ಬೆಂಗಳೂರು : ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆ ಕಂಡಿದೆ. ಹತ್ತು ಗ್ರಾಮ್ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಏರಿಕೆಯಿಂದಾಗಿ ಶುಕ್ರವಾರ 54,060 ರೂಪಾಯಿಗೆ ತಲುಪಿದೆ. ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಶುಕ್ರವಾರದಂದು ಹತ್ತು ಗ್ರಾಮ್‌ನ 22 ಕ್ಯಾರೆಟ್ ಚಿನ್ನದ ಬೆಲೆ 49,550 ರೂಪಾಯಿ ಇದ್ದು, ಚೆನ್ನೈನಲ್ಲಿ ರೂ.50,050 ಮತ್ತು ಬೆಂಗಳೂರಿನಲ್ಲಿ ರೂ.49,550 ಆಗಿದೆ.
ಒಂದು ಕಿಲೋಗ್ರಾಮ್ ಬೆಳ್ಳಿಯ ಬೆಲೆಯೂ ಏರಿಕೆಯಾಗಿ 70,000 ರೂಪಾಯಿ ತಲುಪಿದೆ. ಒಂದು ಕೆಜಿ ಬೆಳ್ಳಿಯ ಬೆಲೆ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದ ಹೆಚ್ಚಿನ ಪ್ರಮುಖ ನಗರಗಳಲ್ಲಿ 70,000 ರೂಪಾಯಿ ಆಗಿದೆ. ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ನಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 74,400 ರೂಪಾಯಿ ತಲುಪಿದೆ. ಈಗ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೇಗಿದೆ ಎಂಬುದನ್ನು ನೋಡೋಣ.
ರಾಜ್ಯದ ಜಿಲ್ಲೆಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ (1 ಗ್ರಾಮ್ಗೆ.. ರೂಪಾಯಿಗಳಲ್ಲಿ)
ಜಿಲ್ಲೆಗಳು | 22 ಕ್ಯಾರೆಟ್ ಚಿನ್ನದ ಬೆಲೆ | 24 ಕ್ಯಾರೆಟ್ ಚಿನ್ನದ ಬೆಲೆ | ಬೆಳ್ಳಿಯ ಬೆಲೆ |
ಬೆಂಗಳೂರು | 4,955 | 5,409 | 71 |
ಮೈಸೂರು | 4,955 | 5,482 | 71.40 |
ದಾವಣಗೆರೆ | 4,950 | 5,360 | 70.48 |
ಶಿವಮೊಗ್ಗ | 4,950 | 5,360 | 70.48 |
ಹುಬ್ಬಳ್ಳಿ | 4,930 | 5,360 | 72.50 |
ಬೆಳಗಾವಿ | 4,955 | 5,405 | 70.50 |
ಇದನ್ನೂ ಓದಿ: ತರಕಾರಿ ದರದಲ್ಲಿ ದಿನದಿಂದ ದಿನಕ್ಕೆ ಏರಿಳಿಕೆ : ಇಂದಿನ ಮಾರುಕಟ್ಟೆ ದರ ಹೀಗಿದೆ..