ETV Bharat / bharat

10 ದಿನದಲ್ಲಿ ₹164 ಕೋಟಿ ಜಾಹೀರಾತು ಹಣ ಮರುಪಾವತಿಸಿ: ದೆಹಲಿ ಸಿಎಂಗೆ ಗವರ್ನರ್​ ಗಡುವು - ಅರವಿಂದ್​ ಕೇಜ್ರಿವಾಲ್​ಗೆ ಗವರ್ನರ್​ ಗಡುವು

ದೆಹಲಿ ಆಪ್​ ಸರ್ಕಾರ ಮತ್ತು ಲೆಫ್ಟಿನೆಂಟ್​ ಗವರ್ನರ್​ ನಡುವಿನ ಸಮರ ಮುಂದುವರಿದಿದೆ. ಪಕ್ಷದ ಜಾಹೀರಾತಿಗೆ ಸರ್ಕಾರಿ ಖಜಾನೆಯ ಹಣ ಬಳಕೆ ಮಾಡಿದ್ದನ್ನು ವಸೂಲಿ ಮಾಡಲು ಗವರ್ನರ್​ ಸೂಚಿಸಿದ್ದರು. ಇದರ ಬೆನ್ನಲ್ಲೇ, 10 ದಿನ ಗಡುವು ನೀಡಿದ್ದು, ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.

advertisement-money
ದೆಹಲಿ ಸಿಎಂ ಕೇಜ್ರಿವಾಲ್​ಗೆ ಗವರ್ನರ್​ ಗಡುವು
author img

By

Published : Jan 12, 2023, 12:33 PM IST

ನವದೆಹಲಿ: ಸರ್ಕಾರಿ ಖಜಾನೆಯ ಹಣದಲ್ಲಿ ರಾಜಕೀಯ ಜಾಹೀರಾತುಗಳನ್ನು ಸರ್ಕಾರಿ ಜಾಹೀರಾತು ಎಂದು ಬಿಂಬಿಸಿ ಪ್ರಕಟಿಸಿದ ಆಮ್‌ ಆದ್ಮಿ ಪಕ್ಷ (ಆಪ್)​ ಪಕ್ಷಕ್ಕೆ ಲೆಫ್ಟಿನೆಂಟ್​ ಗವರ್ನರ್​ ನೋಟಿಸ್​ ನೀಡಿದ್ದಾರೆ. ಇನ್ನು 10 ದಿನಗಳಲ್ಲಿ ಖರ್ಚು ಮಾಡಿದ 163.62 ಕೋಟಿ ರೂಪಾಯಿ ಪಾವತಿಸಲು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ರಿಗೆ ಸೂಚಿಸಲಾಗಿದೆ. ಒಂದು ವೇಳೆ ನಿಗದಿತ ವೇಳೆಗೆ ಹಣ ಪಾವತಿಸದಿದ್ದಲ್ಲಿ ಪಕ್ಷದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷದ ಸರ್ಕಾರ ಸರ್ಕಾರಿ ಬೊಕ್ಕಸದ ಹಣದಲ್ಲಿ ವಿವಿಧ ಜಾಹೀರಾತುಗಳ ಪ್ರಕಟಿಸಿತ್ತು. ಇವುಗಳಲ್ಲಿ ಸಿಎಂ ಸೇರಿದಂತೆ ರಾಜಕೀಯ ನಾಯಕರ ಚಿತ್ರಗಳನ್ನು ಪ್ರಕಟಿಸಲಾಗಿತ್ತು. ಇದು ಸರ್ಕಾರಿ ಜಾಹೀರಾತಿನಲ್ಲಿ ಪಕ್ಷದ ನಾಯಕರ ಚಿತ್ರವಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಇದು ಪಕ್ಷದ ಜಾಹೀರಾತಾಗಿದ್ದು, ಅದಕ್ಕೆ ಸರ್ಕಾರದ ಹಣವನ್ನು ಬಳಕೆ ಮಾಡಿದ್ದು ವಿವಾದವಾಗಿತ್ತು.

