ETV Bharat / bharat

ಜಮ್ಮು ವಾಯುಸೇನೆ ಕೇಂದ್ರದ ಮೇಲೆ ಡ್ರೋಣ್‌ ದಾಳಿ; ಎನ್‌ಐಎಗೆ ತನಿಖೆಯ ಜವಾಬ್ದಾರಿ

author img

By

Published : Jun 29, 2021, 11:13 AM IST

Updated : Jun 29, 2021, 11:47 AM IST

ಕಳೆದ ಭಾನುವಾರ ಜಮ್ಮು ಕಾಶ್ಮೀರದಲ್ಲಿನ ವಾಯುನೆಲೆಯ ಕೇಂದ್ರದ ಮೇಲೆ ಡ್ರೋಣ್‌ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಐಎನ್‌ಎ)ಗೆ ವಹಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

Govt hands over probe into Jammu airport drone attack to NIA
ಜಮ್ಮುವಿನಲ್ಲಿ ವಾಯುಸೇನೆ ಕೇಂದ್ರದ ಮೇಲೆ ಡ್ರೋಣ್‌ ದಾಳಿ; ಎನ್‌ಐಎ ತನಿಖೆಗೆ ನೀಡಿದ ಸರ್ಕಾರ

ನವದೆಹಲಿ: ಭದ್ರತೆಯ ನಡುವೆಯೂ ಜಮ್ಮು ಕಾಶ್ಮೀರದ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಜಮ್ಮುವಿನ ಐಎಎಫ್‌ ಏರ್‌ಬೇಸ್‌ ಮೇಲೆ ನಡೆದ ಡ್ರೋಣ್ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ.

ಕಳೆದ ಭಾನುವಾರಷ್ಟೇ ಭಾರತೀಯ ವಾಯುಪಡೆಯ ಜಮ್ಮುವಿನ ಏರ್‌ಫೋರ್ಸ್‌ ಸ್ಟೇಷನ್‌ ಮೇಲೆ ಡ್ರೋಣ್‌ ಮೂಲಕ ಬಾಂಬ್​ ಸ್ಫೋಟಗೊಳಿಸಲಾಗಿತ್ತು. ಈ ಘಟನೆಯನ್ನು ಎನ್‌ಐಎಗೆ ವಹಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಮೊದಲು ಡ್ರೋಣ್‌ಗಳನ್ನು ಬಳಸಿ ಗಡಿಯಾಚೆಯಿಂದ ಜಮ್ಮು-ಕಾಶ್ಮೀರಕ್ಕೆ ಶಸ್ತ್ರಾಸ್ತ್ರ, ಸ್ಫೋಟಕ ಹಾಗೂ ಮಾದಕ ವಸ್ತುಗಳನ್ನು ಉಗ್ರರು ಸಾಗಿಸುತ್ತಿದ್ದರು. ಇದೀಗ ಅಂತಹದ್ದೇ ಡ್ರೋಣ್‌ ಬಳಸಿ ಸೇನಾ ನೆಲೆಗಳ ಮೇಲೆ ದಾಳಿಗೆ ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಪಾಕ್ ಸೇನೆ ಹಾಗೂ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕುಮ್ಮಕ್ಕಿನಿಂದ ಜಿಪಿಎಸ್ ಹೊಂದಿದ್ದ ಡ್ರೋಣ್‌ಗಳನ್ನು ಉಗ್ರರು ಬಳಸಿರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಎನ್ಐಎಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

Last Updated : Jun 29, 2021, 11:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.