ETV Bharat / bharat

ಗಾಜಿಪುರ ಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು - ರೈತರ ಮಧ್ಯೆ ಗಲಭೆ: 200 ಮಂದಿ ವಿರುದ್ಧ ಕೇಸ್​!

ಗಾಜಿಪುರ ಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ರೈತರ ನಡುವೆ ಗಲಾಟೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಬಿಜೆಪಿ ರಾಜ್ಯ ಸಚಿವ ಅಮಿತ್ ವಾಲ್ಮೀಕಿ ಅವರ ಸ್ವಾಗತ ಕಾರ್ಯಕ್ರಮದಲ್ಲಿ ಕಪ್ಪು ಧ್ವಜ ಪ್ರದರ್ಶಿಸಿ, ಕಲ್ಲುಗಳನ್ನು ಎಸೆಯಲಾಗಿತ್ತು. ಈ ವೇಳೆ ಗಲಭೆ ಪ್ರಾರಂಭವಾಗಿತ್ತು ಎಂದು ತಿಳಿದು ಬಂದಿದೆ.

ಬಿಜೆಪಿ ಕಾರ್ಯಕರ್ತರು-ರೈತರ ಮಧ್ಯೆ ಗಲಭೆ
author img

By

Published : Jul 1, 2021, 6:44 AM IST

ನವದೆಹಲಿ/ಗಾಜಿಯಾಬಾದ್: ಗಾಜಿಪುರ ಗಡಿಯಲ್ಲಿ ಬುಧವಾರ ಬೆಳಿಗ್ಗೆ ಬಿಜೆಪಿ ಕಾರ್ಯಕರ್ತರು ಮತ್ತು ರೈತರ ನಡುವೆ ಗಲಭೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 200 ಜನರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಘಟನೆಯ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ, ಪೊಲೀಸರು ಈ ಘಟನೆಗೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು ಸೆರೆಹಿಡಿದಿದ್ದು, ವಿಡಿಯೋ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗುತ್ತಿದೆ. ಗಲಭೆಯಲ್ಲಿ ವಾಹನಗಳನ್ನು ಧ್ವಂಸಗೊಳಿಸಿದ್ದು, ಇದರ ವೀಡಿಯೊ ಸಹ ಸೆರೆಯಾಗಿದೆ. ಇನ್ನು ಘಟನೆ ಸಂಬಂಧ ಭಾರತೀಯ ಕಿಸಾನ್ ಒಕ್ಕೂಟದ ಕಾರ್ಯಕರ್ತರು ಕೌಶಂಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದನ್ನು ಓದಿ: SSB ಕಾರ್ಯಾಚರಣೆ: ಚೀನಿ ಡ್ರೋನ್​ ಕ್ಯಾಮೆರಾ ಹೊಂದಿದ್ದ ಮೂವರು ವಶಕ್ಕೆ!

ಇನ್ನು ಬಿಜೆಪಿ ರಾಜ್ಯ ಸಚಿವ ಅಮಿತ್ ವಾಲ್ಮೀಕಿಯವರ ಸ್ವಾಗತ ಕಾರ್ಯಕ್ರಮದಲ್ಲಿ ಕಪ್ಪು ಧ್ವಜ ಪ್ರದರ್ಶಿಸಿ, ಕಲ್ಲುಗಳನ್ನು ಎಸೆಯಲಾಗಿತ್ತು. ಈ ವೇಳೆ, ಗಲಭೆ ಪ್ರಾರಂಭವಾಗಿದೆ. ದಾಳಿ ನಡೆಸಿದವರು ನಮ್ಮವರಲ್ಲ ಎಂದು ರಾಕೇಶ್ ಟಿಕಾಯತ್​ ಹೇಳಿದರೆ, ಭಾರತೀಯ ಕಿಸಾನ್ ಒಕ್ಕೂಟದೊಂದಿಗೆ ಈ ಹಲ್ಲೆ ನಡೆಸಿದವರು ಸಂಬಂಧ ಹೊಂದಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಸದ್ಯ ಪೊಲೀಸರು 147, 148, 323, 352, 427 ಮತ್ತು 506 ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.