ETV Bharat / bharat

ಸಾಗದ ಸೇಬು ಟ್ರಕ್​ಗಳು..ಕಾಶ್ಮೀರದ ಮೇಲೆ ಕೇಂದ್ರ ಸರ್ಕಾರದಿಂದ ಆರ್ಥಿಕ ಭಯೋತ್ಪಾದನೆ: ಮೆಹಬೂಬಾ ಮುಫ್ತಿ - ಸೇಬು ಹಣ್ಣಿನ ಉದ್ಯಮ

ಜಮ್ಮುದಿಂದ ಕಾಶ್ಮೀರಕ್ಕೆ ಬರುವ ಟ್ರಕ್ ಒಂದೇ ದಿನದಲ್ಲಿ ತನ್ನ ಗಮ್ಯಸ್ಥಾನ ತಲುಪುತ್ತವೆ. ಆದರೆ, ಅದೇ ಟ್ರಕ್ ಸೇಬು ಹಣ್ಣುಗಳನ್ನು ತುಂಬಿಸಿಕೊಂಡು ಹಿಂದಿರುಗಲು ನಾಲ್ಕೈದು ದಿನಗಳನ್ನು ಹೇಗೆ ತೆಗೆದುಕೊಳ್ಳುತ್ತದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದಾರೆ.

government-inflicting-economic-terrorism-on-kashmir-says-mehbooba-mufti
ಸಾಗದ ಸೇಬು ಟ್ರಕ್​ಗಳು...ಕಾಶ್ಮೀರದ ಮೇಲೆ ಕೇಂದ್ರ ಸರ್ಕಾರದಿಂದ ಆರ್ಥಿಕ ಭಯೋತ್ಪಾದನೆ: ಮೆಹಬೂಬಾ ಮುಫ್ತಿ
author img

By

Published : Sep 27, 2022, 7:31 PM IST

ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ): ಸೇಬು ಹಣ್ಣಿನ ಉದ್ಯಮ ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಕಾಶ್ಮೀರದ ಮೇಲೆ ಆರ್ಥಿಕ ಭಯೋತ್ಪಾದನೆ ಹೇರುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ)ದ ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮಂಗಳವಾರ ತೋಟಗಾರಿಕೆ ಹಾಗೂ ಹಣ್ಣಿನ ರೈತರ ಜೊತೆಗೆ ಮಾತುಕತೆ ನಡೆಸಿದ ಮೆಹಬೂಬಾ, ಶ್ರೀನಗರ - ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಣ್ಣು ತುಂಬಿದ ಟ್ರಕ್‌ಗಳನ್ನು ಸುಗಮವಾಗಿ ಸಾಗಿಸುವಲ್ಲಿ ಅಧಿಕಾರಿಗಳ ವೈಫಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಾಶ್ಮೀರಿ ಹಣ್ಣುಗಳ ಬೆಲೆ ಕಡಿಮೆ ಮಟ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಉದ್ದೇಶ ಪೂರ್ವಕವಾಗಿ ಟ್ರಕ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಜಮ್ಮುದಿಂದ ಕಾಶ್ಮೀರಕ್ಕೆ ಬರುವ ಟ್ರಕ್ ಒಂದೇ ದಿನದಲ್ಲಿ ತನ್ನ ಗಮ್ಯಸ್ಥಾನ ತಲುಪುತ್ತವೆ. ಆದರೆ, ಅದೇ ಟ್ರಕ್ ಹಣ್ಣುಗಳನ್ನು ತುಂಬಿಸಿಕೊಂಡು ಜಮ್ಮುವಿಗೆ ಹಿಂದಿರುಗಲು ನಾಲ್ಕೈದು ದಿನಗಳನ್ನು ಹೇಗೆ ತೆಗೆದುಕೊಳ್ಳುತ್ತದೆ?. ಇದೊಂದು ಪಿತೂರಿಯಾಗಿದೆ ಎಂದು ಕಿಡಿಕಾರಿದರು.

ಇದು ಕಾಶ್ಮೀರಿ ಹಣ್ಣುಗಳ ಬೆಲೆಗೆ ಪೆಟ್ಟು ನೀಡುವ ಉದ್ದೇಶವಾಗಿದೆ. ಈ ಮೂಲಕ ಆರ್ಥಿಕ ಭಯೋತ್ಪಾದನೆ ಹೇರಲಾಗುತ್ತಿದೆ. ಕಾಶ್ಮೀರಿಗಳ ಆರ್ಥಿಕತೆ ಧ್ವಂಸಗೊಳಿಸಬೇಕೆಂದು ಕೇಂದ್ರ ಸರ್ಕಾರ ಬಯಸುತ್ತದೆ. ಇಸ್ರೇಲ್​ನಿಂದ ಆರ್ಥಿಕ ದಿಗ್ಬಂಧನವನ್ನು ಎದುರಿಸುತ್ತಿರುವ ಪ್ಯಾಲೆಸ್ಟೀನಿಯಾದ ಪರಿಸ್ಥಿತಿಯೇ ಇಲ್ಲಿ ಕೂಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ದೂರಿದರು.

ತೋಟಗಾರಿಕೆ ಕಾಶ್ಮೀರದ ಆರ್ಥಿಕತೆಯ ಬೆನ್ನೆಲುಬು ಮತ್ತು ಹಲವು ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಾಭ ಹೊಂದಿದ್ದಾರೆ. ಈ ವಿಷಯವನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಚರ್ಚಿಸಿದ್ದು, ವಾಹನಗಳಿಗೆ ಸಂಚರಿಸಲು ಏಕೆ ಅವಕಾಶ ನೀಡುತ್ತಿಲ್ಲ ಎಂದು ವಿಚಾರಿಸುವಂತೆ ಮನವಿ ಮಾಡಿದ್ದೇನೆ. ಇದನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೆ ಪರಿಸ್ಥಿತಿ ಕಷ್ಟಕರವಾಗಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ: ಎನ್​​ಕೌಂಟರ್​​ನಲ್ಲಿ ಉಗ್ರ ಮಟ್ಯಾಷ್​, ಇಬ್ಬರು ನಾಗರಿಕರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.