ETV Bharat / bharat

ಒಳ ಉಡುಪಿನಲ್ಲಿಟ್ಟು ಚಿನ್ನ ಸಾಗಣೆ: 58.16 ಲಕ್ಷ ರೂ. ಮೌಲ್ಯದ ಬಂಗಾರ ವಶ -ಮಹಿಳೆ ಬಂಧನ - ಒಳ ಉಡುಪಿನಲ್ಲಿಟ್ಟು ಚಿನ್ನ ಸಾಗಾಣೆ

ಮಹಿಳೆಯೊಬ್ಬಳು ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಣೆ ಮಾಡ್ತಿದ್ದಾಗ ಹೈದರಾಬಾದ್ ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ಮಾಡಿ, ಆಕೆಯ ಬಂಧನ ಮಾಡಿದ್ದಾರೆ.

Gold
Gold
author img

By

Published : Oct 5, 2021, 8:34 PM IST

Updated : Oct 5, 2021, 8:53 PM IST

ಹೈದರಾಬಾದ್​(ತೆಲಂಗಾಣ): ದುಬೈ ಮಾರ್ಗವಾಗಿ ಸುಡಾನ್​​ನಿಂದ ಬಂದಿದ್ದ ಮಹಿಳೆಯೊಬ್ಬಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿರುವ ಏರ್​​ಪೋರ್ಟ್​​ ಪೊಲೀಸರು 58.16 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಒಳ ಉಡುಪಿನಲ್ಲಿ ಸುಮಾರು 1,209 ಗ್ರಾಂ ಚಿನ್ನದ ಪೇಸ್ಟ್​​​ ಇಟ್ಟುಕೊಂಡು ಬಂದಿದ್ದು, ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದಾಗ ಸಿಕ್ಕಿಬಿದ್ದಿದ್ದಾಳೆ ಎಂದು ಕಸ್ಟಮ್ಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಮಾರಾಟವಾಗ್ತಿವೆ ನಕಲಿ ಟಿಕೆಟ್​​.. ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಬರುವ ಮುನ್ನ ಎಚ್ಚರ!

ಸುಡಾನ್​​ನಿಂದ ಈ ಮಹಿಳೆ ಬಂದಿದ್ದು, ಒಳ ಉಡುಪು ಹಾಗೂ ಪರ್ಸ್​​ನಲ್ಲಿ ಚಿನ್ನದ ಪೇಸ್ಟ್​ ಅಡಗಿಸಿಟ್ಟಿದ್ದಳು. ಅನುಮಾನ ಬಂದ ಕಾರಣ ಆಕೆಯನ್ನ ತಡೆದು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಆಕೆಯ ವಿರುದ್ಧ ಈಗಾಗಲೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Oct 5, 2021, 8:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.