ETV Bharat / bharat

ರಾಜಸ್ತಾನದ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್ ​: ಕಾಂಗ್ರೆಸ್​ ಭವಿಷ್ಯ - ಮುಂದಿನ ಚುನಾವಣೆಯಲ್ಲಿ ಶೇಖಾವತ್​ ಸಿಎಂ ಸಾಧ್ಯತೆ

ರಾಜಸ್ತಾನದ 2023ರ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾಂಗ್ರೆಸ್​ ನಾಯಕ ಗೋವಿಂದ್​ ಸಿಂಗ್ ದೋತಸ್ರಾ ಭವಿಷ್ಯ ನುಡಿದಿದ್ದಾರೆ..

gajendra singh shekhawat
ಗಜೇಂದ್ರ ಸಿಂಗ್​ ಶೇಖಾವತ್
author img

By

Published : Dec 6, 2021, 4:27 PM IST

Updated : Dec 6, 2021, 4:57 PM IST

ಜೈಪುರ(ರಾಜಸ್ತಾನ) : ರಾಜಸ್ತಾನದ 2023ರ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾಂಗ್ರೆಸ್​ ನಾಯಕ ಗೋವಿಂದ್​ ಸಿಂಗ್ ದೋತಸ್ರಾ ಭವಿಷ್ಯ ನುಡಿದಿದ್ದಾರೆ.

ಸೋಮವಾರ ಇಲ್ಲಿ ಮಾತನಾಡಿದ ಅವರು, ಗೃಹ ಸಚಿವ ಅಮಿತ್​ ಶಾ ಅವರ ಇತ್ತೀಚಿನ ರಾಜ್ಯ ಭೇಟಿಯ ಘಟನಾವಳಿಗಳನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್​ ನಾಯಕ ದೋತಸ್ರಾ, ಅಮಿತ್​ ಶಾ ಅವರು ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರನ್ನು ನಿರ್ಲಕ್ಷಿಸಿರುವುದು ಶೇಖಾವತ್​ ಸಿಎಂ ಅಭ್ಯರ್ಥಿ ಎಂಬುದನ್ನು ಸೂಚಿಸುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ: BJP ಜೊತೆ ಮೈತ್ರಿಯೊಂದಿಗೆ ಪಂಜಾಬ್​​​ ಚುನಾವಣೆಯಲ್ಲಿ ಸ್ಪರ್ಧೆ.. ಗೆಲ್ಲುವುದೇ ನಮ್ಮ ಗುರಿ ಎಂದ ಅಮರೀಂದರ್​​

ಜೈಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರೈತ ನಾಯಕ, ಬಾರ್ಮರ್​ ಬಿಜೆಪಿ ಸಂಸದ ಕೈಲಾಶ್​ ಚೌಧರಿ, ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್​ ಪೂನಿಯಾ ಮತ್ತು ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾಗೆ ಮಾತನಾಡಲು ಅವಕಾಶ ನೀಡಿಲ್ಲ.

ಇಂತಹ ನಾಯಕರಿಗೇ ಸಮಾರಂಭದಲ್ಲಿ ಮಾನ್ಯತೆ ಇಲ್ಲ ಎಂದ ಮೇಲೆ ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಮುಂದಿನ ಸಿಎಂ ಅಭ್ಯರ್ಥಿ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

Last Updated : Dec 6, 2021, 4:57 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.