ತಿರುಪತಿ(ಆಂಧ್ರಪ್ರದೇಶ): ದೇಶದ ಬಹುತೇಕ ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಆಸ್ಪತ್ರೆಗಳಲ್ಲಿ ಹಣಕ್ಕೆ ಹೆಚ್ಚಿನ ಮಹತ್ವ. ಲಂಚ ನೀಡಿದ್ರೆ ಮಾತ್ರ ಕೆಲಸಗಳು ಆದಷ್ಟು ಬೇಗ ನಡೆಯುತ್ತವೆ. ಇಲ್ಲವಾದರೆ, ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗಬೇಕು. ಇದಕ್ಕೆ ಹೊಸ ನಿದರ್ಶನ ಇಲ್ಲಿದೆ ನೋಡಿ..
ಅನಾರೋಗ್ಯದ ಕಾರಣ ಆಂಧ್ರಪ್ರದೇಶದ ತಿರುಪತಿಯಲ್ಲಿನ ಆರ್ಯುಐಎ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ 10 ವರ್ಷದ ಬಾಲಕ ಜೇಸವಾ ಸಾವನ್ನಪ್ಪಿದ್ದ. ಆತನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಲು ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ 10 ಸಾವಿರ ರೂಪಾಯಿ ಕೇಳಿದ್ದಾನೆ. ಆದರೆ, ಇಷ್ಟೊಂದು ಹಣ ನೀಡಲು ಸಾಧ್ಯವಾಗದ ಕಾರಣ ವ್ಯಕ್ತಿ ಮಗನ ಮೃತದೇಹವನ್ನು ಹೊತ್ತು ಬೈಕ್ನಲ್ಲೇ ಸುಮಾರು 90 ಕಿಲೋ ಮೀಟರ್ ಸಾಗಿದ್ದಾರೆ.
-
My heart aches for innocent little Jesava,who died at Tirupati’s RUIA hospital.His father pleaded with authorities to arrange an ambulance which never came.With mortuary vans lying in utter neglect,pvt ambulance providers asked a fortune to take the child home for final rites.1/2 pic.twitter.com/mcW94zrQUt
— N Chandrababu Naidu (@ncbn) April 26, 2022 " class="align-text-top noRightClick twitterSection" data="
">My heart aches for innocent little Jesava,who died at Tirupati’s RUIA hospital.His father pleaded with authorities to arrange an ambulance which never came.With mortuary vans lying in utter neglect,pvt ambulance providers asked a fortune to take the child home for final rites.1/2 pic.twitter.com/mcW94zrQUt
— N Chandrababu Naidu (@ncbn) April 26, 2022My heart aches for innocent little Jesava,who died at Tirupati’s RUIA hospital.His father pleaded with authorities to arrange an ambulance which never came.With mortuary vans lying in utter neglect,pvt ambulance providers asked a fortune to take the child home for final rites.1/2 pic.twitter.com/mcW94zrQUt
— N Chandrababu Naidu (@ncbn) April 26, 2022
ಮಗನ ಮೃತದೇಹವನ್ನು ಅಪ್ಪಿಕೊಂಡು ಬೈಕ್ ಹಿಂಬದಿಯಲ್ಲಿ ಕುಳಿತುಕೊಂಡು ಸಾಗುತ್ತಿರುವ ವಿಡಿಯೋ ತುಣುಕನ್ನು ಆಂಧ್ರಪ್ರದೇಶದ ಪ್ರತಿಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದು, ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಚಿವರು, ಅಧಿಕಾರಿಗಳು 3 ತಿಂಗಳೊಳಗೆ ಆಸ್ತಿ ಘೋಷಿಸಿ: ಸಿಎಂ ಯೋಗಿ ಆದೇಶ
ತಿರುಪತಿಯ ಆರ್ಯುಐಎ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಮಗು ಜೇಸವಾನಿಗೋಸ್ಕರ ನನ್ನ ಹೃದಯ ಕಲಕಿದೆ. ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತಿಳಿಸಿದ್ರೂ ಅದು ಸಾಧ್ಯವಾಗಿಲ್ಲ. ಬಡತನದಿಂದ ಕಂಗೆಟ್ಟ ತಂದೆಗೆ ಬೇರೆ ದಾರಿಯಿಲ್ಲದೆ ಆ ಮಗುವನ್ನು ಬೈಕ್ ಮೇಲಿಟ್ಟುಕೊಂಡೇ ಸಾಗಿರುವುದು ನಿಜಕ್ಕೂ ಆಂಧ್ರಪ್ರದೇಶದ ಆಸ್ಪತ್ರೆಗಳಲ್ಲಿನ ಆರೋಗ್ಯ ಮೂಲಸೌಕರ್ಯಗಳ ದುಸ್ಥಿತಿಯನ್ನು ಪ್ರಶ್ನಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.