ಮಾಮಲ್ಲಪುರಂ (ತಮಿಳುನಾಡು) : ಜಾಗತಿಕ ಟೆಕ್ದೈತ್ಯ ಸಂಸ್ಥೆ ಗೂಗಲ್ನ ಸಿಇಒ ಸುಂದರ್ ಪಿಚೈ ಅವರು ಇಂದು ಪ್ರವಾಸಕ್ಕೆಂದು ಕುಟುಂಬಸಮೇತ ತಮಿಳುನಾಡಿಗೆ ಆಗಮಿಸಿದ್ದು, ಬಿಗಿಭದ್ರತೆಯ ಮೂಲಕ ಐತಿಹಾಸಿಕ ಮಹಾಬಲಿಪುರಂ ಮತ್ತು ಅರ್ಚುನನ್ ಥಾಬಸು ಎಂಬ ಸ್ಥಳಗಳಿಗೆ ಭೇಟಿ ನೀಡಿದರು. ಮಹಾಬಲಿಪುರಂ ಭೇಟಿಯ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಸಾರ್ವಜನಿಕರಿಗೆ ಗೊತ್ತಾಗದ ಹಾಗೆ ಕಪ್ಪು ಬಣ್ಣದ ಮಾಸ್ಕ್ ಮತ್ತು ಕ್ಯಾಪ್ ಅನ್ನು ಪಿಚೈ ಧರಿಸಿದ್ದರು.
ಮಧುರೈನಲ್ಲಿ ಜನಿಸಿರುವ ಪಿಚೈ ಐಐಟಿ ಖರಗ್‌ಪುರದಿಂದ ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದು, ನಂತರ ಮೆಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಶಿಕ್ಷಣ ಪಡೆದಿದ್ದಾರೆ. ತಮ್ಮ ವೃತ್ತಿಜೀವನವನ್ನು ಮೆಟೀರಿಯಲ್ಸ್ ಇಂಜಿನಿಯರ್ ಆಗಿ ಪ್ರಾರಂಭಿಸಿದ್ದು 2004 ರಲ್ಲಿ ಗೂಗಲ್ ಸಂಸ್ಥೆಗೆ ಸೇರಿದ್ದಾರೆ. ಅಲ್ಲಿ ಕ್ಲೈಂಟ್ ಸಾಫ್ಟ್‌ವೇರ್ ಉತ್ಪನ್ನಗಳ ನಿರ್ವಹಣೆ ಮತ್ತು ನಾವೀನ್ಯತೆ ಪ್ರಯತ್ನಗಳನ್ನು ಮುನ್ನಡೆಸಿದರು. 2015ರ ಆಗಸ್ಟ್ನಲ್ಲಿ ಗೂಗಲ್ನ ಸಿಇಓ ಆಗಿ ನೇಮಕಗೊಂಡಿದ್ದರು.
ಮಹಾಬಲಿಪುರಂ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಒಂದು ಪಟ್ಟಣವಾಗಿದ್ದು, 7 ಮತ್ತು 8ನೇ ಶತಮಾನದಲ್ಲಿ ಪಲ್ಲವರು ನಿರ್ಮಿಸಲ್ಪಟ್ಟ ದೇವಾಲಯವಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಇದು ಸೇರ್ಪಡೆಯಾಗಿದೆ.
ಇದನ್ನೂ ಓದಿ: FIDE ವಿಶ್ವ ರ‍್ಯಾಪಿಡ್ ಚೆಸ್: ಕಂಚಿನ ಪದಕ ಗೆದ್ದ ಭಾರತದ ಸವಿತಾಶ್ರೀ ಬಾಸ್ಕರ್