ETV Bharat / bharat

ಚಿನ್ನ ಕಳ್ಳಸಾಗಣೆ ಪ್ರಕರಣ.. ಆರೋಪಿ ಮಹಿಳೆ ಜತೆ 7 ಬಾರಿ ಯುಎಇಗೆ ಪ್ರಯಾಣಿಸಿದ್ದ ಶಿವಶಂಕರ್ - ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್

ಶಿವಶಂಕರ್ ಸಹಾಯದಿಂದ ಆರೋಪಿಗಳು ನಡೆಸುವ ಚಿನ್ನದ ಕಳ್ಳಸಾಗಣೆ ಚಟುವಟಿಕೆಗಳು ಭಾರತ ಮತ್ತು ಯುಎಇ ನಡುವಿನ ಸ್ನೇಹ ಸಂಬಂಧದ ಮೇಲೆ ಪರಿಣಾಮ ಬೀರಿವೆ. ಯುಎಇ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಉದ್ಯೋಗವನ್ನು ನೀಡಿದೆ..

Gold smuggling
ಚಿನ್ನದ ಕಳ್ಳಸಾಗಣೆ ಪ್ರಕರಣ
author img

By

Published : Dec 30, 2020, 9:05 AM IST

ಕೊಚ್ಚಿ (ಕೇರಳ) : ಕೇರಳದ ಮುಖ್ಯಮಂತ್ರಿ ಕಚೇರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರೊಂದಿಗೆ ಏಳು ಬಾರಿ ಯುಎಇಗೆ ಪ್ರಯಾಣಿಸಿದ್ದಾರೆ ಎಂದು ಕಸ್ಟಮ್ಸ್ ಇಲಾಖೆ, ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹೇಳಿದೆ.

"ಎಲ್ಲಾ ಏಳು ಬಾರಿ ಅವರು ಯುಎಇಯ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದರು ಮತ್ತು ಶಿವಶಂಕರ್ ಅವರು ವೈಯಕ್ತಿಕವಾಗಿ ವಸತಿ ವೆಚ್ಚ ಭರಿಸಿದ್ದರು. ಈ ಪ್ರವಾಸಗಳನ್ನು ಗುಪ್ತ ಉದ್ದೇಶದಿಂದ ಮಾಡಲಾಗಿದ್ದು, ಏಜೆನ್ಸಿಯಿಂದಲೂ ಇದನ್ನು ಪರಿಶೀಲಿಸಲಾಗುತ್ತಿದೆ. ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಒಂದೇ ದೇಶಕ್ಕೆ ಅನೇಕ ಪ್ರವಾಸಗಳನ್ನು ಮಾಡುವುದು ಅಸಾಮಾನ್ಯವಾದುದು" ಎಂದು ಕಸ್ಟಮ್ಸ್ ಹೇಳಿದೆ.

ಶಿವಶಂಕರ್ ಸಹಾಯದಿಂದ ಆರೋಪಿಗಳು ನಡೆಸುವ ಚಿನ್ನದ ಕಳ್ಳಸಾಗಣೆ ಚಟುವಟಿಕೆಗಳು ಭಾರತ ಮತ್ತು ಯುಎಇ ನಡುವಿನ ಸ್ನೇಹ ಸಂಬಂಧದ ಮೇಲೆ ಪರಿಣಾಮ ಬೀರಿವೆ. ಯುಎಇ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಉದ್ಯೋಗವನ್ನು ನೀಡಿದೆ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.