ETV Bharat / bharat

ಪ್ರಧಾನ ಅರ್ಚಕರಾಗಿ ಯುವತಿಯರಿಂದ ಮಹಾ ಗಂಗಾರತಿ: ವಾರಣಾಸಿಯಲ್ಲಿ ಇತಿಹಾಸ ನಿರ್ಮಾಣ - ಯುವತಿಯರಿಂದ ಮಹಾ ಗಂಗಾ ಆರತಿ

ವಾರಣಾಸಿಯಲ್ಲಿ ನಡೆಯುವ ಮಹಾ ಗಂಗಾರತಿಯಲ್ಲಿ (Maha Gangarati) ಇದೇ ಮೊದಲ ಸಲ ಪ್ರಧಾನ ಅರ್ಚಕರಾಗಿ ಯುವತಿಯರು ನೇಮಕಗೊಂಡಿದ್ದು, ಈ ಮೂಲಕ ಹೊಸ ದಾಖಲೆ ನಿರ್ಮಾಣಗೊಳ್ಳಲಿದೆ.

Girls perform in Ganga Aarti
Girls perform in Ganga Aarti
author img

By

Published : Nov 18, 2021, 10:11 PM IST

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಾಳೆ ಹೊಸ ಇತಿಹಾಸ ನಿರ್ಮಾಣಗೊಳ್ಳಲಿದೆ. ಮಹಾ ಗಂಗಾರತಿ (Ganga Aarti) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಅರ್ಚಕರಾಗಿ ಯುವತಿಯರು (Girls to perform Gangarati) ಗಂಗಾ ಆರತಿ ನಡೆಸಿಕೊಡಲಿದ್ದಾರೆ.

dev deepawli in kashi

ಪ್ರತಿವರ್ಷ ಕಾರ್ತಿಕ ಪೂರ್ಣಿಮೆಯ ದಿನ 'ದೇವ್‌ ದೀಪಾವಳಿ' (Dev Deepawali) ಆಚರಣೆ ಮಾಡಲಾಗುತ್ತಿದ್ದು, ವಾರಣಾಸಿಯಲ್ಲಿ ಗಂಗಾ ಆರತಿ ನಡೆಯುತ್ತದೆ. ಆದರೆ ಇದೇ ಪ್ರಥಮ ಬಾರಿಗೆ ಶೀಟ್ಲಾ ಘಾಟ್​​ನಲ್ಲಿ ಪ್ರಧಾನ ಅರ್ಚಕರಾಗಿ ಹೆಣ್ಣುಮಕ್ಕಳು ಮಹಾ ಗಂಗಾರತಿಯಲ್ಲಿ ಭಾಗಿಯಾಗಲಿದ್ದಾರೆ.

dev deepawli in kashi
ಹೆಣ್ಣುಮಕ್ಕಳಿಗೆ ಗಂಗಾರತಿ ತರಬೇತಿ

ಇದಕ್ಕಾಗಿ ಸಂಘಟಕರು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು 84 ಘಾಟ್​ಗಳಲ್ಲಿ 12 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ವರ್ಷ ಯುವತಿಯರು ರಿದ್ಧಿ-ಸಿದ್ಧಿ ಆರತಿಯಲ್ಲಿ ಮಾತ್ರ ಭಾಗಿಯಾಗುತ್ತಿದ್ದರು. ಆದರೆ ಇದೀಗ ಪುರುಷ ಅರ್ಚಕರ ಜಾಗದಲ್ಲಿ ಪ್ರಧಾನ ಅರ್ಚಕರಾಗಿ ಐವರು ಹುಡುಗಿಯರು ನೇಮಕಗೊಂಡಿದ್ದಾರೆ.

ಇದನ್ನೂ ಓದಿರಿ: 20 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಆತ್ಮಹತ್ಯೆಗೆ ಶರಣು

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗಂಗೋತ್ರಿ ಸೇವಾ ನಿಧಿಯ ಸಂಚಾಲಕ ದಿನೇಶ್ ಮಹಾರಾಜ್​, ಪೂಜೆಯಲ್ಲಿ ಪುರುಷ ಪುರೋಹಿತರಿಗೆ ಪ್ರಾಮುಖ್ಯತೆ ನೀಡುತ್ತಿದ್ದ ಕಾಲವೊಂದಿತ್ತು. ಆದರೆ ಇಂದು 21ನೇ ಶತಮಾನದಲ್ಲಿ ಹೆಣ್ಣು ಮಕ್ಕಳು ಯಾಗ ಮಾಡುತ್ತಿರುವ ಕಾರಣ ಅವರಿಂದಲೇ ಗಂಗಾ ಆರತಿ ನಡೆಯಲಿದೆ ಎಂದು ತಿಳಿಸಿದ್ದಾರೆ.

dev deepawli in kashi
ಯುವತಿಯರಿಗೆ ಮಹಾ ಗಂಗಾರತಿ ತರಬೇತಿ

ಪ್ರಧಾನ ಅರ್ಚಕರಾಗಿ ಆಯ್ಕೆಯಾಗಿರುವ ಹುಡುಗಿಯರಿಗೆ ಸಂದ ಗೌರವ ಇದಾಗಿದ್ದು, ಕಾಶಿಯಿಂದಲೇ ಮಹಿಳಾ ಸಬಲೀಕರಣದ ಸಂದೇಶ ಇಡೀ ಜಗತ್ತಿಗೆ ಹೋಗಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.