ETV Bharat / bharat

ಬಾಂಗ್ಲಾ ಪ್ರಧಾನಿ ಭೇಟಿ ಮಾಡಿದ ಗೌತಮ್‌ ಅದಾನಿ: ಭಾರತದ ಮೊದಲ ಬಹುರಾಷ್ಟ್ರೀಯ ವಿದ್ಯುತ್ ಯೋಜನೆಗೆ ಚಾಲನೆ

author img

By

Published : Jul 16, 2023, 11:48 AM IST

ನವೆಂಬರ್ 2017ರಲ್ಲಿ ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್​ ಜೊತೆಗೆ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ ವೂ ಅಲ್ಟ್ರಾ ಸೂಪರ್‌ಕ್ರಿಟಿಕಲ್ ಪವರ್ ಪ್ರಾಜೆಕ್ಟ್​​ (BPDB) 1,496 ಮೆಗಾವ್ಯಾಟ್ ದೀರ್ಘಾವಧಿ ವಿದ್ಯುತ್ ಪೂರೈಕೆ ಒಪ್ಪಂದ ಮಾಡಿಕೊಂಡಿತ್ತು.

Gautama Adani visited the Prime Minister of Bangladesh in Dhaka.
ಬಾಂಗ್ಲಾದೇಶದ ಪ್ರಧಾನಿ ಅವರನ್ನು ಢಾಕಾದಲ್ಲಿ ಗೌತಮ ಅದಾನಿ ಅವರು ಭೇಟಿ ಮಾಡಿದರು.

ಢಾಕಾ (ಬಾಂಗ್ಲಾದೇಶ): ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಶನಿವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾದಲ್ಲಿ ಭೇಟಿಯಾಗಿ, ಭಾರತದ ಮೊದಲ ಬಹುರಾಷ್ಟ್ರೀಯ ವಿದ್ಯುತ್ ಯೋಜನೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ 1,600 ಮೆಗಾವ್ಯಾಟ್ ಅಲ್ಟ್ರಾ ಸೂಪರ್ ಕ್ರಿಟಿಕಲ್ ಗೊಡ್ಡಾ ಪವರ್ ಪ್ಲಾಂಟ್‌ನ ಲೋಡ್ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿದರು.

1,600 ಮೆಗಾವ್ಯಾಟ್ ಅಲ್ಟ್ರಾ ಸೂಪರ್ ಕ್ರಿಟಿಕಲ್ ಗೊಡ್ಡಾ ಪವರ್ ಪ್ಲಾಂಟ್‌ ಪ್ರಾರಂಭ ಮತ್ತು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಕೋವಿಡ್ ಸಂದರ್ಭದಲ್ಲಿ ಮೂರುವರೆ ವರ್ಷಗಳ ಕಾಲ ಈ ಯೋಜನೆ ಯಶಸ್ವಿಯಾಗಲು ಶ್ರಮಿಸಿದ ಭಾರತ ಮತ್ತು ಬಾಂಗ್ಲಾದೇಶದ ತಂಡಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್‌ನಲ್ಲಿ ಅದಾನಿ ಬರೆದುಕೊಂಡಿದ್ದಾರೆ.

  • Honoured to have met Bangladesh PM Sheikh Hasina on full load commencement and handover of the 1600 MW Ultra Super Critical Godda Power Plant. I salute the dedicated teams from India and Bangladesh who braved Covid to commission the plant in record time of three-and-a-half years. pic.twitter.com/liwZTKlBDG

    — Gautam Adani (@gautam_adani) July 15, 2023 " class="align-text-top noRightClick twitterSection" data=" ">

Honoured to have met Bangladesh PM Sheikh Hasina on full load commencement and handover of the 1600 MW Ultra Super Critical Godda Power Plant. I salute the dedicated teams from India and Bangladesh who braved Covid to commission the plant in record time of three-and-a-half years. pic.twitter.com/liwZTKlBDG

— Gautam Adani (@gautam_adani) July 15, 2023

ಕಳೆದ ತಿಂಗಳ ಕೊನೆಯ ಅವಧಿಯಲ್ಲಿ ಅದಾನಿ ಪವರ್ 1,600 ಮೆಗಾವ್ಯಾಟ್ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆ ಶುರುಮಾಡಿದೆ. ಎಪಿಜೆಎಲ್​ ತನ್ನ ಎರಡನೇ ಘಟಕ 2x800 ಮೆಗಾ ವ್ಯಾಟ್ ವ್ಯಾಗೊಡ್ಡಾ ಅಲ್ಟ್ರಾ-ಸೂಪರ್ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್‌ನಿಂದ ವಿದ್ಯುತ್ ಪೂರೈಕೆ ವಾಣಿಜ್ಯ ಕಾರ್ಯಾಚರಣೆ (COD) ಯಶಸ್ವಿಯಾಗಿದೆ. ಗೊಡ್ಡಾ ವಿದ್ಯುತ್ ಸ್ಥಾವರದ ಎರಡನೇ ಘಟಕ ಕಾರ್ಯಾಚರಣೆ ಸೇರಿದಂತೆ ವಿಶ್ವಾಸಾರ್ಹತೆ ಪರೀಕ್ಷೆಯ ಕುರಿತಾಗಿ ಜೂನ್ 25ರಂದು BPDB ಮತ್ತು ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಬಾಂಗ್ಲಾದೇಶದ (PGCB) ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ಣಗೊಂಡಿತು.

