ಪಟಿಯಾಲ: ಪ್ರೀತಿಸಿ ಕೈಕೊಟ್ಟ ಯುವಕನ ವಿರುದ್ಧ 17ರ ಹುಡುಗಿ ಬಹು ಮಹಡಿ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಘಟನೆ ಸಾಯಿ ಮಾರುಕಟ್ಟೆ ಬಳಿಯ ಅಂಬಾಯಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಏನಿದು ಪ್ರಕರಣ: 17 ವರ್ಷದ ಹುಡುಗಿ ಇತರರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾಳೆ. ಈಕೆ ಯುವಕನೊಬ್ಬನನ್ನು ಪ್ರೀತಿಸಿದ್ದಳು. ಆದರೆ, ಆ ಯುವಕ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಮನನೊಂದ ಹುಡುಗಿ ನೇರ ಆರು ಅಂತಸ್ತಿನ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ.
ಓದಿ: ರಿಲ್ಯಾಕ್ಸ್ ಆಗಲು ಕೆರೆಗೆ ಹಾರುವ ವ್ಯಕ್ತಿ... ಈತ ಹಾರಿದ್ದು ಎಷ್ಟು ಬಾರಿ ಗೊತ್ತಾ?
ಇದನ್ನು ಗಮನಿಸಿದ ಕಟ್ಟಡದ ವಾಸಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅವರು ಅಗ್ನಿಶಾಮಕ ದಳದ ಸಿಬ್ಬಿಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಹುಡುಗಿಯ ಮನವೋಲಿಸಿ ಠಾಣೆಗೆ ಕರೆದೊಯ್ದರು. ಹುಡುಗಿ ನೀಡಿದ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.