ಯತೆ ಹೆಚ್ಚಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.