ಏಪ್ರಿಲ್ 6ರಂದು 800 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರದ ಮೊದಲ ಘಟಕವು ತನ್ನ ಸಿಒಡಿ ಅನ್ನು ಸಾಧಿಸಿದೆ. ಗೊಡ್ಡಾ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯು ನೆರೆಯ ದೇಶದಲ್ಲಿ ಇಂಧನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅದಾನಿ ಗ್ರೂಪ್ ಹೇಳಿದೆ. ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್​ ನವೆಂಬರ್ 2017ರಲ್ಲಿ BPDBಯೊಂದಿಗೆ ಒಪ್ಪಂದ ಮಾಡಿಕೊಂಡಂತೆ ಪಿಪಿಎ ಅಡಿಯಲ್ಲಿ 2x800 ಮೆಗಾ ವ್ಯಾಟ್ ಗೊಡ್ಡಾ ಯುಎಸ್​ಸಿಟಿಪಿಪಿಯಿಂದ 1,496 ಮೆಗಾ ವ್ಯಾಟ್‌ ನಿವ್ವಳ ಸಾಮರ್ಥ್ಯದಡಿ ವಿದ್ಯುತ್ ಪೂರೈಸುತ್ತದೆ. ಬಾಂಗ್ಲಾದೇಶ ಗ್ರಿಡ್‌ಗೆ ಸಂಪರ್ಕವಿರುವ 400 ಕೆವಿ ಮೀಸಲಾಗಿರುವ ಪ್ರಸರಣ ವ್ಯವಸ್ಥೆಯ ಮೂಲಕ 25 ವರ್ಷಗಳ ಅವಧಿ ವಿದ್ಯುತ್ ಪೂರೈಕೆ ಒಪ್ಪಂದವಿದೆ ಎಂದು ಹೇಳಿಕೆ ನೀಡಿದೆ.

ಗೊಡ್ಡಾ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಪೂರೈಕೆಯು ಬಾಂಗ್ಲಾದೇಶದ ವಿದ್ಯುತ್ ಪರಿಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಪರಿವರ್ತನೆಯು ಬಾಂಗ್ಲಾದೇಶಕ್ಕೆ ಖರೀದಿಸಿದ ವಿದ್ಯುತ್‌ನ ಸರಾಸರಿ ವೆಚ್ಚ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅದಾನಿ, ಬಾಂಗ್ಲಾದೇಶದ ಪ್ರಧಾನಿಯನ್ನು ಭೇಟಿ ಮಾಡಿದ್ದರು.

ಇದನ್ನೂಓದಿ: Chandrayaan 3 Mission Update: ಚಂದ್ರಯಾನ 3 ಬಾಹ್ಯಾಕಾಶ ನೌಕೆ ಉತ್ತಮವಾಗಿದೆ ಎಂದ ಇಸ್ರೋ

ಢಾಕಾ (ಬಾಂಗ್ಲಾದೇಶ): ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಶನಿವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾದಲ್ಲಿ ಭೇಟಿಯಾಗಿ, ಭಾರತದ ಮೊದಲ ಬಹುರಾಷ್ಟ್ರೀಯ ವಿದ್ಯುತ್ ಯೋಜನೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ 1,600 ಮೆಗಾವ್ಯಾಟ್ ಅಲ್ಟ್ರಾ ಸೂಪರ್ ಕ್ರಿಟಿಕಲ್ ಗೊಡ್ಡಾ ಪವರ್ ಪ್ಲಾಂಟ್‌ನ ಲೋಡ್ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿದರು.

1,600 ಮೆಗಾವ್ಯಾಟ್ ಅಲ್ಟ್ರಾ ಸೂಪರ್ ಕ್ರಿಟಿಕಲ್ ಗೊಡ್ಡಾ ಪವರ್ ಪ್ಲಾಂಟ್‌ ಪ್ರಾರಂಭ ಮತ್ತು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಿದ್ದು ಸಂತಸ ತಂದಿದೆ. ಕೋವಿಡ್ ಸಂದರ್ಭದಲ್ಲಿ ಮೂರುವರೆ ವರ್ಷಗಳ ಕಾಲ ಈ ಯೋಜನೆ ಯಶಸ್ವಿಯಾಗಲು ಶ್ರಮಿಸಿದ ಭಾರತ ಮತ್ತು ಬಾಂಗ್ಲಾದೇಶದ ತಂಡಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್‌ನಲ್ಲಿ ಅದಾನಿ ಬರೆದುಕೊಂಡಿದ್ದಾರೆ.

