ಲಖನೌ(ಉತ್ತರ ಪ್ರದೇಶ): ಅಗ್ನಿವೀರ್ ಯೋಜನೆಯಡಿ ಸೇನೆಯಲ್ಲಿ ಮಹಿಳಾ ಸೇನಾ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಲಖನೌದ ಎಂಸಿ ಸೆಂಟರ್ ಕಾಲೇಜಿನಲ್ಲಿ ಉತ್ತರ ಪ್ರದೇಶದ 26 ಜಿಲ್ಲೆಗಳ ಮಹಿಳಾ ಅಭ್ಯರ್ಥಿಗಳು ಗುರುವಾರ ಮೈದಾನದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದರು. ಮೊದಲು ಮೈದಾನವನ್ನು ಒಂದು ಸುತ್ತು ಓಡಿ, ನಂತರ ಹೈ ಜಂಪ್ ಮತ್ತು ಲಾಂಗ್ ಜಂಪ್ ಮಾಡುವ ಮೂಲಕ ಸೇನೆಗೆ ದೈಹಿಕ ಪರೀಕ್ಷೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಉತ್ತರ ಪ್ರದೇಶದ ಲಖನೌ, ಬಾರಾಬಂಕಿ ಉನ್ನಾವೋ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಹಮೀರ್‌ಪುರ್, ಸೇರಿದಂತೆ ರಾಜ್ಯದ ಒಟ್ಟು 26 ಜಿಲ್ಲೆಗಳಿಂದ ಮಹಿಳಾ ಅಭ್ಯರ್ಥಿಗಳು ಗುರುವಾರ ಎಎಂಸಿ ಸೆಂಟರ್ ಕಾಲೇಜಿನ ಮೈದಾನಕ್ಕೆ ಆಗಮಿಸಿ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು. ಓಟ, ಲಾಂಗ್ ಜಂಪ್ ಮತ್ತು ಹೈಜಂಪ್ ಮಾಡುವ ಮೂಲಕ ಸೇನಾ ಪೊಲೀಸ್ ಆಗಿ ಸೇವೆ ಸಲ್ಲಿಸುವ ಕನಸನ್ನು ನನಸಾಗಿಸಲು ಒಂದು ಹೆಜ್ಜೆ ಮುಂದಿಟ್ಟರು.
ನಾಳೆ ಉತ್ತರಾಖಂಡ್ನಲ್ಲಿ ಜಾಥ: ಉತ್ತರಾಖಂಡ್ನ 14 ಜಿಲ್ಲೆಗಳ ಮಹಿಳಾ ಅಭ್ಯರ್ಥಿಗಳು ಶುಕ್ರವಾರ ಎಎಂಸಿ ಸೆಂಟರ್ ಕಾಲೇಜಿನಲ್ಲಿ ಅಗ್ನಿವೀರ್ ನೇಮಕಾತಿ ಯೋಜನೆಯಡಿ ಮಹಿಳಾ ಮಿಲಿಟರಿ ಪೊಲೀಸರ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: ಭಾರತದ ಜಿ20 ಅಧ್ಯಕ್ಷತೆ ಆರಂಭ: 100 ಸ್ಮಾರಕಗಳಿಗೆ ಝಗಮಗಿಸುವ ದೀಪಾಲಂಕಾರ