ಜೈಪುರ: ಉದ್ಯಮಿಯೊಬ್ಬರ ಕುಟುಂಬವನ್ನು ಒತ್ತೆಯಾಳಾಗಿರಿಸಿಕೊಂಡು ನೇಪಾಳಿ ಮೂಲದ ಮನೆಗೆಲಸದ ಗ್ಯಾಂಗ್ವೊಂದು ಮನೆಯ ಪ್ರತಿ ಕೊಠಡಿಯಲ್ಲಿನ ಸಾಮಗ್ರಿಗಳನ್ನು ಚದುರಿಸಿ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದೆ. ಸೋಮವಾರ ರಾತ್ರಿ 8 ಗಂಟೆಯಿಂದ 11 ಗಂಟೆಯವರೆಗೆ ಮಾಲೀಕರ ಕುಟುಂಬವನ್ನು ಒತ್ತೆಯಾಳಾಗಿರಿಸಿಕೊಂಡು ಕೃತ್ಯ ನಡೆಸಿದ್ದಾರೆ ಎಂಬುದು ತಿಳಿದುಬಂದಿದೆ.
ನೇಪಾಳಿ ಮನೆಗೆಲಸದವರಿಂದ ದುಷ್ಕೃತ್ಯ: ಕರ್ಣಿ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ದ್ರೋಣಪುರಿ ಕಾಲೋನಿಯಲ್ಲಿರುವ ಉದ್ಯಮಿ ಮೈಥಿಲಿಶರಣ್ ಅವರ ಮನೆಯಲ್ಲಿ ದರೋಡೆ ನಡೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಿಚಾ ತೋಮರ್ ತಿಳಿಸಿದ್ದಾರೆ. ಮನೆಯಲ್ಲಿ ವಾಸವಿದ್ದ ನೇಪಾಳ ಮೂಲದ 5 ಜನ ಮನೆಗೆಲಸದವರು, ಮೂವರು ಮಹಿಳೆಯರು ಸೇರಿದಂತೆ ಅವರ ಇತರ ಸಹಚರರು ದರೋಡೆ ಎಸಗಿದ್ದಾರೆ. ಆಯುಧಗಳೊಂದಿಗೆ ಸಂತ್ರಸ್ತೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಒಂದೂವರೆ ವರ್ಷದ ಅಮಾಯಕ ಮಗು ಸೇರಿದಂತೆ ಸೇರಿದಂತೆ ಕುಟುಂಬದ ಐವರನ್ನು ಒತ್ತೆಯಾಳಾಗಿಸಿ ಸುತ್ತಿಗೆ ಮತ್ತು ದೊಣ್ಣೆಗಳಿಂದ ಹೊಡೆದು ಗಾಯಗೊಳಿಸಿದ್ದಾರೆ.
ಮನೆ ಮಾಲೀಕನ ಕ್ರೆಟಾದಲ್ಲಿ ಪರಾರಿ!: ಇದಾದ ಬಳಿಕ ದುಷ್ಕರ್ಮಿಗಳು ಮನೆಯ ಪ್ರತಿಯೊಂದು ಕೋಣೆಯನ್ನು ಶೋಧಿಸಿ ಚಿನ್ನ, ಬೆಳ್ಳಿ, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತನ ಕ್ರೆಟಾ ಕಾರಿನಲ್ಲಿ ಪರಾರಿಯಾಗಿದ್ದಾರೆ. ಘಟನೆ ಕುರಿತು ತಡರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದಾಗ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಜೋಧಪುರ್ನಲ್ಲಿ ಧ್ವಜ ವಿಚಾರವಾಗಿ ಗುಂಪು ಘರ್ಷಣೆ, ಶಾಸಕರ ಮನೆ ಬಳಿ ಬೈಕ್ಗೆ ಬೆಂಕಿ: ಇಂಟರ್ನೆಟ್ ಸ್ಥಗಿತ