ETV Bharat / bharat

ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್‌ ಸಹಾಯಕರ ಮನೆಗಳ ಮೇಲೆ ಇಡಿ ದಾಳಿ

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಬುಧವಾರ ಅತೀಕ್ ಅಹ್ಮದ್‌ನ ಆಪ್ತ ಸ್ನೇಹಿತರು, ಸಹಾಯಕರು ಹಾಗು ವಕೀಲರ ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ.

ed teams raid in prayagraj
ಇಡಿ ದಾಳಿ
author img

By

Published : Apr 12, 2023, 4:59 PM IST

ಪ್ರಯಾಗರಾಜ್ (ಉತ್ತರ ಪ್ರದೇಶ): ಒಂದೆಡೆ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್‌ನನ್ನು ಸಾಬರಮತಿ ಜೈಲಿನಿಂದ ಕರೆತರುತ್ತಿದ್ದರೆ, ಮತ್ತೊಂದೆಡೆ ಆತನ ಆಪ್ತರು ಮತ್ತು ಸಹಾಯಕರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಬಿಗಿ ಹಿಡಿತ ಸಾಧಿಸುತ್ತಿದೆ. ಬುಧವಾರ ಇಡಿಯ ಹಲವು ತಂಡಗಳು ಪ್ರಯಾಗರಾಜ್‌ನಲ್ಲಿ ಏಕಕಾಲದಲ್ಲಿ ದಾಳಿ ನಡೆಸಿವೆ. ಇದರೊಂದಿಗೆ ಲಕ್ನೋದಿಂದ ಬಂದ ತಂಡಗಳು ಅತೀಕ್ ಅವರ ಹತ್ತಿರದ ಸಂಬಂಧಿಗಳ ಮನೆಗಳನ್ನೂ ಶೋಧಿಸಿವೆ.

ಆಸ್ತಿ ಪತ್ತೆ ಶೋಧ: ಅತಿಕ್‌ಗೆ ಆರ್ಥಿಕವಾಗಿ ಸಹಾಯ ಮಾಡಿದ ಆರೋಪದ ಮೇಲೆ ಮತ್ತು ಮಾಫಿಯಾದ ಬೇನಾಮಿ ಆಸ್ತಿ ನೋಡಿಕೊಳ್ಳುವವರ ಮೇಲೆ ಇಡಿ ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಅನೇಕ ತನಿಖಾ ತಂಡಗಳು ಪ್ರಯಾಗರಾಜ್‌ನಲ್ಲಿ ಏಕಕಾಲದಲ್ಲಿ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸುತ್ತಿವೆ. ಇಡಿ ತಂಡ ಎಲ್ಲೆಲ್ಲಿ ದಾಳಿ ನಡೆಸುತ್ತಿದೆಯೋ, ಆ ಮನೆಗಳು ಮತ್ತು ಸಂಸ್ಥೆಗಳಲ್ಲಿ ತೆರಳಲು ಯಾರಿಗೂ ಅವಕಾಶವಿಲ್ಲ. ಅಲ್ಲದೇ ಕಟ್ಟಡದೊಳಗಿದ್ದವರ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅತೀಕ್‌ ಕಪ್ಪುಹಣದಿಂದ ಸಂಪಾದಿಸಿದ ಆಸ್ತಿಗಳನ್ನು ಪತ್ತೆ ಹಚ್ಚುವಲ್ಲಿ ಶೋಧ ಕಾರ್ಯ ನಡೆಸುತ್ತಿವೆ.

ಇಡಿ ತಂಡಗಳು ಅತೀಕ್‌ ಪರ ವಕೀಲರು ಮತ್ತು ಆಪ್ತ ಸ್ನೇಹಿತ ಜಾಫರ್ ಖಾಲಿದ್ ಸೇರಿದಂತೆ ಇತರ ಅನೇಕ ಜನರ ಮೇಲೆ ಕಣ್ಣಿಟ್ಟಿವೆ. ವಕೀಲ ಖಾನ್ ಸೌಲತ್ ಹನೀಫ್ ಮನೆಯನ್ನು ಶೋಧಿಸಲಾಗುತ್ತಿದೆ. ಹಲವು ಸದಸ್ಯರನ್ನು ವಿಚಾರಣೆ ನಡೆಸಿ, ಅತೀಕ್ ಅಹಮದ್​​ಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಮ್ಯಾನ್ಮಾರ್​ನಲ್ಲಿ ಸೇನೆಯಿಂದ ಹಳ್ಳಿ ಮೇಲೆ ವೈಮಾನಿಕ ಬಾಂಬ್​ ದಾಳಿ: 100ಕ್ಕೂ ಹೆಚ್ಚು ಜನರು ಬಲಿ

ಖಾನ್ ಸೌಲತ್ ಹನೀಫ್​ಗೆ ಜೀವಾವಧಿ ಶಿಕ್ಷೆ​: ಅತೀಕ್ ಅಹ್ಮದ್ ಜೊತೆಗೆ ಆತನ ವಕೀಲ ಖಾನ್ ಶೌಲತ್ ಹನೀಫ್‌ಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಮಾರ್ಚ್ 28 ರಂದು, ಪ್ರಯಾಗ್‌ರಾಜ್‌ನ ಎಂಪಿ-ಎಂಎಲ್‌ಎ ನ್ಯಾಯಾಲಯವು ಉಮೇಶ್ ಪಾಲ್ ಅವರ ಅಪಹರಣದಲ್ಲಿ ವಕೀಲ ಖಾನ್ ಸೌಲತ್ ಹನೀಫ್‌ರನ್ನು ದೋಷಿ ಎಂದು ಘೋಷಿಸಿತ್ತು. 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಖಾನ್ ಸೌಲತ್ ಹನೀಫ್‌ರನ್ನೂ ಜೈಲಿಗೆ ಕಳುಹಿಸಲಾಗಿದೆ. ಇದರೊಂದಿಗೆ ಅತೀಕ್ ಅಕೌಂಟೆಂಟ್ ಮನೆಯ ಮೇಲೂ ದಾಳಿಯಾಗಿದೆ.

ಇದನ್ನೂ ಓದಿ: ಡಿವೈಡರ್​ಗೆ ಗುದ್ದಿ ಪಲ್ಟಿಯಾದ ಬಸ್​.. 15 ಪ್ರಯಾಣಿಕರಿಗೆ ಗಾಯ: ಭೀಕರ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.