ETV Bharat / bharat

ಈ ರಾಜ್ಯದಲ್ಲಿ ಲೀಟರ್‌ ಮೇಕೆ ಹಾಲಿಗೆ 400 ರೂಪಾಯಿ!: ಕಾರಣ ಇದೇ.. - ಡೆಂಗ್ಯೂ

ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಮೇಕೆ ಹಾಲಿಗೆ ಭಾರಿ ಬೇಡಿಕೆ ಬಂದಿದೆ. ವ್ಯಾಪಾರಿಗಳು ಲೀಟರ್‌ ಮೇಕೆ ಹಾಲನ್ನು 400 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

goat milk rate increases ten times in madhya pradesh amid rise of dengue cases
ಈ ರಾಜ್ಯದಲ್ಲಿ ಲೀಟರ್‌ ಮೇಕೆ ಹಾಲಿಗೆ 400 ರೂಪಾಯಿ!; ಕಾರಣ ಇದೇ..
author img

By

Published : Oct 22, 2021, 5:04 PM IST

ಛತರ್‌ಪುರ್‌(ಮಧ್ಯಪ್ರದೇಶ): ಮಧ್ಯಪ್ರದೇಶದ ಛತರ್‌ಪುರ್ ಜಿಲ್ಲೆಯಲ್ಲಿ ಮೇಕೆ ಹಾಲಿನ ಬೆಲೆ ಗಗನಕ್ಕೇರಿದೆ. 30 ರಿಂದ 40 ರೂಪಾಯಿಗೆ ಮಾರಾಟ ಆಗುತ್ತಿದ್ದ ಲೀಟರ್ ಮೇಕೆ ಹಾಲಿನ ಬೆಲೆ ಇದೀಗ 300 ರಿಂದ 400 ರೂಪಾಯಿಗೆ ಏರಿದೆ. ಇದಕ್ಕೆ ಕಾರಣ ಡೆಂಘೀ ಜ್ವರ.

ಮಧ್ಯಪ್ರದೇಶದಲ್ಲಿ ಡೆಂಘೀ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಛತರ್‌ಪುರ್‌ ಸಮೀಪದ ಜಿಲ್ಲೆಗಳಲ್ಲಿ ಡೆಂಘೀ ಜ್ವರ ತೀವ್ರತೆ ಹೆಚ್ಚಾಗಿದೆ. ಮೇಕೆ ಹಾಲು ಕುಡಿದರೆ ಡೆಂಘೀ ಗುಣವಾಗುತ್ತದೆ ಎಂದು ಈ ಭಾಗದ ಜನರು ನಂಬಿದ್ದಾರೆ. ಹೀಗಾಗಿ ಹಾಲಿನ ಬೇಡಿಕೆ ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ಮೇಕೆ ಹಾಲು ಸಿಗುವುದು ಕೂಡ ಕಷ್ಟ ಎಂದು ಸ್ಥಳೀಯರು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ವೈದ್ಯರು, ಮೇಕೆ ಹಾಲು ಕುಡಿಯುವುದು ಡೆಂಘೀ ರೋಗಿಗಳಿಗೆ ಒಳ್ಳೆಯದು. ಆದರೆ ಇದು ಪರಿಹಾರವಲ್ಲ, ಇದು ಕೇವಲ ಪುರಾಣ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.