ETV Bharat / bharat

Delhi Gang Rape.. ದೆಹಲಿ ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಿಗಳಿಂದ ಮಹಿಳೆ ಮೇಲೆ ಗ್ಯಾಂಗ್ ರೇಪ್​

author img

By

Published : Jul 23, 2022, 12:16 PM IST

ದೆಹಲಿಯಲ್ಲಿ ಅಮಾನುಷ ಪ್ರಕರಣ- ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಮೇಲೆ ರೈಲ್ವೆ ನೌಕರರಿಂದ ಸಾಮೂಹಿಕ ಅತ್ಯಾಚಾರ- ಜುಲೈ 21 ರಂದು ನಡೆದಿರುವ ಕೃತ್ಯ ತಡವಾಗಿ ಬೆಳಕಿಗೆ

ದೆಹಲಿ ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಿಗಳಿಂದ ಮಹಿಳೆಯ ಮೇಲೆ ಗ್ಯಾಂಗ್ ರೇಪ್​

ನವದೆಹಲಿ: ರೈಲ್ವೆ ಉದ್ಯೋಗಿಯೊಬ್ಬ ಮಹಿಳೆಗೆ ಕೆಲಸ ಕೊಡಿಸುವ ನೆಪದಲ್ಲಿ ನಿಲ್ದಾಣಕ್ಕೆ ಕರೆದೊಯ್ದು ಸಹೋದ್ಯೋಗಿಗಳ ಜೊತೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯ ರೈಲು ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಿಲ್ದಾಣದ ಫ್ಲಾಟ್​ಫಾರ್ಮ್​ 8 -9 ರ ವಿದ್ಯುತ್​ ನಿರ್ವಹಣಾ ಕೊಠಡಿಯಲ್ಲಿ ಮಹಿಳೆಯ ಮೇಲೆ ಪೈಶಾಚಿಕ ಕೃತ್ಯ ಎಸಗಲಾಗಿದೆ. ಎಲ್ಲರೂ ಎಲೆಕ್ಟ್ರಿಕಲ್​ ವಿಭಾಗದಲ್ಲಿ ಕೆಲಸ ಮಾಡುವ ಉದ್ಯೋಗಿಗಳಾಗಿದ್ದಾರೆ. ಜುಲೈ 21 ರ ರಾತ್ರಿ ಈ ಘಟನೆ ನಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫರಿದಾಬಾದ್‌ನ ನಿವಾಸಿಯಾದ ಸಂತ್ರಸ್ತೆ ಅತ್ಯಾಚಾರಿಗಳಲ್ಲಿ ಒಬ್ಬರೊಂದಿಗೆ ಪರಿಚಯ ಹೊಂದಿದ್ದರು. ವರ್ಷಗಳಿಂದ ಪತಿಯಿಂದ ದೂರವಾಗಿರುವ ಮಹಿಳೆಗೆ ಕೆಲಸ ಕೊಡಿಸುವುದಾಗಿ ಆರೋಪಿ ಭರವಸೆ ನೀಡಿದ್ದರು. ಜು.21ರಂದು ಮಗನ ಹುಟ್ಟುಹಬ್ಬಕ್ಕೆಂದು ಆಕೆಯನ್ನು ಆಹ್ವಾನಿಸಿದ ಆರೋಪಿ, ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿನ ಉದ್ಯೋಗಿಗಳ ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ.

ಬಳಿಕ ಈ ವಿಷಯ ಯಾರಿಗೂ ಹೇಳದಂತೆ ಪ್ರಾಣ ಬೆದರಿಕೆ ಹಾಕಿ ಕಳುಹಿಸಿದ್ದಾರೆ. ಅವರೆಲ್ಲರೂ ಮದ್ಯದ ಅಮಲಿನಲ್ಲಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆಯೂ ತನಿಖೆಗೆ ಮುಂದಾಗಿದೆ.

ಓದಿ: ಏರ್​ಪೋರ್ಟ್​ನಲ್ಲಿ ಹಣೆಗೆ ಗುಂಡು ಹಾರಿಸಿಕೊಂಡು ಸಿಐಎಸ್​ಎಫ್ ಅಧಿಕಾರಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.