64 ಕೋಟಿ ರೂಪಾಯಿ ಬಡ್ಡಿ: ದೆಹಲಿ ಲೆಫ್ಟಿನೆಂಟ್​ ಗವರ್ನರ್​ ವಿನಯ್​ ಸಕ್ಸೇನಾ ಅವರು, ಪ್ರಕಟವಾದ ಜಾಹೀರಾತುಗಳಿಗೆ ಖರ್ಚು ಮಾಡಿದ ಹಣಕ್ಕೆ ಬಡ್ಡಿಯಾಗಿ 163 ಕೋಟಿ ರೂಪಾಯಿ ಮರುಪಾವತಿ ಮಾಡಬೇಕು ಎಂದು ಸೂಚಿಸಿ ಕಳೆದ ತಿಂಗಳು ನೋಟಿಸ್​ ಜಾರಿ ಮಾಡಿದ್ದರು. 2017 ರ ನಂತರದಲ್ಲಿ ಪ್ರಕಟವಾದ ಎಲ್ಲಾ ಜಾಹೀರಾತುಗಳ ಲೆಕ್ಕಪತ್ರಕ್ಕಾಗಿ ತಂಡವನ್ನು ನಿಯೋಜಿಸಲಾಗಿತ್ತು. ಅದರಂತೆ ಆಪ್​ ಸರ್ಕಾರ 99.31 ಕೋಟಿ ರೂಪಾಯಿ ಹಣವನ್ನು ಈಗಾಗಲೇ ಜಾಹೀರಾತಿಗೆ ಹಣ ಬಳಕೆ ಮಾಡಿದೆ. ಅಂದಿನಿಂದ ಈವರೆಗೂ ಬಡ್ಡಿಯಾಗಿ 64.31 ಕೋಟಿ ಸೇರಿಸಿ ಒಟ್ಟಾರೆ 163 ಕೋಟಿ ರೂಪಾಯಿ ವಸೂಲಿಗೆ ಗವರ್ನರ್​ ತಾಕೀತು ಮಾಡಿದ್ದಾರೆ.

ಸಿಸಿಆರ್​ಜಿಎ ವರದಿಯಲ್ಲಿ ಬಹಿರಂಗ: 2016 ರಲ್ಲಿ ದೆಹಲಿ ಹೈಕೋರ್ಟ್ ಆಪ್​ ಸರ್ಕಾರದ ರಾಜಕೀಯ ಜಾಹೀರಾತುಗಳ ಬಗ್ಗೆ ಕೇಳಿಬಂದ ದೂರುಗಳನ್ನು ವಿಚಾರಿಸಲು ಸರ್ಕಾರಿ ಜಾಹೀರಾತಿನಲ್ಲಿನ ವಿಷಯ ನಿಯಂತ್ರಣ ಸಮಿತಿಗೆ (CCRGA) ನಿರ್ದೇಶಿಸಿತ್ತು. ಮೂರು ಸದಸ್ಯರ ಸಿಸಿಆರ್​ಜಿಎ ತಂಡ "ರಾಜಕಾರಣಿ ಅಥವಾ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಚಿತ್ರವುಳ್ಳ ಜಾಹೀರಾತಿಗೆ ಸರ್ಕಾರಿ ನಿಧಿ ಬಳಸಿಕೊಳ್ಳುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ರೂಪಿಸಿದ ಮಾರ್ಗಸೂಚಿಗಳನ್ನು ಆಪ್ ಸರ್ಕಾರ ಉಲ್ಲಂಘಿಸಿದೆ ಎಂದು ವರದಿ ನೀಡಿತ್ತು.

ಸಿಸಿಆರ್​ಜಿಎ ಸೆಪ್ಟೆಂಬರ್ 22, 2016 ರಂದು ನೀಡಿದ ವರದಿಯನ್ನು ಆಪ್​ ಸರ್ಕಾರ ತಿರಸ್ಕರಿಸಿದೆ. 31.03.2017 ರವರೆಗೆ 97.15 ಕೋಟಿ ರೂ.ಗಳನ್ನು ಜಾಹೀರಾತಿಗಾಗಿ ವೆಚ್ಚ ಮಾಡಲಾಗಿದೆ ಎಂದು ದಾಖಲೆಗಳನ್ನು ಬಹಿರಂಗಪಡಿಸಲಾಗಿದೆ. ಇದು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಉಲ್ಲಂಘನೆಯೂ ಹೌದು ಎಂದು ಸಮಿತಿ ಹೇಳಿದೆ.

ಅಡಿಟ್​ ನಂತರ ಈವರೆಗೂ ಜಾಹೀರಾತಿಗೆ ಖರ್ಚು ಮಾಡಲಾದ ಒಟ್ಟು ವೆಚ್ಚ 106.42 ಕೋಟಿ ಆಗಿದೆ. ಮಾಹಿತಿಯ ಪ್ರಕಾರ, 106.42 ಕೋಟಿ ರೂ.ಗಳಲ್ಲಿ 99.31 ಕೋಟಿ ರೂ.ಗಳನ್ನು ಈಗಾಗಲೇ ಸಂಬಂಧಿಸಿದ ಏಜೆನ್ಸಿಗಳಿಗೆ ಪಾವತಿಸಲಾಗಿದೆ. 7.11 ಕೋಟಿ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ. ಹಣ ಪಾವತಿ ವಿಳಂಬವಾದಲ್ಲಿ ಕಾನೂನು ಕ್ರಮ ಮತ್ತು ಆಸ್ತಿ ಮುಟ್ಟುಗೋಲು ಎಚ್ಚರಿಕೆ ನೀಡಿದ್ದಕ್ಕೆ ಪಕ್ಷ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: 97 ಕೋಟಿ ರೂ. 'ರಾಜಕೀಯ ಜಾಹೀರಾತು' ಬಿಲ್ ಆಪ್​ನಿಂದ ವಸೂಲಿಗೆ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.