ETV Bharat / bharat

'ಮಹಾದೇವ'ನೇ ಪ್ರಧಾನಿ ರಕ್ಷಿಸಿದನೆಂದ ಗಿರಿರಾಜ್​​ ಸಿಂಗ್​, ಪಂಜಾಬ್​​ನಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹ

ಪಂಜಾಬ್​​ನಲ್ಲಿ ಪ್ರಧಾನಿ ಮೋದಿ ಅವರು ಎದುರಿಸಿರುವ ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಸಚಿವ ಗಿರಿರಾಜ್​ ಸಿಂಗ್ ಈಟಿವಿ ಭಾರತ್​ ಜೊತೆ ಮಾತನಾಡಿದ್ದು, ಇದೊಂದು ಉದ್ದೇಶಪೂರ್ವಕ ಪಿತೂರಿ ಎಂದು ಹೇಳಿದ್ದಾರೆ.

author img

By

Published : Jan 7, 2022, 8:32 PM IST

Updated : Jan 7, 2022, 8:37 PM IST

PM Modi security breach
PM Modi security breach

ನವದೆಹಲಿ: ಪಂಜಾಬ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಿರುವ ಭದ್ರತಾ ಲೋಪ ಕೇವಲ ಕಾಕತಾಳೀಯವಲ್ಲ. ಇದು ಪ್ರಧಾನಿ ಅವರನ್ನು ಸಾವಿನ ದವಡೆಗೆ ಸಿಲುಕಿಸುವ ಉದ್ದೇಶ ಎಂದು ಕೇಂದ್ರ ಸಚಿವ ಗಿರಿರಾಜ್​ ಸಿಂಗ್​ ಹೇಳಿದ್ದಾರೆ.

'ಮಹಾದೇವ'ನೇ ಪ್ರಧಾನಿ ರಕ್ಷಿಸಿದನೆಂದ ಗಿರಿರಾಜ್​​ ಸಿಂಗ್​

ಈಟಿವಿ ಭಾರತ್ ಜೊತೆ ಮಾತನಾಡಿರುವ ಅವರು, ಮಹಾದೇವನ ಕೃಪೆಯಿಂದಲೇ ಮೋದಿಯವರು ರಕ್ಷಣೆಗೊಳಪಟ್ಟಿದ್ದು, ಡ್ರೋನ್​ ಅಥವಾ ಟೆಲಿಸ್ಕೋಪಿನಿಂದ ಪ್ರಧಾನಿಯನ್ನು ಕೊಲ್ಲಬಹುದಿತ್ತು ಎಂದು ಹೇಳಿದ್ದಾರೆ. ಸರಿಯಾದ ಹಾದಿಯಲ್ಲಿ ತನಿಖೆ ನಡೆದರೆ ಪಂಜಾಬ್​ ಮುಖ್ಯಮಂತ್ರಿ ಸೇರಿದಂತೆ ಅನೇಕ ಪ್ರಮುಖ ನಾಯಕರ ಹೆಸರುಗಳು ಈ ಪಿತೂರಿಯಿಂದ ಬಹಿರಂಗಗೊಳ್ಳಲಿವೆ ಎಂದರು.

ಪ್ರಧಾನಿ ಮೋದಿಯವರ ಭದ್ರತಾ ವೈಫಲ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪಂಜಾಬ್​ ಸರ್ಕಾರ ಮತ್ತು ಕಾಂಗ್ರೆಸ್ ​​​ಅನ್ನು ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದಿರುವ ಕೇಂದ್ರ ಸಚಿವರು, ಪಂಜಾಬ್​​ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆರು ವರ್ಷದ ಮಗನ ಕತ್ತು ಹಿಸುಕಿ ಕೊಲೆಗೈದು, ತಂದೆ ಆತ್ಮಹತ್ಯೆ

ಜನವರಿ 5ರಂದು ಪಂಜಾಬ್​ನ ಫಿರೋಜ್​ಪುರದ ಹುಸೇನಿವಾಲಾ ಬಳಿ ಪ್ರಧಾನಿ ನರೇಂದ್ರ ಮೋದಿ 15-20 ನಿಮಿಷಗಳ ಕಾಲ ಫ್ಲೈಓವರ್​​ ಬಳಿ ಭದ್ರತೆ ಇಲ್ಲದೇ ಸಿಲುಕಿಕೊಂಡಿದ್ದರು. ಈ ಪ್ರಕರಣ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರ ಗೃಹ ಸಚಿವಾಲಯದಿಂದ ತನಿಖೆಗೊಳಪಟ್ಟಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಪಂಜಾಬ್​ ಕಾಂಗ್ರೆಸ್​​ನಿಂದ ವರದಿ ಕೇಳಿದ್ದಾರೆ.

Last Updated : Jan 7, 2022, 8:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.