  • Honoured to have met Bangladesh PM Sheikh Hasina on full load commencement and handover of the 1600 MW Ultra Super Critical Godda Power Plant. I salute the dedicated teams from India and Bangladesh who braved Covid to commission the plant in record time of three-and-a-half years. pic.twitter.com/liwZTKlBDG

    — Gautam Adani (@gautam_adani) July 15, 2023 " class="align-text-top noRightClick twitterSection" data=" ">

ಕಳೆದ ತಿಂಗಳ ಕೊನೆಯ ಅವಧಿಯಲ್ಲಿ ಅದಾನಿ ಪವರ್ 1,600 ಮೆಗಾವ್ಯಾಟ್ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆ ಶುರುಮಾಡಿದೆ. ಎಪಿಜೆಎಲ್​ ತನ್ನ ಎರಡನೇ ಘಟಕ 2x800 ಮೆಗಾ ವ್ಯಾಟ್ ವ್ಯಾಗೊಡ್ಡಾ ಅಲ್ಟ್ರಾ-ಸೂಪರ್ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್‌ನಿಂದ ವಿದ್ಯುತ್ ಪೂರೈಕೆ ವಾಣಿಜ್ಯ ಕಾರ್ಯಾಚರಣೆ (COD) ಯಶಸ್ವಿಯಾಗಿದೆ. ಗೊಡ್ಡಾ ವಿದ್ಯುತ್ ಸ್ಥಾವರದ ಎರಡನೇ ಘಟಕ ಕಾರ್ಯಾಚರಣೆ ಸೇರಿದಂತೆ ವಿಶ್ವಾಸಾರ್ಹತೆ ಪರೀಕ್ಷೆಯ ಕುರಿತಾಗಿ ಜೂನ್ 25ರಂದು BPDB ಮತ್ತು ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಬಾಂಗ್ಲಾದೇಶದ (PGCB) ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ಣಗೊಂಡಿತು.

ಏಪ್ರಿಲ್ 6ರಂದು 800 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರದ ಮೊದಲ ಘಟಕವು ತನ್ನ ಸಿಒಡಿ ಅನ್ನು ಸಾಧಿಸಿದೆ. ಗೊಡ್ಡಾ ಸ್ಥಾವರದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯು ನೆರೆಯ ದೇಶದಲ್ಲಿ ಇಂಧನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅದಾನಿ ಗ್ರೂಪ್ ಹೇಳಿದೆ. ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್​ ನವೆಂಬರ್ 2017ರಲ್ಲಿ BPDBಯೊಂದಿಗೆ ಒಪ್ಪಂದ ಮಾಡಿಕೊಂಡಂತೆ ಪಿಪಿಎ ಅಡಿಯಲ್ಲಿ 2x800 ಮೆಗಾ ವ್ಯಾಟ್ ಗೊಡ್ಡಾ ಯುಎಸ್​ಸಿಟಿಪಿಪಿಯಿಂದ 1,496 ಮೆಗಾ ವ್ಯಾಟ್‌ ನಿವ್ವಳ ಸಾಮರ್ಥ್ಯದಡಿ ವಿದ್ಯುತ್ ಪೂರೈಸುತ್ತದೆ. ಬಾಂಗ್ಲಾದೇಶ ಗ್ರಿಡ್‌ಗೆ ಸಂಪರ್ಕವಿರುವ 400 ಕೆವಿ ಮೀಸಲಾಗಿರುವ ಪ್ರಸರಣ ವ್ಯವಸ್ಥೆಯ ಮೂಲಕ 25 ವರ್ಷಗಳ ಅವಧಿ ವಿದ್ಯುತ್ ಪೂರೈಕೆ ಒಪ್ಪಂದವಿದೆ ಎಂದು ಹೇಳಿಕೆ ನೀಡಿದೆ.

ಗೊಡ್ಡಾ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಪೂರೈಕೆಯು ಬಾಂಗ್ಲಾದೇಶದ ವಿದ್ಯುತ್ ಪರಿಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಪರಿವರ್ತನೆಯು ಬಾಂಗ್ಲಾದೇಶಕ್ಕೆ ಖರೀದಿಸಿದ ವಿದ್ಯುತ್‌ನ ಸರಾಸರಿ ವೆಚ್ಚ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅದಾನಿ, ಬಾಂಗ್ಲಾದೇಶದ ಪ್ರಧಾನಿಯನ್ನು ಭೇಟಿ ಮಾಡಿದ್ದರು.

ಇದನ್ನೂಓದಿ: Chandrayaan 3 Mission Update: ಚಂದ್ರಯಾನ 3 ಬಾಹ್ಯಾಕಾಶ ನೌಕೆ ಉತ್ತಮವಾಗಿದೆ ಎಂದ ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.