ನವದೆಹಲಿ/ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,900 ರೂಪಾಯಿ ಮತ್ತು 24 ಕ್ಯಾರೆಟ್ 51,160 ರೂ. ಇದೆ. ಚೆನ್ನೈನಲ್ಲಿ 22K ಕ್ಯಾರೆಟ್ ಚಿನ್ನ 46,760 ರೂ., 24K ಕ್ಯಾರೆಟ್ ಚಿನ್ನ 51,010 ರೂ.ಗೆ ಮಾರಾಟವಾಗುತ್ತಿದೆ.
ರಾಜ್ಯದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ:
ನಗರ | ಚಿನ್ನ22K (ಗ್ರಾಂ) | ಚಿನ್ನ24K (ಗ್ರಾಂ) | ಬೆಳ್ಳಿ |
ಬೆಂಗಳೂರು | 4692 | 5100 | 57.1 |
ಮಂಗಳೂರು | 4,695 | 5,122 | 62.30 |
ಹುಬ್ಬಳ್ಳಿ | 5,101 | 5,565 | 62.55 |
ಮೈಸೂರು | 4,730 | 5,239 | 58.10 |
ದಾವಣಗೆರೆ | 4,671 | 5,061 | 62.38 |
ಮಂಗಳೂರಿನಲ್ಲಿ 22K ಚಿನ್ನದ ಬೆಲೆ ಪ್ರತಿ ಗ್ರಾಂಗೆ 21 ರೂಪಾಯಿ ಏರಿಕೆಯಾಗಿದ್ದರೆ, 24K ಚಿನ್ನದ ಬೆಲೆಯಲ್ಲಿ 22 ರೂ. ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆಯಲ್ಲಿ 346 ರೂ., 24K ಚಿನ್ನದ ಬೆಲೆಯಲ್ಲಿ 378 ರೂ. ಹೆಚ್ಚಾಗಿದೆ. ಬೆಳ್ಳಿ ದರದಲ್ಲಿ 60 ಪೈಸೆ ಏರಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ಬೆಲೆಯಲ್ಲಿ 6 ರೂ., 24K ಚಿನ್ನದ ಬೆಲೆಯಲ್ಲಿ 8 ರೂ ಹೆಚ್ಚಳವಾಗಿದೆ. ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 10 ರೂ., 24K ಚಿನ್ನದ ಬೆಲೆಯಲ್ಲಿ 11 ರೂ. ಏರಿಕೆಯಾಗಿದೆ.
ಇದನ್ನೂ ಓದಿ: ಭಾರತದಲ್ಲಿ 20 ಸಾವಿರ ಗಡಿ ದಾಟಿದ ಕೋವಿಡ್, ಸಕ್ರಿಯ ಪ್ರಕರಣಗಳು ದಿಢೀರ್ ಏರಿಕೆ