ETV Bharat / bharat

ಆಗಸ್ಟ್ 16 ರಿಂದ INDIA-UK ನಡುವಿನ ವಿಮಾನಗಳ ಹಾರಾಟ ದುಪ್ಪಟ್ಟು..!

ಕೋವಿಡ್ ಏಕಾಏಕಿ ಹೆಚ್ಚಳವಾದ ಹಿನ್ನೆಲೆ, ಭಾರತ- ಇಂಗ್ಲೆಂಡ್ ನಡುವೆ ವಿಮಾನ ಹಾರಾಟವನ್ನು ಕಡಿಮೆ ಮಾಡಲಾಗಿತ್ತು. ಪ್ರಯಾಣಿಕರು ಹೆಚ್ಚಿನ ವಿಮಾನಗಳ ಹಾರಾಟ ನಡೆಸುವಂತೆ ಮನವಿ ಮಾಡಿದ್ದರಿಂದ ವಾರಕ್ಕೆ 60 ವಿಮಾನಗಳ ಹಾರಾಟ ನಡೆಸಲು ಕೇಂದ್ರ ಮುಂದಾಗಿದೆ.

ವಿಮಾನಗಳ ಹಾರಾಟ ದುಪ್ಪಟ್ಟು
ವಿಮಾನಗಳ ಹಾರಾಟ ದುಪ್ಪಟ್ಟು
author img

By

Published : Aug 12, 2021, 9:53 PM IST

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್​ ನಡುವೆ ವಿಮಾನಗಳ ಹಾರಾಟ ಸಂಬಂಧ ಹಲವಾರು ದೂರುಗಳು ಬಂದ ನಂತರ ಕೇಂದ್ರ ಸರ್ಕಾರವು ಉಭಯ ದೇಶಗಳ ನಡುವಿನ ವಿಮಾನಗಳ ಸಂಖ್ಯೆ ದ್ವಿಗುಣಗೊಳಿಸಲು ಆದೇಶಿಸಿದೆ.

2020 ರ ಡಿಸೆಂಬರ್​ನಲ್ಲಿ ಇಂಗ್ಲೆಂಡವ್​ನಲ್ಲಿ ಏಕಾಏಕಿ ಕೋವಿಡ್​ ಹೆಚ್ಚಾದ ಹಿನ್ನೆಲೆ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. ಪ್ರಸ್ತುತ ಭಾರತ ಹಾಗೂ ಬ್ರಿಟನ್​ ಮಧ್ಯೆ ವಾರಕ್ಕೆ 15 ವಿಮಾನಗಳು ಸಂಚರಿಸುತ್ತಿವೆ. ಆಗಸ್ಟ್ 16 ರಿಂದ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಗಳ ಸಂಖ್ಯೆಯನ್ನು ವಾರಕ್ಕೆ 60 ಕ್ಕೆ ನಿಗದಿಪಡಿಸಲು ನಿರ್ಧರಿಸಿದೆ. 30 ವಿಮಾನಗಳು ಭಾರತೀಯ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ವಿಸ್ತಾರದಿಂದ ಕಾರ್ಯ ನಿರ್ವಹಿಸಲ್ಪಡುತ್ತವೆ. ಏರ್​ ಇಂಡಿಯಾ 24 ವಿಮಾನಗಳನ್ನು ಹಾರಿಸಿದರೆ, ವಿಸ್ತಾರ ನಾಲ್ಕು ಫ್ಲೈಟ್​ಗಳ ಹಾರಾಟ ನಡೆಸಲಿದೆ.

ಇಂಗ್ಲೆಂಡ್​ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2021 ರಲ್ಲಿ ಶೇ.19 (3,200 ವಿದ್ಯಾರ್ಥಿಗಳು) ರಷ್ಟು ಹೆಚ್ಚಾಗಿದೆ.

ಕಳೆದ ವಾರ, ಕೇಂದ್ರ ಗೃಹ ಸಚಿವಾಲಯದ ಅಂತರ್ ರಾಜ್ಯ ಕೌನ್ಸಿಲ್ ಸೆಕ್ರೆಟರಿಯಟ್ ಕಾರ್ಯದರ್ಶಿ ಸಂಜೀವ್ ಗುಪ್ತಾ, ಆಗಸ್ಟ್ 26 ಕ್ಕೆ ಬ್ರಿಟಿಷ್ ಏರ್‌ವೇಸ್, ಏರ್ ಇಂಡಿಯಾ ಮತ್ತು ವಿಸ್ತಾರದ ದೆಹಲಿ-ಲಂಡನ್ ವಿಮಾನಗಳಲ್ಲಿ ಎಕಾನಮಿ ಕ್ಲಾಸ್ ಟಿಕೆಟ್‌ಗೆ 1.2 ಲಕ್ಷ ರೂ. ಮತ್ತು 3.95 ಲಕ್ಷ ರೂ. ನಿಗದಿ ಪಡಿಸಿ ಆದೇಶಿಸಿದ್ದರು.

ಇದನ್ನೂ ಓದಿ: ನೆಹರೂ ಕುಟುಂಬದ ಕೊಡುಗೆಗೆ ಇಡೀ ಬಿಜೆಪಿಯೇ ಸಾಟಿಯಿಲ್ಲ: ಡಿ ಕೆ ಶಿವಕುಮಾರ್​​

ಈ ದರ ನಿಗದಿಗೆ ಹಲವು ಆಕ್ಷೇಪಗಳು ಕೇಳಿ ಬಂದ ನಂತರ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ), ಭಾರತ- ಬ್ರಿಟನ್​ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣ ದರಗಳ ವಿವರಗಳನ್ನು ಸಲ್ಲಿಸುವಂತೆ ಕೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.