ETV Bharat / bharat

ಸಮುದ್ರದಲ್ಲಿ ಸಿಕ್ಕ ಸಣ್ಣದೊಂದು ಮೀನು... 2.60 ಲಕ್ಷ ರೂ.ಗೆ ಹರಾಜು

ಚಿನ್ನದ ಬಣ್ಣದಂತೆ ಕಾಣುವ ಈ ಮೀನು ಆಳ ಸಮುದ್ರದಲ್ಲಿ ಮಾತ್ರ ಕಾಣಸಿಗುತ್ತವೆ. ಮಾರುಕಟ್ಟೆಯಲ್ಲಿ ಈ ಮೀನಿಗೆ ಇನ್ನಿಲ್ಲದ ಬೇಡಿಕೆ ಇದೆ.

author img

By

Published : Jun 23, 2021, 8:20 PM IST

GOLD FISH
GOLD FISH

ಪೂರ್ವ ಗೋದಾವರಿ (ಆಂಧ್ರ ಪ್ರದೇಶ): ಸಮುದ್ರದಲ್ಲಿ ಸಿಕ್ಕ ಸಣ್ಣ ಮೀನುವೊಂದು ದಾಖಲೆಯ 2.60 ಲಕ್ಷ ರೂಪಾಯಿಗೆ ಹರಾಜುಗೊಂಡಿದೆ. ಮೀನುಗಳಲ್ಲೇ ಅತ್ಯಂತ ದುಬಾರಿ ಎಂದು ಗುರುತಿಸಿಕೊಂಡಿರುವ ಕಚಿಲಿ(ಸಮುದ್ರದ ಚಿನ್ನದ ಮೀನು) ಮೀನುಗಾರನ ಬಲೆಗೆ ಬಿದ್ದಿತ್ತು.

ಸಿಂಗರಾಜು ಎಂಬ ಮೀನುಗಾರ ಸಮುದ್ರಕ್ಕೆ ಮೀನು ಹಿಡಿಯಲು ತೆರಳಿದ್ದ ವೇಳೆ ಈ ಮೀನು ಆತನ ಬಲೆಗೆ ಬಿದ್ದಿದೆ. ಚಿನ್ನದ ಬಣ್ಣದಂತೆ ಕಾಣುವ ಈ ಮೀನು ಆಳ ಸಮುದ್ರದಲ್ಲಿ ಮಾತ್ರ ಕಾಣಸಿಗುತ್ತವೆ. ಮೀನು ಮಾರುಕಟ್ಟೆಯಲ್ಲಿ ವ್ಯಾಪಕ ಬೇಡಿಕೆ ಇದ್ದು, ಈ ಮೀನು ವಿವಿಧ ಔಷಧಗಳ ತಯಾರಿಕೆಗೆ ಬಳಕೆ ಮಾಡಲಾಗುತ್ತದಂತೆ

ಇದನ್ನೂ ಓದಿರಿ: Chinaಗೆ ಸೆಡ್ಡು; ಹಿಂದೂ ಮಹಾಸಾಗರದಲ್ಲಿ ಭಾರತ - ಅಮೆರಿಕ ಜಂಟಿ ಸಮರಾಭ್ಯಾಸ

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಂಗರಾಜು, ಅದೃಷ್ಟವಂತರಿಗೆ ಮಾತ್ರ ಚಿನ್ನದ ಮೀನು ಸಿಗುತ್ತವೆ. ನೋಡಲು ಈ ಮೀನು ಚಿನ್ನದ ಬಣ್ಣದಂತೆ ಕಾಣುತ್ತದೆ ಎಂದಿದ್ದಾರೆ. ಪ್ರಮುಖವಾಗಿ ಮೀನಿನ ಹೊಟ್ಟೆಯಲ್ಲಿರುವ ಬಿಳಿ ದ್ರವ್ಯವನ್ನ ವಿವಿಧ ಔಷಧಿ ತಯಾರಿಕೆಗೆ ಬಳಕೆ ಮಾಡಲಾಗುತ್ತದೆಯಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.