ಚಿಲಕಲೂರಿಪೇಟೆ( ಆಂಧ್ರಪ್ರದೇಶ): ಗಣೇಶ ಚತುರ್ಥಿ ಬಂತು ಎಂದರೆ ವಿಶೇಷವಾಗಿ ಮಹಾರಾಷ್ಟ್ರ ಸೇರಿ ದಕ್ಷಿಣ ಭಾರತದಲ್ಲಿ ಹಬ್ಬ ಕಳೆ ಕಟ್ಟುತ್ತದೆ. ನಾನಾ ವಿಧದ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತದೆ.
ಇನ್ನು ಹಬ್ಬಕ್ಕಾಗಿ ಅನೇಕ ಕಲಾವಿದರು ತಮ್ಮ ಸೃಜನಶೀಲತೆ ಅನಾವರಣಗೊಳಿಸುತ್ತಾರೆ. ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆಯ ಶರಾಫ್ ಬಜಾರ್‌ನಲ್ಲಿ ಸ್ವರ್ಣ ಲಕ್ಷ್ಮಿ ಮಹಾಗಣಪತಿಯು ಅಂತಹ ಸೃಜನಶೀಲತೆಯಿಂದ ರಚಿಸಲ್ಪಟ್ಟ ಪ್ರತಿಮೆಯಾಗಿದೆ. ಚಿಲಕಲೂರಿಪೇಟೆಯ ಚಿನ್ನದ ವ್ಯಾಪಾರಿ, ಗೋಲ್ಡನ್ ಯೂತ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಆಯೋಜಿಸಲಾದ ಈ ವಿನಾಯಕನ ಮೂರ್ತಿಯನ್ನು ಹೈದರಾಬಾದ್‌ನಲ್ಲಿ ತಯಾರಿಸಲಾಗಿದೆ.
ಕೋಲ್ಕತ್ತಾದ ಕುಶಲಕರ್ಮಿಗಳ ನೆರವಿನಿಂದ ಸಂಘಟಕರು ವಿಶೇಷವಾಗಿ ವಿನಾಯಕನ ಮೂರ್ತಿಯನ್ನು ತಯಾರಿಸಿದ್ದಾರೆ. ಒಂದು ಲಕ್ಷ ಲಕ್ಷ್ಮಿ ನಾಣ್ಯಗಳನ್ನು ಬಳಸಿ ವಿಗ್ರಹವನ್ನು ಚಿನ್ನದ ಲೇಪನದಿಂದ ಅಲಂಕರಿಸಲಾಗಿದೆ. ಶರಫ್ ಬಜಾರ್ ಉತ್ಸವ ಸಮಿತಿ ಸಂಚಾಲಕ ಪೊಟ್ಟಿ ರತ್ನಬಾಬು ಮಾತನಾಡಿ, ಮಾಣಿಕ್ಯ, ಪಚ್ಚೆ, ಅಮೆರಿಕದ ವಜ್ರಗಳನ್ನು ಅಲಂಕಾರಕ್ಕೆ ಬಳಸಲಾಗಿದೆ ಎಂದು ಹೇಳಿದ್ದಾರೆ.
ಇಂತಹ ವಿಶೇಷ ಗಣಪತಿಯನ್ನು ನೋಡಲು ಭಕ್ತ ಸಾಗರ ಹರಿದು ಬರುತ್ತಿದೆ. ಅಷ್ಟೇ ಅಲ್ಲ ಇದು ಜನರ ಆಕರ್ಷಣೀಯ ಕೇಂದ್ರವೂ ಆಗಿ ಪರಿಣಮಿಸಿದೆ.
ಇದನ್ನು ಓದಿ:ಗಣೇಶ ಚತುರ್ಥಿ 2022: ಈ ಐದು ವಿಶಿಷ್ಟ ಗಣಪ ಮೂರ್ತಿಗಳ ಬಗ್ಗೆ ನಿಮಗೆಷ್ಟು ಗೊತ್ತು?