ಅಮರಾವತಿ(ಆಂಧ್ರಪ್ರದೇಶ): ಗಣರಾಜ್ಯೋತ್ಸವದ ದಿನದಂದೇ ಆಂಧ್ರಪ್ರದೇಶದಲ್ಲಿ ಹೊಸದಾಗಿ 13 ಜಿಲ್ಲೆಗಳು ರಚನೆಯಾಗಿವೆ. ಈ ಕುರಿತು ಆಂಧ್ರಪ್ರದೇಶ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಆಂಧ್ರಪ್ರದೇಶ ಜಿಲ್ಲೆಗಳ ರಚನೆ ಕಾಯ್ದೆಯ ಸೆಕ್ಷನ್ 3(5) ಅಡಿ ಜಿಲ್ಲೆಗಳನ್ನು ರಚನೆ ಮಾಡಲಾಗಿದ್ದು, ಈ ಮೂಲಕ ಆಂಧ್ರಪ್ರದೇಶದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಮುಂದಿನ ಯುಗಾದಿ ಹಬ್ಬದ ವೇಳೆಗೆ ಹೊಸ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಉಳಿದ ಎಲ್ಲ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಬೇಕೆಂದು ಆಂಧ್ರಪ್ರದೇಶ ಸರ್ಕಾರ ಗುರಿ ಹೊಂದಿದೆ. ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಪರಿಸ್ಥಿತಿಗಳು, ಮತ್ತು ಸೌಲಭ್ಯಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಜಿಲ್ಲೆಗಳನ್ನು ರಚನೆ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಹೊಸದಾಗಿ ರಚನೆಯಾದ ಜಿಲ್ಲೆಗಳು ಮತ್ತು ಅವುಗಳ ಕೇಂದ್ರ ಕಚೇರಿಗಳು ಇಂತಿವೆ
- ಶ್ರೀ ಬಾಲಾಜಿ ಜಿಲ್ಲೆ - ತಿರುಪತಿ
- ಅನ್ನಮಯ್ಯ ಜಿಲ್ಲೆ - ರಾಯಚೋಟಿ
- ಶ್ರೀ ಸತ್ಯಸಾಯಿ ಜಿಲ್ಲೆ - ಪುಟ್ಟಪರ್ತಿ
- ನಂದ್ಯಾಲ ಜಿಲ್ಲೆ - ನಂದ್ಯಾಲ
- ಬಾಪಟ್ಲ ಜಿಲ್ಲೆ - ಬಾಪಟ್ಲ
- ಪಲ್ನಾಡು ಜಿಲ್ಲೆ- ನರಸರಾವ್ ಪೇಟ
- ಏಲೂರು ಜಿಲ್ಲೆ- ಏಲೂರು
- ಎನ್ಟಿಆರ್ ಜಿಲ್ಲೆ - ವಿಜಯವಾಡ
- ಅನಕಾಪಲ್ಲಿ ಜಿಲ್ಲೆ- ಅನಕಾಪಲ್ಲಿ
- ಕಾಕಿನಾಡ ಜಿಲ್ಲೆ- ಕಾಕಿನಾಡ
- ಕೋನ ಸೀಮಾ ಜಿಲ್ಲೆ- ಅಮಲಾಪುರಂ
- ಮಾನ್ಯಂ ಜಿಲ್ಲೆ - ಪಾರ್ವತಿಪುರಂ
- ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ- ಪದೇರು
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