ETV Bharat / bharat

76 ವರ್ಷದ ಬಳಿಕ ಭಾರತ-ಪಾಕ್​ ಗಡಿ ರೇಖೆ ಬಳಿ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ - ಸೇವ್ ಶಾರದ ಕಮಿಟಿ

ಏಳು ದಶಕದ ಬಳಿಕ ಇಂದು ಕುಪ್ವಾರದ ಟೀಟ್ವಾಲ್ ಪ್ರದೇಶದಲ್ಲಿ ಶಾರದ ಮಾತೆಯ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ನೆರವೇರುತ್ತಿದೆ.

shardas idol
ಶಾರದಾ ದೇವಿಯ ವಿಗ್ರಹ
author img

By

Published : Mar 22, 2023, 10:52 AM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಇಂದು ಶಾರದಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲು ಸಕಲ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್​ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುವ ಸಂಭವವಿದೆ.

ಶೃಂಗೇರಿಯಿಂದ ವಿಗ್ರಹ ರವಾನೆ: 76 ವರ್ಷಗಳ ನಂತರ ಕುಪ್ವಾರದ ಟೀಟ್ವಾಲ್ ಪ್ರದೇಶದಲ್ಲಿ ಶಾರದೆಯ ದೇವಾಲಯವನ್ನು ನಿರ್ಮಿಸಲಾಗಿದೆ. ದೇವರ ವಿಗ್ರಹವನ್ನು ಕರ್ನಾಟಕದ ಶೃಂಗೇರಿ ಮಠದಿಂದ ತರಲಾಗಿದೆ. ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಹಿಂದೂ ಧರ್ಮದ ಪ್ರಕಾರ, ಹೊಸ ವರ್ಷದ ಮೊದಲ ದಿನವಾದ ಯುಗಾದಿಯಂದೇ ನಡೆಯುತ್ತಿರುವುದು ವಿಶೇಷ. ಈ ಐತಿಹಾಸಿಕ ಧಾರ್ಮಿಕ ಕಾರ್ಯದಲ್ಲಿ ಭಾಗವಾಗಲು ಅನೇಕ ಮಂದಿ ಭಕ್ತರು ಮತ್ತು ವಿದ್ವಾಂಸರು ಸೇರಿದಂತೆ ಕರ್ನಾಟಕದ ಶೃಂಗೇರಿ ಮಠದ ಸುಮಾರು 100 ಅರ್ಚಕರು ತೆರಳಿದ್ದಾರೆ.

