ನವದೆಹಲಿ: ಭತ್ತ ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 2022-23 ನೇ ಸಾಲಿಗೆ ಅನ್ವಯವಾಗುವಂತೆ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ 100 ರೂಪಾಯಿ ಹೆಚ್ಚಿಸಿದೆ. ಈ ಮೂಲಕ 1940 ರೂ. ಇದ್ದ ಬೆಂಬಲ ಬೆಲೆ ಇದೀಗ 2040 ರೂ. ಆಗಲಿದೆ. ಇದರೊಂದಿಗೆ 14 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಖಾರಿಫ್ ಬೆಳೆಯಾದ ಭತ್ತ ಸೇರಿದಂತೆ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಯನ್ನು ಹೆಚ್ಚಳ ಮಾಡಿ ಅನುಮೋದಿಸಿದೆ.
ಸಾಮಾನ್ಯ ದರ್ಜೆಯ ಭತ್ತದ ಎಂಎಸ್‌ಪಿಯನ್ನು ಹಿಂದಿನ ವರ್ಷ 1,940 ರೂ. ನೀಡಲಾಗುತ್ತಿತ್ತು. ಇದೀಗ 100 ರೂಪಾಯಿ ಹೆಚ್ಚಳ ಬಳಿಕ ಅದು ಕ್ವಿಂಟಲ್‌ಗೆ 2,040 ರೂ.ಗೆ ಹೆಚ್ಚಲಿದೆ. ‘ಎ’ ದರ್ಜೆಯ ಭತ್ತದ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 1,960 ರಿಂದ 2,060 ರೂ.ಗೆ ಹೆಚ್ಚಿಸಲಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಅನುಮೋದಿಸಲಾಗಿದೆ. ಪ್ರತಿ ಕ್ವಿಂಟಾಲ್ ಭತ್ತಕ್ಕೆ 100 ರೂಪಾಯಿ ಹೆಚ್ಚಿಸಲಾಗಿದೆ. ಭತ್ತವು ಪ್ರಮುಖ ಖಾರಿಫ್ ಬೆಳೆಯಾಗಿದ್ದು, ಅದರ ಕೃಷಿ ಈಗಾಗಲೇ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇದು ರೈತರಿಗೆ ನೆರವಾಗಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
ಹತ್ತಿ ಬೆಳೆ ಬೆಲೆಯನ್ನು ಕ್ವಿಂಟಲ್‌ಗೆ 6080 ರೂ.ಗೆ ಹೆಚ್ಚಿಸಲಾಗಿದ್ದರೆ, ತೊಗರಿಬೇಳೆ ಬೆಲೆಯನ್ನು 6,600 ರೂಪಾಯಿಗೆ ಏರಿಸಲಾಗಿದೆ. ಕ್ವಿಂಟಲ್‌ಗೆ 300 ರೂಪಾಯಿ ಬೆಂಬಲ ಬೆಲೆ ನೀಡಲಾಗಿದೆ. ಹೆಸರು ಬೇಳೆಗೆ 7,755 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಹಿಂದೆ 7,275 ಕ್ವಿಂಟಲ್ ಮಾರಾಟವಾಗುತ್ತಿದ್ದ ಹೆಸರುಬೇಳೆ ಬೆಲೆಯನ್ನು 480 ರೂ, ಹೆಚ್ಚಿಸಲಾಗಿದೆ.
14 ಖಾರಿಫ್ ಬೆಳೆಗಳ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ 92 ರೂಪಾಯಿಯಿಂದ 523 ರೂ.ವರೆಗೂ ಹೆಚ್ಚಿಸಲಾಗಿದೆ. ಇದರಲ್ಲಿ ಎಳ್ಳಿಗೆ ಅತ್ಯಧಿಕ ಅಂದರೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ 523 ರೂ. ಹೆಚ್ಚಳ ಮಾಡಲಾಗಿದೆ. ಮೆಕ್ಕೆಜೋಳಕ್ಕೆ ಕನಿಷ್ಠ 92 ರೂಪಾಯಿ ನೀಡಲಾಗಿದೆ. ಕೇಂದ್ರ ಸರ್ಕಾರ 14 ಬೆಳೆಗಳಿಗೆ ನೀಡಿರುವ ಬೆಂಬಲ ಬೆಲೆಯ ವಿವರ ಈ ಕೆಳಗಿನಂತಿದೆ..
ಬೆಳೆ | ದರ(ರೂ.) |
ಭತ್ತ | 100 |
ಸಜ್ಜೆ | 100 |
ತೊಗರಿ | 300 |
ಉದ್ದು | 300 |
ಶೇಂಗಾ | 300 |
ಹತ್ತಿ | 355 |
ಹೆಸರುಬೇಳೆ | 480 |
ಸೋಯಾಬಿನ್ | 250 |
ಸೂರ್ಯಕಾಂತಿ | 385 |
ಹುಚ್ಚೆಳ್ಳು(ಗುರೆಳ್ಳು) | 357 |
ಮೆಕ್ಕೆಜೋಳ | 92 |
ರಾಗಿ | 201 |
ಜೋಳ | 232 |
ಬಿಳಿಜೋಳ | 232 |
ಓದಿ: 105 ಗಂಟೆಯಲ್ಲಿ 75 ಕಿ.ಮೀ ರಸ್ತೆ ನಿರ್ಮಿಸಿ ದಾಖಲೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗಡ್ಕರಿ ಶಹಬ್ಬಾಸ್ಗಿರಿ