ETV Bharat / bharat

ಮಹಿಳೆ ಮೇಲೆ ಗ್ಯಾಂಗ್​ ರೇಪ್​ ಮಾಡಿ, ಮದ್ಯ ಕುಡಿಸಿದ ಕಿರಾತಕರು - ವಿವಾಹಿತ ಮಹಿಳೆಯನ್ನು ಗ್ಯಾಂಗ್​ ಅಪಹರಿಸಿ ರೇಪ್

ವಿವಾಹಿತ ಮಹಿಳೆಯನ್ನು ಗ್ಯಾಂಗ್​ ಅಪಹರಿಸಿ ರೇಪ್​ ಮಾಡಿದ್ದಲ್ಲದೇ ಮದ್ಯ ಕುಡಿಸಿ ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿದೆ.

gang-rape-of-a-married-woman-in-telangana
ವಿವಾಹಿತ ಮಹಿಳೆ ಮೇಲೆ ಗ್ಯಾಂಗ್​ ರೇಪ್​
author img

By

Published : Sep 25, 2022, 10:43 PM IST

ಹೈದರಾಬಾದ್: ಗಂಡನಿಂದ ದೂರವಾಗಿ ಒಂಟಿಯಾಗಿ ಬದುಕುತ್ತಿದ್ದ ಮಹಿಳೆಯನ್ನು ಅಜ್ಞಾತ ಸ್ಥಳಕ್ಕೆ ಕರೆತಂದು ಸಾಮೂಹಿಕ ಅತ್ಯಾಚಾರ ಮಾಡಿದ ಹೇಯ ಕೃತ್ಯ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ಯಾಂಗ್​ ರೇಪ್​ ಬಳಿಕ ಆಕೆಗೆ ಮದ್ಯ ಕುಡಿಸಿ ರಸ್ತೆ ಮೇಲೆಯೇ ಬಿಟ್ಟು ಕೀಚಕರು ಪರಾರಿಯಾಗಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸ್ಥಳೀಯರು ಕಂಡು, ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿವಾಹಿತ ಮಹಿಳೆಯನ್ನು ಯಾರೋ ಅಪರಿಚಿತ ವ್ಯಕ್ತಿಗಳು ಆಟೋದಲ್ಲಿ ಜಹೀರಾಬಾದ್‌ಗೆ ಕರೆತಂದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಗ್ಯಾಂಗ್​ ರೇಪ್​ ಬಳಿಕ ಆಕೆಗೆ ವಾಹನದಲ್ಲಿಯೇ ಮದ್ಯ ಸೇವನೆ ಮಾಡಿಸಿದ್ದಾರೆಯೇ ಅಥವಾ ಜಹೀರಾಬಾದ್ ಪ್ರದೇಶಕ್ಕೆ ಬಿಟ್ಟ ಬಳಿಕ ಕುಡಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಸಿಕಂದರಾಬಾದ್‌ನ ತಿರುಮಲಗಿರಿ ಲಾಲ್ ಬಜಾರ್ ಪ್ರದೇಶದ ಮಹಿಳೆ ಎಂದು ತಿಳಿದುಬಂದಿದೆ. ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಪತಿಯಿಂದ ದೂರವಾಗಿ ಬದುಕುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು ಮಹಿಳೆಯನ್ನು ಸದ್ಯ ಸಂಗಾರೆಡ್ಡಿಯಲ್ಲಿರುವ ಸಖಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಗ್ಯಾಂಗ್ ರೇಪ್ ಘಟನೆಯನ್ನು ಪೊಲೀಸರು ಗೌಪ್ಯವಾಗಿ ತನಿಖೆ ನಡೆಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಓದಿ: 12ರ ಬಾಲಕನೊಂದಿಗೆ ನಾಲ್ವರಿಂದ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.