ಸ್ಥಳೀಯ ಮುಸ್ಲಿಮರ ಬೆಂಬಲ: ಪ್ರತ್ಯೇಕ ಭಾರತ ಮತ್ತು ಪಾಕಿಸ್ತಾನ ವಿಭಜನೆಗೂ ಮೊದಲು ಟೀಟ್ವಾಲ್ ಶಾರದಾ ದೇವಿಯ ದೇವಾಲಯ ಐತಿಹಾಸಿಕ ಮಹತ್ವ ಹೊಂದಿತ್ತು. 1947 ರಲ್ಲಿ ಕ್ರಿಶಗಂಗಾ ನದಿಯ ದಡದಲ್ಲಿರುವ ಮೂಲ ದೇವಾಲಯ ಮತ್ತು ಪಕ್ಕದ ಗುರುದ್ವಾರವನ್ನು ಬುಡಕಟ್ಟು ದಾಳಿಕೋರರು ನಾಶಪಡಿಸಿದ್ದರು. ಇದೀಗ ಮತ್ತೆ ಟೀಟ್ವಾಲ್​ನಲ್ಲಿ ದೇವಿಯ ವಿಗ್ರಹ ಸ್ಥಾಪಿಸಲಾಗುತ್ತಿದೆ. ಈ ದೇವಾಲಯದ ನಿರ್ಮಾಣಕ್ಕೆ ಸ್ಥಳೀಯ ಮುಸ್ಲಿಮರು ಸಹ ವ್ಯಾಪಕ ಬೆಂಬಲ ನೀಡಿದ್ದಾರೆ. ಐತಿಹಾಸಿಕ ಮರುಸ್ಥಾಪನೆಯ ಕೆಲಸ ನಡೆಯುತ್ತಿದೆ. ದೀರ್ಘಕಾಲದಿಂದ ಈ ಪ್ರದೇಶದಲ್ಲಿ ಘನತೆ ಕಳೆದುಕೊಂಡಿರುವ ದೇವಾಲಯವನ್ನು ಮರಳಿ ಸ್ಥಾಪಿಸುತ್ತಿರುವುದರಿಂದ ಪವಿತ್ರ ಯಾತ್ರಾ ಸ್ಥಳವಾಗಿ ಪುನಃ ಮನ್ನಣೆ ಪಡೆಯುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೀಟ್ವಾಲ್ ಪ್ರದೇಶದ ಕುರಿತು...: ಒಂದು ಕಾಲದಲ್ಲಿ ಹಿಂದು, ಬೌದ್ಧರ ಅಧ್ಯಯನ ಸ್ಥಳವಾಗಿದ್ದ ಕಾಶ್ಮೀರದ ಶಾರದಾಪೀಠವು ಪ್ರಾಚೀನ ನಾಗರಿಕತೆಯ ಸಂಕೇತವಾಗಿತ್ತು. ಜೊತೆಗೆ ಉನ್ನತ ಕಲಿಕೆಯ ಕೇಂದ್ರವಾಗಿತ್ತು. ಭಾರತ ಮಾತ್ರವಲ್ಲದೇ, ಮಧ್ಯ ಏಷ್ಯಾದಿಂದಲೂ ವಿದ್ವಾಂಸರು ಬರುತ್ತಿದ್ದರು. ಅಶೋಕ ಚಕ್ರವರ್ತಿಯ ಆಳ್ವಿಕೆಯಿಂದ ರಾಜ ಲಲಿತಾದಿತ್ಯನವರೆಗೆ ಇಲ್ಲಿ ಬೌದ್ಧ ಧರ್ಮ ಹೆಚ್ಚು ಪ್ರಾಬಲ್ಯ ಹೊಂದಿತ್ತು. ಇದೀಗ, ಪಿಒಕೆಯಲ್ಲಿರುವ ಶಾರದಾಪೀಠಕ್ಕೆ ತೀರ್ಥಯಾತ್ರೆ ಪುನರಾರಂಭಿಸುವ ಸಲುವಾಗಿ ಶಾರದಾ ಸೇವಾ ಕಮಿಟಿಯವರು ಕಳೆದ ಒಂದೂವರೆ ದಶಕಗಳಿಂದ ಹೋರಾಟ ನಡೆಸುತ್ತಲೇ ಇದ್ದಾರೆ.

ಇದನ್ನೂ ಓದಿ : ಎಲ್‌ಒಸಿಯಲ್ಲಿ ಶಾರದಾ ದೇವಿ ದೇವಾಲಯದ ಪುನರುತ್ಥಾನ ಕೆಲಸ ಆರಂಭ: ಪಾಕ್​ನಿಂದಲೂ ಸಹಕಾರ!

"ಕಳೆದ 20 ವರ್ಷಗಳ ಶ್ರಮದ ಫಲವಾಗಿ ಈಗ ಮತ್ತೆ ಶಾರದಾ ಪೀಠ ಸ್ಥಾಪನೆಗೆ ಅವಕಾಶ ಸಿಕ್ಕಿದೆ. ಇದಕ್ಕೆ ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಕೂಡ ಅನುಮತಿ ನೀಡಿದೆ. ನೀಲಂ ಜಿಲ್ಲೆಯಲ್ಲಿ ಹಿಂದೂಗಳಿಲ್ಲದ ಕಾರಣ ಅಲ್ಲಿಯ ಮುಸ್ಲಿಂ ಜನ ಈ ದೇವಾಲಯ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಈಗಾಗಲೇ ಪಾಕ್ ಸುಪ್ರೀಂ ಕೋರ್ಟ್ ಶಾರದಾ ಪೀಠ ಹಿಂದೂಗಳ ಪವಿತ್ರ ಸ್ಥಾನ ಎಂದು ಘೋಷಣೆ ಮಾಡಿದೆ" ಎಂದು ಸೇವ್ ಶಾರದ ಕಮಿಟಿಯ ಅಧ್ಯಕ್ಷ ಕಾಶ್ಮೀರದ ರವೀಂದ್ರ ಪಂಡಿತ್ ತಿಳಿಸಿದ್ದಾರೆ.

ಇದನ್ನೂ ಓದಿ : ಪೂರ್ಣಿಯಾದಲ್ಲಿ ಪಾಕಿಸ್ತಾನದ ಧ್ವಜಾರೋಹಣ ಮಾಡಿದ ಆರೋಪ ಸುಳ್ಳು, ವದಂತಿ ಹಬ್ಬಿಸಿದವರು ಯಾರು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.